ಗುತ್ತಿಗಾರು ಮಹಿಳಾ ಗ್ರಾಮ ಸಭೆ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆಯು ಜ.೨೨ರಂದು ಗುತ್ತಿಗಾರು ಪ.ವರ್ಗದ ಸಭಾಭವನದಲ್ಲಿ ನಡೆಯಿತು. ವಿಶೇಷ ಉಪನ್ಯಾಸವನ್ನು ಚಂದ್ರಶೇಖರ ಕಂದಡ್ಕರವರು ನೀಡಿ ಮಾತನಾಡಿದ ಅವರು ಮಹಿಳಾ ಸಬಲೀಕರಣದ ಹಾಗೂ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಸವಿತಾ ಕುಳ್ಳಂಪಾಡಿ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ, ಗ್ರಾ.ಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಸದಸ್ಯರುಗಳಾದ ಯಮಿತಾ ಪೂರ್ಣಚಂದ್ರ ಪೈಕ ,ಮಿತ್ರಕುಮಾರಿ ಚಿಕ್ಮುಳಿ, ಭಾಗೀರಥಿ ಕಾಜಿಮಡ್ಕ, ಅಮ್ಮಣಿ ನಡುಗಲ್ಲು, ಕಿಶೋರಿ ಚಾರ್ಮಾತ, ರತ್ನಾವತಿ ಮೆಟ್ಟಿನಡ್ಕ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಳ್ಯದ ಮೇಲ್ವಿಚಾರಕಿ ಕು.ವಿಜಯ ,ಪಂಚಾಯತ್ ಅಭಿವೃದ್ಧಿ ಅದಿಕಾರಿ ಶ್ಯಾಮಪ್ರಸಾದ್.ಯಂ.ಆರ್ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ತೇಜೇಶ್ವರಿ ಸ್ವಾಗತಿಸಿ, ಶ್ರೀಮತಿ ಅನಿತಾ ವಂದಿಸಿ, ಪಂ.ಅ. ಅಧಿಕಾರಿ ಶ್ಯಾಮಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಆತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀ ಶಕ್ತಿ ಸಂಘದವರು ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.