ಬೆಳ್ಳಾರೆ : ಭರದಿಂದ ನಡೆಯುತ್ತಿರುವ ಅಯ್ಯಪ್ಪ ಮಂದಿರದ ಕಾಮಗಾರಿ- ಕೂಪನ್ ಬಿಡುಗಡೆ

Advt_Headding_Middle
Advt_Headding_Middle

ಬೆಳ್ಳಾರೆ ಗ್ರಾಮದ ಉಜ್ರೋಳಿ ಎಂಬಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ನೂತನ ಅಯ್ಯಪ್ಪ ಮಂದಿರವು ನಿರ್ಮಾಣಗೊಳ್ಳುತ್ತಿದೆ. ಅಯ್ಯಪ್ಪ ಸ್ವಾಮಿಯ ಆರಾಧನೆಯ ನಿಟ್ಟಿನಲ್ಲಿ ಬೆಳ್ಳಾರೆ ಉಜ್ರೋಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಮಂದಿರದಲ್ಲಿ ವರ್ಷಂಪತ್ರಿ ಸುಮಾರು ೧೦೦ ರಿಂದ ೨೦೦ ಮಂದಿ ಭಗವದ್ಭಕ್ತರು ಯಾತ್ರೆಯ ಪೂರ್ವ ವಿಧಿಯನ್ನು ಈ ಮಂದಿರದಲ್ಲಿ ಪೂರೈಸಿ ಶಬರಿಮಲೆ ಯಾತ್ರೆಯನ್ನು ಮಾಡುತ್ತಿರುತ್ತಾರೆ. ಸಮಸ್ತ ಭಕ್ತ ಮಹಾಜನರಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ವೇದಮೂರ್ತಿ ಶ್ರೀ ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಾಸ್ತು ಶಿಲ್ಪಿ ಶಶಿಧರನ್ ಚಾಲ್ಂಗಾಲ್‌ರವರ ನಿರ್ದೇಶನದಲ್ಲಿ ನೂತನ ಭಜನಾ ಮಂದಿರದ ನಿರ್ಮಾಣದ ಪವಿತ್ರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ತಂತ್ರಿಗಳ ನೇತೃತ್ವದಲ್ಲಿ ಸ್ಥಳ ಶುದ್ಧಿ, ಶಿಲಾನ್ಯಾಸ ಕಾರ್ಯ ನಡೆದು ,ಭಗವದ್ಭಕ್ತರ ಸಹಕಾರದಿಂದ ಅಡಿಪಾಯದ ಕಾರ್ಯ ವ್ಯವಸ್ಥಿತವಾಗಿ ಪೂರೈಸಿ, ಅಚ್ಚುಕಟ್ಟಾದ ಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.ಶಬರಿಮಲೆ ಯಾತ್ರಾರ್ಥಿಗಳಿಗೆ ಯಾತ್ರೆಯ ಪೂರ್ವ ವಿಧಿವಿಧಾನಗಳನ್ನು ಪೂರೈಸಲು ಸಹಕಾರಿಯಾಗುವಂತೆ ಮಂದಿರ ನಿರ್ಮಾಣ ಮಾಡಿ ಇದೇ ಬರುವ ಎಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ಕಾರ್ಯವನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ.ಕಟ್ಟಡ ಕಾಮಗಾರಿ, ಬ್ರಹ್ಮಕಲಶೋತ್ಸವ ಕಾರ್ಯ, ಅನ್ನಸಂತರ್ಪಣೆ ಈ ಎಲ್ಲಾ ಕಾರ್ಯಕ್ಕೆ ಸುಮಾರು ೨೦ ಲಕ್ಷದಷ್ಟು ಹಣದ ಅಗತ್ಯ ಇದೆ. ಆದ ಕಾರಣ ಭಗವದ್ಭಕ್ತರಾದ ತಾವು ತನು,ಮನ,ಧನಗಳ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿಯ ಮಂದಿರದ ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಆಡಳಿತ ಮಂಡಳಿಯವರು ವಿನಂತಿಸಿರುತ್ತಾರೆ.ಆಡಳಿತ ಮಂಡಳಿಯಲ್ಲಿ ಕಾಮಧೇನು ಮಾಧವ ಗೌಡರು ಕಾರ್ಯಾಧ್ಯಕ್ಷರಾಗಿ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಗೌರವಾಧ್ಯಕ್ಷರಾಗಿ, ಪ್ರಮೋದ್ ಕುಮಾರ್ ಶಟ್ಟಿ ಕುಂಟುಪುಣಿಗುತ್ತು ಅಧ್ಯಕ್ಷರಾಗಿ, ಅಮರನಾಥ ಶೆಟ್ಟಿ ಪೆರುವಾಜೆ ಗುತ್ತು ಮತ್ತು ಎ.ಕೆ.ಮಣಿಯಾಣಿ ಗೌರವ ಸಲಹೆಗಾರರಾಗಿ, ಸಂಜೀವ ಗುರುಸ್ವಾಮಿ ಮತ್ತು ಗಂಗಾಧರ ಗುರಸ್ವಾಮಿಗಳಾಗಿ ಮತ್ತು ಅಯ್ಯಪ್ಪ ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸರ್ವಸದಸ್ಯರು ಮಂದಿರ ನಿರ್ಮಾಣ ಕಾರ್ಯದಲ್ಲಿ ದುಡಿಯುತ್ತಿದ್ದಾರೆ. ಕೂಪನ್ ಬಿಡುಗಡೆ : ಮಂದಿರ ನಿರ್ಮಾಣದ ಕೆಲಸಕ್ಕೆ ಧನಸಹಾಯದ ಕೂಪನ್ ಬಿಡುಗಡೆಯು ಜ.೨೨ ರಂದು ನಡೆಯಿತು. ಈ ಸಂದರ್ಭದಲ್ಲಿ , ಗೌರವಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು , ಅಧ್ಯಕ್ಷ ಪ್ರಮೋದ್ ಕುಮಾರ್ ಶಟ್ಟಿ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗಶ್ವರ ದೇವಸ್ಥನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ,ಸದಸ್ಯ ನಾಗೇಶ್ ಕುಲಾಲ್,ಸಂಜೀವ ಗುರುಸ್ವಾಮಿ, ನವೀನ್ ಕಾಮಧೇನು, ಪ್ರದೀಪ್ ಕುಮಾರ್ ರೈ, ಮಾಧವ, ಜಯಂತ ಮಡಪ್ಪಾಡಿ, ಪದ್ಮನಾಭ ಪೆರುವಾಜೆ, ಕುಶಾಲಪ್ಪ, ಪ್ರೇಮಚಂದ್ರ ಬೆಳ್ಳಾರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.