ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕ ಶಾಲೆಯಲ್ಲಿ ಸಂಭ್ರಮ ಮತ್ತು ಸನ್ಮಾನ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle

ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕ ಶಾಲೆಯಲ್ಲಿ ೨೦೧೭ – ೨೦೧೮ ನೇ ವರ್ಷದ ಸಂಭ್ರಮಾಚರಣೆಯು ಜ. ೨೦ರಂದು ವಿಜೃಂಭಣೆಯಿಂದ ಜರುಗಿತು. ಸಭಾಧ್ಯಕ್ಷತೆಯನ್ನು ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷರಾದ ರುಕ್ಮಯ್ಯ ದಾಸ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೆ.ವಿ.ಜಿ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷರಾದ ಕೆ.ವಿ ಚಿದಾನಂದ, ಕುಂಟಾರು ಶ್ರೀ ವಾಸುದೇವ ತಂತ್ರಿಗಳು, ಚೆಂಬು ಗ್ರಾ.ಪಂ. ಮಾಜಿ ಅಧ್ಯಕ್ಷ ನಡುಬೆಟ್ಟು ಕೃಷ್ಣಪ್ಪ, ರಾಮಕುಂಜೇಶ್ವರ ಶಾಲೆಯ ಮುಖ್ಯಗುರು ನಾರಾಯಣ್ ಭಟ್, ರಾಮಕುಂಜೇಶ್ವರ ಶಾಲೆಯ ಪ್ರಾದ್ಯಾಪಕರು, ಲೀಲಾವತಿ ರುಕ್ಮಯ್ಯ ದಾಸ್, ಬಿ.ಓ ಕೆಂಪಲಿಂಗಪ್ಪ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಹೊಸೂರು, ಕಾರ್ಯದರ್ಶಿ ಅಬುಸಾಲಿ, ಉಪಪ್ರಾಂಶುಪಾಲೆ ಅನುಸೂಯ, ಪ್ರಧಾನ ಕಾರ್ಯದರ್ಶಿ ಕಿಶೋರ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್, ಕೃಷ್ಣರಾಜ್, ಚಿತ್ರಾಲೇಖ ಕಾರ್ಯಕ್ರಮ ನಿರೂಪಿಸಿದರು. ಈ ಸಭಾ ಕಾರ್ಯಕ್ರಮದಲ್ಲಿ ಶೋಭಾ ಚಿದಾನಂದ್, ಕಲ್ಲುಗುಂಡಿ ಸೊಸೈಟಿ ಅಧ್ಯಕ್ಷ ಸೋಮಶೇಖರ್ ಕೊಂಗಾಜೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಉಮ್ಮರ್ ಗೂನಡ್ಕ, ಡಾ. ಲೀಲಾಧರ್ ಮೊದಲಾದವರು ಉಪಸ್ಥಿತರಿದ್ದರು.
ಬಿ.ಸಿ ರೈ ಪ್ರಶಸ್ತಿ ಪುರಸ್ಕೃತರು ಡಾ.ಕೆ.ವಿ ಚಿದಾನಂದ್ ಮತ್ತು ಶೋಭಾ ಚಿದಾನಂದ ದಂಪತಿಗಳಿಗೆ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ವಾಸುದೇವ ತಂತ್ರಿಗಳು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ರುಕ್ಮಯ್ಯದಾಸ್ ದಂಪತಿಗಳನ್ನು ಕೂಡ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸ್ಕೂಲ್(ಮೈಂಡ್) ಮ್ಯಾಗಜೀನ್ ಮತ್ತು ಸಿ.ಡಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮಕಕ್ಕೆ ಮೆರುಗು ನೀಡಿದ ಜಾಯಿಂಟ್ ವೀಲ್, ಕೆ.ವಿ.ಜಿ ಆರ್ಯವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯವರ ಸ್ಟಾಲ್, ಎಸ್.ಎಲ್.ವಿ ಬುಕ್ ಏಜೆನ್ಸಿ ಮೈಸೂರು ಇದರ ವತಿಯಿಂದ ಬುಕ್ ಸ್ಟಾಲ್ ಹಾಗೂ ಮತ್ತಿತ್ತರ ಸ್ಟಾಲ್‌ಗಳು ಮತ್ತು ಬಂಧವರಿಗೆ ಲಘು ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.