ಸುಬ್ರಹ್ಮಣ್ಯ: ಕೆ.ಎಸ್.ಎಸ್. ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ತಿಲಕ್ ಎ.ಎ. ನಿವೃತ್ತಿ

Advt_Headding_Middle
Advt_Headding_Middle

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎ.ಎ. ತಿಲಕ್‌ರವರು ಜ. ೩೧ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ. ಕೊಡಗು ಜಿಲ್ಲೆಯ ಚೈಯಂಡಾಣೆ ಗ್ರಾಮದಲ್ಲಿ ೧೯೫೮ರ ಜ. ೬ರಂದು ಜನಿಸಿದ ತಿಲಕ್‌ರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚೈಯಂಡಾಣೆಯಲ್ಲಿಯೇ ಪೂರೈಸಿ, ಮಾದಪುರದ ಶ್ರೀಮತಿ ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಮುಗಿಸಿ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸವನ್ನು ಮಾಡಿದರು. ೧೯೮೨ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿಯನ್ನು ಪೂರೈಸಿ ಕುಶಾಲನಗರ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು.

೧೯೮೩ರಲ್ಲಿ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಂತರ ೧೯೮೪ರಲ್ಲಿ ಸುಳ್ಯದ ಎನ್.ಎಂ.ಸಿ.ಯಲ್ಲಿ ವಾರ್ಡನ್ ಮತ್ತು ಉಪನ್ಯಾಸಕರಾಗಿ ದುಡಿದು ೧೯೮೫ರಲ್ಲಿ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಪೂರ್ಣಕಾಲಿಕ ಉಪನ್ಯಾಸಕರಾಗಿ ಸೇರಿಕೊಂಡರು. ೨೦೦೪ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದು ಕಾಲೇಜಿನ ಮೊದಲ ಎಂ.ಫಿಲ್ ಪದವಿ ಪಡೆದ ಉಪನ್ಯಾಸಕರಾಗಿದ್ದಾರೆ. ನಂತರ ೨೦೦೭ರಲ್ಲಿ ಆಂದ್ರಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆಯಲು ಪ್ರವೇಶ ಪಡೆದು ೨೦೧೭ರಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದರು.

ಕಾಲೇಜಿನ ರಾಷ್ಟ್ರೀಯ ಸೇವಾ ಜೋಜನಾ ಘಟಕದ ಯೋಜನಾಧಿಕಾರಿಯಾಗಿ ಬಾಳುಗೋಡು, ಕೊಲ್ಲಮೊಗ್ರು, ಕೊಂಬಾರು ಮತ್ತು ಮರ್ಕಂಜಗಳಲ್ಲಿ ವಾರ್ಷಿಕ ವಿಶೇಷ ಶಿಬಿರಗಳನ್ನು ನಡೆಸಿದ್ದರು. ಸುಬ್ರಹ್ಮಣ್ಯ ಕುಮಾರಧಾರ ಜೇಸಿಯ ಅಧ್ಯಕ್ಷಾರಾಗಿ, ಸಾಕ್ಷರತಾ ಆಂದೋಲನದ ಸಂಪನ್ಮೂಲ ವ್ಯಕ್ತಯಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳಲ್ಲಿ ಅಣಬೆ ಬೇಸಾಯ, ಜೇನು ಕೃಷಿ, ಫಿನೈಲ್ ತಯಾರಿ, ಮೇಣದ ಬತ್ತಿ ತಯಾರಿಕೆ ಬಗ್ಗೆ ತರಬೇತಿಯನ್ನು ನೀಡಿದ್ದರು. ರೇಕಿ ಚಿಕಿತ್ಸೆ, ಪ್ರಾಣಿಕ್ ಹೀಲಿಂಗ್, ಸುದರ್ಶನ ಕ್ರಿಯೆ, ಅಕ್ಯುಪ್ರೆಶರ್, ಸ್ವಮೂತ್ರ ಚಿಕಿತ್ಸೆ ಮೊದಲಾದವುಗಳ ಬಗ್ಗೆ ಆಳವಾದ eನವನ್ನು ಹೊಂದಿದ್ದರಲ್ಲದೆ ಹಲವಾರು ಜನರಿಗೆ ರೇಕಿ ಚಿಕಿತ್ಸೆಯನ್ನು ಉಚಿತವಾಗಿ ನೀಡಿರುತ್ತಾರೆ. ಚಿತ್ರದುರ್ಗದ ಮಲ್ಲಾಡಿ ರಾಘವೇಂದ್ರ ಸ್ವಾಮಿಗಳ ಆಶ್ರಮದಲ್ಲಿ ಯೋಗ ತರಬೇತಿಯನ್ನು ಪಡೆದಿದ್ದರಲ್ಲದೆ ೧೯೯೮ರಲ್ಲಿ ಕನ್ಯಾಕುಮಾರಿಯ ವಿವೇಕಾನಂದ ಯೋಗ ಕೇಂದ್ರದಲ್ಲಿ ಯೋಗ ತರಬೇತಿ ಪಡೆದಿದ್ದರು.

ಇವರು ಬರೆದ ಅಂತರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸು ಎಂಬ ಪುಸ್ತಕ ದ್ವಿತೀಯ ಬಿಕಾಂ ಪದವಿಗೆ ಮತ್ತು ಪರಿಸರ ಅರ್ಥಶಾಸ್ತ್ರ ಎಂಬ ಪುಸ್ತಕ ತೃತೀಯ ಬ.ಎ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ ಮಂಗಳೂರು ವಿಶ್ವವಿದ್ಯಾನಿಲಂಯದಿಂದ ಪ್ರಕಟಗೊಂಡಿದೆ. ಇವರು ೨೦೧೧ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಅರ್ಥಶಾಸ್ತ್ರ ಸಮ್ಮೇಳನದಲ್ಲಿ ಭಾಗವಿಸಿದ್ದಲ್ಲದೆ ೨೦೧೩ರಲ್ಲಿ ಶ್ರೀಲಂಕಾದಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಿರುತ್ತಾರೆ.

ಡಾ. ತಿಲಕ್‌ರವರ ಪತ್ನಿ ಶ್ರೀಮತಿ ಗಾಯತ್ರಿಯವರು ಯೇನೆಕಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳಾದ ಶ್ರೀಮತಿ ಶ್ವೇತಾ ಎ.ಟಿ. ಎಂ.ಬಿ.ಎ. ಪದವಿ ಪಡೆದು ಬೆಂಗಳೂರಿನ ಕೋಟ್ಸ್ ಇಂಡಿಯಾ ಕಂಪೆನಿಯಲ್ಲಿ ಹೆಚ್.ಆರ್. ಬ್ಯುಸಿನೆಸ್ ಪಾರ್ಟ್‌ನರ್ ಆಗಿ ಸೇವೆ ಸಲ್ಲಿಸಿ ಮುಂಬೈಯಲ್ಲಿ ವಿಜಯಾ ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್ ಆಗಿರುವ ಪತಿ ಶಿವಪ್ರಸಾದ್ ಜೊತೆ ವಾಸವಾಗಿದ್ದಾರೆ. ಶ್ರೀಮತಿ ಸ್ಮಿತಾ ಎ.ಟಿ.ಯವರು ಎಂ.ವಿ.ಎಸ್.ಸಿ. ಪದವೀದರಾಗಿದ್ದು ಬೆಂಗಳೂರಿನಲ್ಲಿ ಪಶು ವಿeನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಅಕಾಶ್ ಇನ್‌ಫೊಸಿಸ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಇನ್ನೊರ್ವ ಪುತ್ರಿ ಶಿವಾನಿ ಎ.ಟಿ.ಯವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ. ಪದವಿ ಪಡೆದು ಚೆನ್ನೈಯ ಸಿಂಟೆಲ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.