ಕೊಲ್ಲಮೊಗ್ರ : ಕೊಚ್ಚಿಲ ದೇವಸ್ಥಾನ ದ್ರವ್ಯ ಕಲಶಾಭಿಷೇಕ ಮಹೋತ್ಸವ ಆರಂಭ

Advt_Headding_Middle
Advt_Headding_Middle


ಕೊಲ್ಲಮೊಗ್ರು ಗ್ರಾಮದ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ದ್ರವ್ಯ ಕಲಶಾಭಿಷೇಕ ಮಹೋತ್ಸವವು ಜ.೨೧ ರಂದು ಆರಂಭಗೊಂಡಿದೆ. ದ್ರವ್ಯ ಕಲಶಾಭಿಷೇಕ ಕಾರ್ಯಕ್ರಮ ನಡೆಸಿಕೊಡಲು ಆಗಮಿಸಿದ ದೇವಳದ ತಂತ್ರಿ ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಇವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಪಂಚಗವ್ಯ, ಪುಣ್ಯಾಹ, ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ ಪ್ರಾಸಾದಶುದ್ಧಿ, ಅಸ್ತ್ರಕಲಶಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಕಲಶಪೂಜೆ, ವಾಸ್ತುಹೋಮ, ವಾಸ್ತು ಬಲಿ, ವಾಸ್ತುಪುಣ್ಯಾಹ ನಡೆದಿದ್ದು ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟ, ಸದಸ್ಯರುಗಳಾದ ಬೊಳಿಯಪ್ಪ ಪೈಕ, ಮಣಿಕಂಠ ಕೊಳಗೆ, ಪುರುಷೋತ್ತಮ ಅಂಬೆಕಲ್ಲು, ಮೋನಪ್ಪ ಕೊಳಗೆ, ಚಂದ್ರಶೇಖರ ಕೊಪ್ಪಡ್ಕ, ಚಿತ್ರಾವತಿ ದಿನೇಶ್ ಕುಮಾರ್ ಮಡ್ತಿಲ, ಸವಿತ ನಾರಾಯಣ ಬಟ್ಟೋಡಿ, ದೇವಸ್ಥಾನದ ಅರ್ಚಕ ಎ.ಆರ್ ಕೃಷ್ಣಮೂರ್ತಿ ಊರ ಪ್ರಮುಖರು, ಬೈಲುವಾರು ಸಮಿತಿ ಪದಾಧಿಕಾರಿಗಳು, ನೂರಾರು ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು. ಜ. ೨೩ ಮಂಗಳವಾರದಂದು ಶ್ರೀ ದೇವರಿಗೆ ದ್ರವ್ಯ ಕಲಶಾಭಿಷೇಕದೊಂದಿಗೆ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.