Breaking News

ಅನ್ಸಾರ್ ಸುವರ್ಣ ಸಂಭ್ರಮ, ಸಾಂಸ್ಕ್ರತಿಕ ಸಮ್ಮೇಳನ ಅಪ್ರೀಕಾ ಸಂಜಾತ ಬರಕಾತಿಯವರಿಂದ ಬುರ್ದಾ ಮಜ್ಲೀಸ್

Advt_Headding_Middle
Advt_Headding_Middle

ಅನ್ಸಾರುಲ್ ಮುಸ್ಲಿಮೀನ್ ಇದರ ಸುವರ್ಣ ಸಂಭ್ರಮದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮ ಜ. ೨೨ ರಂದು ಗಾಂದಿನಗರದ ಮುನ್ವವಿರಲ್ ಇಸ್ಲಾಂ ಮದರಸ ವಠಾರ ಖತೀಬ್ ಹಾಜಿ ವೇದಿಕೆಯಲ್ಲಿನಡೆಯಿತು. ಕಾರ್ಯಕ್ರಮವನ್ನು ಹಝ್ರತ್ ಪಾಝಿಲ್‌ರಝ್ವಿ ಕಾವಳ ಕಟ್ಟೆ ಉದ್ಘಾಟಿಸಿದರು.

ಗಾಂದಿನಗರ ಜುಮಾಮಸೀದಿ ಖತೀಬರಾದ ಅಶ್ರಫ್‌ಕಾಮಿಲ್ ಸಖಾಫಿ, ಸಹಾಯಕ ಖತೀಬರಾದ ಸೌಕತ್‌ಆಲಿ ಅಮಾನಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಅನ್ಸಾರ್ ಸುವರ್ಣ ಸಂಭ್ರಮದ ಅಧ್ಯಕ್ಷ ಹಾಜಿ.ಕೆ.ಎಂ. ಮುಸ್ತಾಫ ಅಧ್ಯಕ್ಷತೆವಹಿಸಿದರು. ಸಭಾಕಾರ್ಯಕ್ರಮದ ನಂತರ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಪ್ರವಾದಿ ಸಂರ್ಕಿತನವಾದ ನಹತೇ ಶರೀಫ್, ಮಹಫಿಲೇನಾತ್, ಗಜಲ್ಸ್, ಉರ್ದು ಕವಾಲಿ, ಬುರ್ದಾ ಮಜ್ಲೀಸ್ ಅಫ್ರಿಕಾದ ಸಂಜಾತ ಗುಜರಾತಿನ ರಾಜಕೋಚ್‌ನಲ್ಲಿ ನೆಲೆಸಿರುವ ಬರಕಾತಿ ತಂಡದ ಶಭೀರ್ ಬರಕಾತಿ, ಅಸ್ಲಂ ಬರಕಾತಿ, ಪಾರೂಕ್‌ಯವರು ಅಪಾರ ಜನಸ್ತೋಮದ ಎದುರು ಪ್ರವಾದಿ ಸಂರ್ಕಿತನವನ್ನು ಹಾಡಿದರು.

ಈ ಕಾರ್ಯಕ್ರಮದಲ್ಲಿ ಅನ್ಸಾರ್ ಸದಸ್ಯರು ಜಮಾಯತ್ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರೂ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.