Breaking News

ಕಲ್ಕೂರರಿಂದ ಕನ್ನಡ ವಿರೋಧಿ ಹೇಳಿಕೆ; ರಾಜೀನಾಮೆಗೆ ಲೇಖಕರ ಒತ್ತಾಯ

Advt_Headding_Middle
Advt_Headding_Middle

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರರವರು ದುಗ್ಗಲಡ್ಕದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿರೋಧಿ ಹೇಳಿಕೆ ನೀಡಿದ್ದು, ಇದಕ್ಕಾಗಿ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರೂ ಆಗಿರುವ ಮೂವರು ಲೇಖಕರು ಆಗ್ರಹಿಸಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೇಖಕರಾದ ತೇಜಕುಮಾರ್ ಬಡ್ಡಡ್ಕ, ಎ.ಕೆ.ಹಿಮಕರ ಹಾಗೂ ವಿದ್ಯಾಧರ ಬಡ್ಡಡ್ಕ ಈ ವಿಷಯ ತಿಳಿಸಿದರು.

ಕಲ್ಕೂರ ಅವರು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ “ಸರಕಾರಿ ಶಾಲೆಗಳು ಮಕ್ಕಳನ್ನು ಕಳುಹಿಸಲು ಯೋಗ್ಯವಾಗಿಲ್ಲ” ಎಂದು ತನ್ನ ಭಾಷಣದಲ್ಲಿ ಹೇಳಿರುವುದು ಅತ್ಯಂತ ಖಂಡನೀಯ. ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸ್ಥಳ ನೀಡಿ ಅವಕಾಶ ನೀಡಿದ್ದ ದುಗಲಡ್ಕ ಸರಕಾರಿ ಶಾಲಾ ಅಂಗಳದಲ್ಲೇ ನಿಂತು ಈ ರೀತಿ ತೆಗಳುವುದಾದರೆ ಅದನ್ನು ಧಿಕ್ಕರಿಸಿ ಖಂಡಿಸುವುದು ನಮ್ಮ ಕರ್ತವ್ಯ. ಅಲ್ಲದೆ ಅದೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕನ್ನಡದ ಹೋರಾಟಗಾರ ಮುಖ್ಯಮಂತ್ರಿ ಚಂದ್ರು ಅವರು ದ.ಕ.ಜಿಲ್ಲಾ ಕ.ಸಾ.ಪ.ವನ್ನು ಟಾಯ್ಲೆಟ್ ಗುಂಡಿ ಎಂದು ಹೋಲಿಸಿರುವುದು ಸರಿಯಾಗಿಯೇ ಇದೆ, ನಾವು ಅವರನ್ನು ಅಭಿನಂದಿಸುತ್ತೇವೆ. ಸರಕಾರಿ ಶಾಲೆಗಳು ಕನ್ನಡ ಶಾಲೆಗಳಾಗಿಯೇ ಇದ್ದು, ನಾಡಿನ ಪ್ರತಿಭಾವಂತರನ್ನು ಸೃಷ್ಟಿಸಿದ ಸಂಸ್ಥೆಗಳಾಗಿವೆ. ಒಂದು ವೇಳೆ ಯಾವುದಾದರೂ ಸರಕಾರಿ ಶಾಲೆಯಲ್ಲಿ ಕೊರತೆಗಳಿದ್ದಲ್ಲಿ ಅದನ್ನು ಸರಿಪಡಿಸುವುದು ನಮ್ಮೆಲ್ಲರ ಕರ್ತವ್ಯ. ಹೊರತಾಗಿ ನಮ್ಮದೇ ಹೆಮ್ಮೆಯ ಶಾಲೆಗಳನ್ನು ಅವಮಾನಿಸುವುದು, ಅಲ್ಲಿಯ ಮಕ್ಕಳು ಮತ್ತು ಶಿಕ್ಷಕರನ್ನು ನಿಂದಿಸುವುದನ್ನು ಎಲ್ಲರೂ ಸಾರ್ವತ್ರಿಕವಾಗಿ ಖಂಡಿಸಬೇಕು. ಪರಿಷತ್ತಿಗೆ ಅಂಟಿಕೊಂಡು ಸರಕಾರದ ಅನುದಾನಗಳನ್ನೂ ಅನುಭೋಗಿಸುತ್ತಿರುವ ಕಲ್ಕೂರ ತಕ್ಷಣ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.