ಕೇರ್ಪಡ ಕೂಡುಕಟ್ಟು ಶಿರಾಡಿ ರಾಜನ್ ದೈವಸ್ಥಾನದಲ್ಲಿ ಸಮಾಲೋಚನಾ ಸಭೆ

Advt_Headding_Middle
Advt_Headding_Middle


ಎಡಮಂಗಲ ಗ್ರಾಮದ ಕೆರ್ಪಡ ಕೂಡುಕಟ್ಟು ಶಿರಾಡಿ ರಾಜನ್ ದೈವಸ್ಥಾನ ಬೊಳ್ಕಜೆ ಸ್ಥಾನವು ಕಳೆದ ವರ್ಷ ಫೆ.ಯಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವವು ಅದ್ಧೂರಿಯಾಗಿ ನಡೆದಿರುತ್ತದೆ. ಫೆ.೨ ರಂದು ಪ್ರಧಾನ ದೈವದ ಬಿಂಬ ಪ್ರತಿಷ್ಠೆಯು ಕೆಮಿಂಜೆ ಶ್ರೀನಾಗೇಶತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಫೆ. ೮,೯,೧೦ ರಂದು ಬೊಳ್ಕಜೆ ಸ್ಥಾನ ಛಾವಡಿಯಲ್ಲಿ ದೊಂಪಬಲಿ, ಉತ್ಸವ ನೇಮೋತ್ಸವ ಹಾಗೂ ದೇವರ ಮಜಲಿನಲ್ಲಿ ವಿಜೃಂಭಣೆಯಿಂದ ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವವು ನಡೆಯಲಿದೆ.

ಈ ಪ್ರಯುಕ್ತ ಜ.೨೧ರಂದು ಸಮಿತಿ ಅಧ್ಯಕ್ಷ ಎಂಜೀರ್ ಪದ್ಮನಾಭ ರೈ ಹಾಗೂ ಪ್ರಧಾನ ಕಾರ್ಯದರ್ಶಿ ಸಾಯಿ ಪ್ರಸಾದ್ ಬೊಳ್ಕಜೆಯವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಊರು ಗೌಡರಾದ ಚೆನ್ನಪ್ಪ ಗೌಡ, ಬೊಳ್ಕಜೆ ಸ್ಥಾನ ಛಾವಡಿಯ ಉಸ್ತುವಾರಿ ಸದಸ್ಯ ಚಂದ್ರಶೇಖರ ಬೊಳ್ಕಜೆ, ಸದಸ್ಯರಾದ ಜಯಂತ ನಾಗನಕಜೆ, ಸೀತಾರಾಮಗೌಡ ನಾಗನಕಜೆ, ಸುಂದರ ಗೌಡ ಕರಿಂಬಿಲ, ಕೋಶಾಧಿಕಾರಿ ಅವಿನಾಶ್ ದೇವರ ಮಜಲು, ಶಿವಾನಂದ ನಾಗನ ಮಜಲು, ಬಾಲಕೃಷ್ಣ ಗೌಡ ನಾಗನಕಜೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.