ಕೊಲ್ಲಮೊಗ್ರ : ಕೆರೆಗೆ ಬಿದ್ದು ಮಹಿಳೆ ಮೃತ್ಯು

Advt_Headding_Middle
Advt_Headding_Middle

ತೋಟಕ್ಕೆ ಹೋಗಿದ್ದ ಮಹಿಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತ ಪಟ್ಟ ಘಟನೆ ಜ.೨೦.ರಂದು ಕೊಲ್ಲಮೊಗ್ರ ದಿಂದ ವರದಿಯಾಗಿದೆ. ಕೊಲ್ಲಮೊಗ್ರ ದೋಲನಮನೆ (ಕಡಂಬಳ ನಿವಾಸಿ) ದಿ.ಕುಶಾಲಪ್ಪ ಗೌಡರ ಪತ್ನಿ ರಾಮಕ್ಕ (೫೬ವ) ಮೃತ ಪಟ್ಟವರು. ರಾಮಕ್ಕ ರವರ ಪುತ್ರ ವಿಜಯಕುಮಾರ್ ಶ್ರೀ ಕ್ಷೇ.ಧ.ಗ್ರಾ.ಯೋ.ಸಂಘದ ಸದಸ್ಯನಾಗಿದ್ದು ಜ.೨೦ ರಂದು ಗುಂಪಿನ ಕೆಲಸಕ್ಕೆ ಸಮೀಪದ ಮನೆಗೆ ಹೋಗಿದ್ದರು. ವಿಜಯರ ಪತ್ನಿ ವೀಣಾ ಮಗಳನ್ನು ಅಂಗನವಾಡಿಗೆ ಕಳುಹಿಸಲು ಹೋಗಿದ್ದರು. ವೀಣಾ ಅವರು ಮಗೆ ಮರಳಿದಾಗ ರಾಮಕ್ಕರು ಮನೆಯಲ್ಲಿ ಕಾಣಿಸಲಿಲ್ಲ.ಬಳಿಕ ತೋಟದಲ್ಲಿ ಹುಡಕಾಟ ನಡೆಸಿದಾಗ ಕೆರೆಯಲ್ಲಿ ಶವವಾಗಿ ಪತ್ತೆಯಾದರು.ತೋಟದ ಕೆಲಸಕ್ಕೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕೆರೆ ಬಿದ್ದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು ಪ್ರಕರಣ ದಾಖಲಿಸಿದ್ದಾರೆ. ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವವನ್ನು ಮನೆಯವರಿಗೆ ಹಸ್ತಾಂತರಿಸಿದರು.ಮೃತರು ಪುತ್ರ,ಸೊಸೆ.ಮೊಮ್ಮಗಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.