ಜ.೨೩ರಿಂದ ೩೦ರ ತನಕ ರೆಂಜಾಳ ಶ್ರೀ ಶಾಸ್ತಾವು ದೇವಾಲಯದಲ್ಲಿ ಜಾತ್ರೋತ್ಸವದ ಸಂಭ್ರಮ

Advt_Headding_Middle
Advt_Headding_Middle

ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರೋತ್ಸವ ಮತ್ತು ಶಿವರಾತ್ರಿ ಉತ್ಸವ ಹಾಗೂ ಲಕ್ಷ ಬಿಲ್ವಾರ್ಚನೆಯು ಜ.೨೩ರಿಂದ ಜ.೩೧ರ ತನಕ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವಲ್ಲಿ ನಡೆಯಲಿದೆ. ಜ.೨೩ರಂದು ಜಾತ್ರೋತ್ಸವದ ಮುಹೂರ್ತ ಗೊನೆ ಕಡಿಯುವುದು. ನಂತರ ದಿನಗಳಲ್ಲಿ ಮಹಾಪೂಜೆ, ಶನಿಪೂಜೆ, ರಂಗಪೂಜೆ, ಸಾರ್ವಜನಿಕರಿಂದ ಆಶ್ಲೇಷ ಬಲಿ ಪೂಜೆ ಹಾಗೂ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಹಾಗೂ ಜಾತ್ರೆಯ ಕೊನಯ ದಿನವಾದ ಜ.೩೦ ಹಾಗೂ ೩೧ರಂದು ಗಣಪತಿ ಹವನ, ಬಿಂಬ ಶುದ್ಧಿ, ಕಲಶಪೂಜೆ, ಬಿಂಬ ಶುದ್ಧಿ ಕಲಶಾಬೀಷಕ, ಸಾನಿಧ್ಯ ಕಲಶ ಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಅನ್ನಪ್ರಸಾದ, ರಾತ್ರಿ ಪೂಜೆ, ಭೂತಬಲಿ, ಸೇವಾಬಲಿ, ಹಾಗೂ ಉಷಾಃ ಪೂಜೆ, ಗಣಪತಿ ಹೋಮ, ಕಲಶ ಪೂಜೆ ನಡೆಯಲಿದೆ. ಹಾಗೂ ಶಿವರಾತ್ರಿ ಉತ್ಸವದ ಪ್ರಯುಕ್ತ ಫೆ.೧೩ರಂದು ಉಷಾಃ ಪೂಜೆ, ಲಕ್ಷ ಬಿಲ್ವಾರ್ಚನೆಯ ಭಕ್ತರಿಗೆ ಸಂಕಲ್ಪ ಕಾರ್ಯಕ್ರಮ, ಗಣಪತಿ ಹವನ, ಮಹಾಪೂಜೆ, ಅರ್ಧ ಏಕಾಹ ಭಜನೆ ದೀಪಾರಾಧನೆ, ಸಾರ್ವಜನಿಕ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಜಾತ್ರೋತ್ಸವದ ಹಾಗೂ ಸಭಾಭವನ ನಿರ್ಮಾಣಕ್ಕೆ ಉದಾರ ದೇಣಿಗಳನ್ನು ನೀಡಬೇಕಾಗಿ ದೇವಾಲಯದ ಆಡಳಿತ ಮಂಡಳಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.