ಪಂಜ ಪರಿಸರದ ಅನೇಕ ಕಡೆಗಳಲ್ಲಿ ಹುಚ್ಚು ನಾಯಿ ರೋಗನಿರೋಧಕ ಲಸಿಕೆ-ಸಾಕು ಪ್ರಾಣಿಗಳ ಆರೋಗ್ಯ ಕಾಳಜಿ ಅಗತ್ಯ-ಡಾ.ಬಿ.ಕೆ.ಸೂರ್ಯನಾರಾಯಣ ಭಟ್

Advt_Headding_Middle
Advt_Headding_Middle

‘ಮನಷ್ಯರು ಮಾತ್ರ ಆರೋಗ್ಯ ಕಾಪಾಡುವ ಮುಂಜಾಗ್ರತೆ ವಹಿಸಿದರೆ ಸಾಲದು.ಸಾಕು ಪ್ರಾಣಿಗಳಿಂದ ಹರಡುವ ಅನೇಕ ಕಾಯಿಲೆಗಳ ಬಗ್ಗೆ ಅರಿವು ಇರ ಬೇಕು.ಪ್ರಾಣಿಗಳಿಂದ ಪ್ರಾಣಿಗಳಿಗೆ ಗಾಳಿಯ ಮೂಲಕವೂ ಅನೇಕ ಕಾಯಿಲೆಗಳು ಹರಡುತ್ತಿವೆ. ಆದರಿಂದ ಆ ಬಗ್ಗೆ ಕಾಳಜಿ ವಹಿಸಿ ಮುಂಚಿತವಾಗಿಯೇ ಲಸಿಕೆಗಳ ನೀಡ ಬೇಕು.’ ಸುಳ್ಯ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ಸೂರ್ಯನಾರಾಯಣ ಭಟ್ ಹೇಳಿದರು ಅವರುಜ.೨೧.ರಂದು ಜೇಸಿಐ ಪಂಜ ಪಂಚಶ್ರೀ , ಪಶು ಸಂಗೋಪನಾ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನದಿಂದ ಮಾತನಾಡಿದರು. ಜೇಸಿ ವಲಯ ೧೫ರ ಉಪಾಧ್ಯಕ್ಷ ರವಿ ಕಕ್ಕೆಪದವು ಉದ್ಘಾಟಿಸಿ ಶುಭ ಹಾರೈಸಿದರು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಗುರುಪ್ರಸಾದ್ ತೋಟ ಅಧ್ಯಕ್ಷತೆ ವಹಿಸಿದ್ದರು. ನಿಂತಿಕಲ್ಲು ವರ್ಷ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ಬಾಲಕೃಷ್ಣ ರೈ ಪಾದೆಕಲ್ಲು ಅತಿಥಿಯಾಗಿದ್ದರು. ವಲಯ ಹದಿನೈದರ ಟ್ರೈನಿಂಗ್ ಬ್ರಿಗೇಡಿಯರ್ ತೀರ್ಥಾನಂದ ಕೊಡೆಂಕಿರಿ, ಕಾರ್ಯಕ್ರಮ ನಿರ್ದೇಶಕ ಪ್ರವೀಣ್ ಕಾಯರ, ಕಾರ್ಯದರ್ಶಿ ಜೀವನ್ ಮಲ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿದಾನಂದ ಕುಳ ವೇದಿಕೆಗೆ ಆಹ್ವಾನಿಸಿದರು.ಲೋಹಿತ್ ಎಣ್ಣೆಮಜಲು ಜೇಸಿ ವಾಣಿ ನುಡಿದರು. ಗುರುಪ್ರಸಾದ್ ತೋಟ ಸ್ವಾಗತಿಸಿದರು. ಜೀವನ್ ಮಲ್ಕಜೆ ವಂದಿಸಿದರು.ಬಳಿಕ ಜೇಸಿ ಸದಸ್ಯರ ಅನೇಕ ತಂಡಗಳನ್ನು ರಚಿಸಿ ವೈದ್ಯರೊಂದಿಗೆ ಪಂಜ ಪರಿಸರದ ಸುಮಾರು ೯೧ ಸ್ಥಳಗಳಲ್ಲಿ ನಿಗದಿ ಪಡಿಸಿದ ಸಮಯದಲ್ಲಿ ಹುಚ್ಚು ನಾಯಿ ರೋಗನಿರೋಧಕ ಲಸಿಕಾ ಕಾರ‍್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.