ಕನಕಮಜಲು: ಯಕ್ಷಗಾನ-ಭರತನಾಟ್ಯ ಕಾರ್ಯಾಗಾರ ಮತ್ತು ಪ್ರದರ್ಶನ

Advt_Headding_Middle
Advt_Headding_Middle

ಗುರುದೇವ ಲಲಿತಕಲಾ ಅಕಾಡೆಮಿ (ರಿ) ಇದರ ಆಶ್ರಯದಲ್ಲಿ ದಿ. ಪಿ.ಯಂ. ಮುತ್ತಣ್ಣ ಗೌಡ ಮತ್ತು ದಿ. ಎಸ್.ಎನ್. ನಳಿನಿ ಇವರ ಸ್ಮರಣಾರ್ಥ ತಿಂಗಳ ಸರಣಿ ಕಾರ್ಯಕ್ರಮದ ಪ್ರಯುಕ್ತ ಯಕ್ಷಗಾನ -ಭರತನಾಟ್ಯ ಕಾರ್ಯಾಗಾರ ಮತ್ತು ಪ್ರದರ್ಶನ ಕಾರ್ಯಕ್ರಮವು ಕನಕಮಜಲಿನ ಕನಕ ಸೌಧದ ರೈತ ಸಭಾಭವನದಲ್ಲಿ ಜ.೨೬ರಂದು ಉದ್ಘಾಟನೆಗೊಂಡಿತು.ಕಾರ್ಯಾಗಾರವನ್ನು ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ ಮತ್ತು ವಿದುಷಿ ನಯನ ರೈ ಉದ್ಘಾಟಿಸಿದರು. ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಲತ ಗಬ್ಬಲಡ್ಕ ಅಧ್ಯಕ್ಷತೆ ವಹಿಸಿದ್ದರು. ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹರೀಶ್ ಮೂರ್ಜೆ ಗೌರವ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಕುಮಾರ್ ನೆಡಿಲು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ಗಲ್ಲು ವಿಶ್ವೇಶ್ವರ ಭಟ್, ಪ್ರಜ್ಞಾ ಶಿಕ್ಷಣ ಸಂಸ್ಥೆಯ ಶಶಿಧರ ಭಟ್ ಭಾಗವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಸೀತಾರಾಮ ಬುಡ್ಲೆಗುತ್ತು ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.