Breaking News

ಹೆಚ್ಚಿದ ಇಂಧನ ಬೆಲೆ: ಪೆಟ್ರೋಲ್ ಲೀ.ಗೆ ೮೦ರೂ.

Advt_Headding_Middle
Advt_Headding_Middle

ಇತ್ತೀಚಿನ ದಿನಗಳಲ್ಲಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಲಿದೆ. ಇದರ ಜೊತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಸಹ ದುಬಾರಿಯಾಗುತ್ತಿವೆ. ಸದ್ಯಕ್ಕಂತೂ ಇವುಗಳ ಬೆಲೆ ಇಳಿಮುಖವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂಬೈನಲ್ಲಿ ಮಂಗಳವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೮೦.೨೫ರೂ ಆಗುವುದರ ಮೂಲಕ ಇತಿಹಾಸ ಸೃಷ್ಟಿಸಿದೆ. ತೈಲ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು ಡೀಸೆಲ್ ಬೆಲೆ ಲೀಟರ್‌ಗೆ ೬೭.೩೦ರೂ ಏರುವುದರ ಮೂಲಕ ಹೊಸ ದಾಖಲೆ ಬರೆದಿದೆ. ಚೆನ್ನೈ ಮತ್ತು ಕೊಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ೭೫ರೂ ಗಡಿ ದಾಟಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ೭೨.೩೮ರೂ ಆಗಿದ್ದು, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ೭೫.೦೬ರೂ ಆಗಿದ್ದು, ಕೊಲ್ಕತ್ತದಲ್ಲಿ ೭೫.೦೯ರೂ ಏರಿಕೆಯಾಗಿದೆ. ಮುಂಬೈನಲ್ಲಿ ೨೦೧೪ರ ಅಗಸ್ಟ್‌ನ ಬಳಿಕ ನಿನ್ನೆ ಪೆಟ್ರೋಲ್ ಬೆಲೆ ೮೦ರೂ. ಗಡಿ ದಾಟಿತ್ತು. ಇಂದು ಮತ್ತೆ ೧೫ಪೈಸೆ ಜಾಸ್ತಿಯಾಗಿದೆ. ೨೦೧೭ರ ಡಿಸೆಂಬರ್‌ನಿಂದ ತೈಲ ದರ ಏರುತ್ತಿದ್ದು, ಜನ ಸಾಮಾನ್ಯರು ತತ್ತರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.