ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಜ.೧೯ರಿಂದ ೨೧ರವರೆಗೆ ನಡೆಯಿತು. ಜ. ೧೯ರಂದು ಮೊಗ್ರ ದೊಡ್ಡಮನೆಯಲ್ಲಿ ಶ್ರೀ ದೇವರಿಗೆ ಸಮಾರಾಧನೆ ನಡೆದು, ರಾತ್ರಿ ಮಲ್ಕಜೆ ಮಾಳಿಗೆಯಿಂದ ಭಂಡಾರ ಹೊರಟು, ಜ.೨೦ರಂದು ಬೆಳಗ್ಗೆ ಶ್ರೀ ಉಳ್ಳಾಕುಲು ನೇಮ, ಶ್ರೀ ಕುಮಾರ ನೇಮ ನಡೆಯಿತು. ಸಂಜೆ ಉಳ್ಳಾಕುಲು ಭಂಡಾರ ಹೊರಟು, ಶ್ರೀ ಪುರುಷ ದೈವದ ನೇಮ, ಶ್ರೀರುದ್ರಚಾಮುಂಡಿ ನೇಮ, ಶ್ರೀ ಮಲೆ ಚಾಮುಂಡಿ ನೇಮ ನಡೆಯಿತು.
ಜ.೨೧ರಂದು ಬೆಳಗ್ಗೆ ಶ್ರೀ ಭೈರಜ್ಜಿ ನೇಮ ನಡೆಯಿತು.
ಬೈರಜ್ಜಿಗೆ ವಿಶೇಷ ಹರಕೆಯಾಗಿ ಅನೇಕರು ಸೀರೆ ಅರ್ಪಿಸಿದರು. ಬೈರಜ್ಜಿ ನೇಮ ಸಂದರ್ಭದಲ್ಲಿ ಶಾಸಕ ಎಸ್.ಅಂಗಾರ ಸಹಿತ ಅನೇಕರು ಭಾಗವಹಿಸಿ ದೈವದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಎಂ.ಎನ್.ವೆಂಕಟ್ರಮಣ ಮೊಗ್ರ, ಕಾರ್ಯಪ್ಪ ಗೌಡ ಚಿಕ್ಮುಳಿ, ಕಾರ್ಯನಿರ್ವಹಣಾ ಮೊಕ್ತೇಸರರಾದ ತೀರ್ಥರಾಮ ಗೌಡ ಕಮಿಲ, ಜಯಪ್ರಸಾದ ಮಕ್ಕಿ, ಹೆಬ್ಬಾರರಾದ ಕೇಶವ ಗೌಡ ಬಳ್ಳಕ್ಕ, ಎಂ.ಜಿ.ಸತ್ಯನಾರಾಯಣ ಭಟ್, ಉಮೇಶ್ ಗೌಡ ಮಕ್ಕಿ, ದೊಡ್ಡಣ್ಣ ಗೌಡ ಚಿಕ್ಮುಳಿ, ಸೀತಾರಾಮ ಗೌಡ ಚಿಕ್ಮುಳಿ, ರಾಮಕೃಷ್ಣ ಗೌಡ ಚಿಕ್ಮುಳಿ ಮೊದಲಾದವರು ಉಪಸ್ಥಿತರಿದ್ದರು. ಜ. ೨೦ರಂದು ಮಧ್ಯಾಹ್ನ ಪ್ರತಿವರ್ಷದಂತೆ ಈ ವರ್ಷವೂ ದೊಡ್ಡಣ್ಣ ಗೌಡ ಚಿಕ್ಮುಳಿ ಮತ್ತು ಜೇಸೀ ದೇವಿಪ್ರಸಾದ್ ಚಿಕ್ಮುಳಿ ಮನೆಯವರಿಂದ ಮಹಾಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.