ಅಲೆಟ್ಟಿಗ್ರಾಮದ ಅರಂಬೂರು ಧರ್ಮಾರಣ್ಯದಲ್ಲಿ ಪ್ರತಿಷ್ಠೆಗೊಳಲಿರುವ ನಾಗನಕಲ್ಲು ಜ.೨೧ರಂದು ಶ್ರೀಮೂಕಾಂಬಿಕಾ ಭಜನಾ ಮಂದಿರ ಅರಂಬೂರಿಗೆ ತರಲಾಗಿ ಅಲ್ಲಿಂದ ಮೆರವಣಿಗೆಯಲ್ಲಿ ಧರ್ಮಾರಣ್ಯಕ್ಕೆ ತರಲಾಯಿತು.
ಮೆರವಣಿಗೆಯನ್ನು ಜಗದೀಶ್ ಸರಳಕುಂಜರವರು ಶಂಖ ಊದುವುದರೊಂದಿಗೆ ಉದ್ಘಾಟಿಸಿದರು. ಮೂಕಾಂಬಿಕಾ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ವಿವಿಧ ಮಹಿಳಾ ಸಂಘದವರಿಂದ ಪೂರ್ಣಕುಂಭಾ ಸ್ವಾಗತ, ಭಾರಧ್ವಜ ಆಶ್ರಮದ ವತಿಯಿಂದ ವೇದಾಪಾರಾಯಣ ಕಾರ್ಯಕ್ರಮದೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಊರಿನ ಸಮಸ್ತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.