ಫೆ.೪ರಂದು ಸುಳ್ಯದಲ್ಲಿ ರೋಟರಿ ಸಮುದಾಯ ದಳ ಜಿಲ್ಲಾ ಸಮಾವೇಶ

Advt_Headding_Middle
Advt_Headding_Middle

ರೋಟರಿ ಸಮುದಾಯ ದಳದ ಜಿಲ್ಲಾ ಸಮಾವೇಶ “ಅಮರ” ಫೆ.೪ರಂದು ಸುಳ್ಯ ರೋಟರಿ ಕ್ಲಬ್ ಅತಿಥ್ಯದಲ್ಲಿ ರಥಬೀದಿಯಲ್ಲಿರುವ ರೋಟರಿ ಸಮುದಾಯಭವನದಲ್ಲಿ ನಡೆಯಲಿದೆ. ರೋಟರಿ ಕ್ಲಬ್ ಅಧ್ಯಕ್ಷ ಜಿತೇಂದ್ರ ಎನ್.ಎ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 

ಸಮಾವೇಶವನ್ನು ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ್ ಚೆಂಗಪ್ಪ ಉದ್ಘಾಟಿಸುವರು. ರೋಟರಿ ಸಮುದಾಯ ದಳದ ಜಿಲ್ಲಾ ಪ್ರತಿನಿಧಿ ಸಿ.ಹೆಚ್.ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸಲಿದ್ದು, ನಿಯೋಜಿತ ಗವರ್ನರ್ ರೋಹಿನಾಥ್, ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ, ಸಹಾಯಕ ಗವರ್ನರ್ ವಿಶ್ವಾಸ್ ಶೆಣೈ ಅತಿಥಿಗಳಾಗಿರುವರು.
ಬಳಿಕ ಗ್ರಾಮೀಣ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆಗಾಗಿ ಸಂಘ ಸಂಸ್ಥೆಗಳು ಎಂಬ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ. ಪ್ರಭಾಕರ ಶಿಶಿಲ ಹಾಗೂ ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ಬದುಕಿನ ಸವಾಲುಗಳು ಕುರಿತಾಗಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಉಪನ್ಯಾಸ ನೀಡುವರು. ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ರೋಟರಿ ಸಮುದಾಯ ದಳದ ಜಿಲ್ಲಾ ಮುಖ್ಯಸ್ಥ ರಾಮಕೃಷ್ಣ ಮಲ್ಲಾರ ಸಮಾರೋಪ ಭಾಷಣ ಮಾಡಲಿದ್ದು, ಜಿತೇಂದ್ರ ಎನ್.ಎ.ಅಧ್ಯಕ್ಷತೆ ವಹಿಸುವರು. ನಿಯೋಜಿತ ಗವರ್ನರ್ ಮ್ಯಾಥ್ಯೂ ಜೋಸೆಫ್, ನ.ಪಂ.ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ಜೋನಲ್ ಲೆಪ್ಟಿನೆಂಟ್ ಗಿರಿಜಾಶಂಕರ ಟಿ. ಮುಖ್ಯಅತಿಥಿಗಳಾಗಿರುವರು.
ಸಮಾವೇಶದಲ್ಲಿ ಸುಮಾರು ೨೦೦ ಪ್ರತಿನಿಧಿಗಳು ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ೪ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿಕಲಚೇತನರಿಗೆ ಗಾಲಿಕುರ್ಚಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ರೋಟರಿ ಸಮುದಾಯ ದಳ ಜಿಲ್ಲಾ ಸಮಾವೇಶ ಅಮಿತಿ ಅಧ್ಯಕ್ಷ ಗಣೇಶ್ ಭಟ್, ರೋಟರಿ ಸಮುದಾಯದಳದ ಚಯರ್‌ಮೇನ್ ಎಸ್.ಎನ್.ಬಾಪೂ ಸಾಹೇಬ್, ಅರಂಬೂರು ರೋಟರಿ ಸಮುದಾಯ ದಳದ ಅಧ್ಯಕ್ಷ ಸಿಎಚ್.ಪ್ರಭಾಕರನ್ ನಾಯರ್, ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಪುರುಷೋತ್ತಮ ಕೆ.ಜಿ., ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅಶೋಕ ಸರಳಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.