ಕಂದಡ್ಕ ಸೇತುವೆ ಬಳಿಯ ರಸ್ತೆಯುದ್ದಕ್ಕೂ ತುಂಬಿ ತುಳುಕುತ್ತಿರುವ ಕಸದ ರಾಶಿ

Advt_Headding_Middle

ರಸ್ತೆಯುದ್ದಕ್ಕೂ ರಾಶಿ, ರಾಶಿಯಾಗಿ ಬಿದ್ದ ತಾಜ್ಯಗಳು, ಇಟ್ಟಿಗೆ, ಹಂಚಿನ ಚೂರುಗಳು, ಬಟ್ಟೆ, ಹಳೇ ಹಾಸಿಗೆ, ಪಾಸ್ಟಿಕ್ ವಸ್ತುಗಳು. ಇದು ಕಂದಡ್ಕ ಸೇತುವೆ ಬಳಿ ಇರುವ ಕೆ.ಎಫ್‌.ಡಿ.ಸಿ. ತಮಿಳು ಕಾರ್ಮಿಕರ ವಸತಿ ಗೃಹಗಳ ಪಕ್ಕದ ರಸ್ತೆಯ ದೃಶ್ಯವಿದು. ಹೌದು ಈ ರಸ್ತೆಯನ್ನು ಒಂದು ಸಲ ನೋಡಿ ಇಲ್ಲಿ ಒಂದೇ ಒಂದು ಕಸದ ತೊಟ್ಟಿ ಕಾಣುತ್ತಿಲ್ಲ. ರಸ್ತೆ ಉದ್ದಕ್ಕೂ ಕಸದ ರಾಶಿಗಳೇ ಕಾಣುತ್ತಿದೆ. ಇಲ್ಲಿಯ ಜನರಿಗೆ ರಸ್ತೆಯ ಬದಿಯೇ ಕಸದ ತೊಟ್ಟಿಯಾಗಿದೆ. ಈ ಕಸವಿರುವ ರಸ್ತೆಯ ಮೂಲಕ ಸಾಗಿಯೇ ನಮ್ಮ ಶಾಸಕರ ಮನೆಗೆ ಹೋಗಬೇಕು ಪ್ರತಿದಿನ ಈ ರಸ್ತೆಯಿಂದಾಗಿ ಸಾಗುವ ಅವರು ಒಮ್ಮೆ ಕಾರು ನಿಲ್ಲಿಸಿ ಕಸ ಮುಕ್ತಗೊಳಿಸುವ ಪ್ರಕ್ರಿಯೆಗೆ ಸ್ಥಳೀಯರನ್ನು ಸಿದ್ಧಗೊಳಿಸಿದರೆ ಪರಿಸರ ಸ್ವಚ್ಛವಾದೀತು.

ರಸ್ತೆಯಲ್ಲಿ ಬೇಕಾಬಿಟ್ಟಿ ಕಸ ಎಸೆಯುವವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ದಂಡ ವಿಧಿಸಿ ಎಚ್ಚರಿಕೆ ನೀಡಬೇಕು ಆಗ ಪರಿಸ್ಥಿತಿ ಸುಧಾರಿಸುತ್ತದೆ: ಸ್ಥಳೀಯರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.