ಕಟ್ಟಿಗೆಗೆ ತೆರಳಿದ್ದ ಮಹಿಳೆ ಮೇಲೆ ಮರ ಬಿದ್ದು ಸಾವು

Advt_Headding_Middle
Advt_Headding_Middle

ಕೃಷಿ ಭೂಮಿ ಪಕ್ಕದ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸುತ್ತಿದ್ದ ಮಹಿಳೆ ಮೇಲೆ ಮರ ಉರುಳಿ ಬಿದ್ದು ಮೃತಪಟ್ಟ ಘಟನೆ ಬಾಳುಗೋಡಿನಲ್ಲಿ ನಡೆದಿದೆ. ತೋಟದ ಮೂಲೆ ರತ್ನಾವತಿ ಮೃತ ದುರ್ದೈವಿ.
ಇಲ್ಲಿನ ನಿವಾಸಿ ಲಕ್ಷ್ಮಣ ಎಂಬವರ ಪತ್ನಿ ಮಂಗಳವಾರ ತೋಟಕ್ಕೆ ಹೊಂದಿಕೊಂಡ ಜಾಗದಲ್ಲಿ ಒಣ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪತಿ ಅವರು ಬಾಳುಗೋಡು ಪೇಟೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದು ಘಟನೆ ವೇಳೆ ಅಂಗಡಿಯಲ್ಲಿದ್ದರು. ಮಕ್ಕಳು ಶಾಲೆ ಹಾಗೂ ಖಾಸಗಿ ಕೆಲಸದ ನಿಮಿತ್ತ ತೆರಳಿದ್ದರು. ಸಂಜೆ ಮಕ್ಕಳು ಮನೆಗೆ ವಾಪಸ್ಸಾದ ವೇಳೆ ತಾಯಿ ಇಲ್ಲದ್ದನ್ನು ಗಮನಿಸಿದ ಅವರು ತಂದೆಗೆ ಹಾಗೂ ಅಕ್ಕಪಕ್ಕದ ಮನೆಯವರು ಪರಿಸರದಲ್ಲಿ ಹುಡುಕಾಟ ನಡೆಸಿದ ವೇಳೆ ಮನೆ ಪಕ್ಕದ ಕಾಡಿನಲ್ಲಿ ಮೃತದೇಹ ಕಂಡು ಬಂದಿದೆ. ಬಬ್ಬರೇ ಕಟ್ಟಿಗೆ ಸಂಗ್ರಹಕ್ಕೆಂದು ತೆರಳಿ ಕಟ್ಟಿಗೆ ಸಂಗ್ರಹದಲ್ಲಿ ನಿರತರಾಗಿದ್ದ ಅವರ ಮೇಲೆ ಅವರಿದ್ದ ಸ್ಥಳದ ಪಕ್ಕದಲ್ಲಿ ಬಾಗಿದ್ದ ಮರ ಉರುಳಿ ಬಿದ್ದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಘಟನೆ ಮಧ್ಯಾಹ್ನದ ವೇಳೆಗೆ ಸಂಭವಿಸಿರುವ ಸಾಧ್ಯತೆ ಇದ್ದು ಘಟನೆ ಸಂಜೆ ವೇಳೆ ಬೆಳಕಿಗೆ ಬಂದಿದೆ. ಮೃತರು ಪತಿ ಹಾಗೂ ಪುತ್ರ, ಮೂರು ಮಂದಿ ಪುತ್ರಿಯನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.