ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ

Advt_Headding_Middle
Advt_Headding_Middle

ಬೆಳ್ಳಾರೆ : ಹಿದಾಯ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವವು ಇತ್ತೀಚೆಗೆ ಬೆಳ್ಳಾರೆ ಹಿದಾಯ ಎಜ್ಯುಕೇಶನಲ್ &ಚಾರಿಟೇಬಲ್ ಟ್ರಷ್ಠ್ ಹಾಗೂ ಬೆಳ್ಳಾರೆ ಜಮಾಅತ್ ಸಮಿತಿ ಅದ್ಯಕ್ಷ ಕೆ.ಎಂ.ಮುಹಮ್ಮದ್ ಹಾಜಿ ಯವರ ಅದ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕರ ಜವಾಬ್ದಾರಿಯ ಕುರಿತು ಹಿರಿಯ ತರಬೇತುದಾರ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಸ್ ಶರೀಫ್ ಮಾಹಿತಿ ನೀಡಿದರು.

 ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮುಹಮ್ಮದ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎಸ್. ಶಂಸುದ್ದೀನ್ ಸುಳ್ಯ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಕೆ.ಎಂ.ಮುಸ್ತಫ, ಕೆ.ಎಸ್.ಉಮ್ಮರ್ ಸುಳ್ಯ, ಬೆಳ್ಳಾರೆ ಗ್ರಾಮ ಪಂಚಾಯತ್ ಅದ್ಯಕ್ಷೆ ಶಕುಂತಲಾ ನಾಗರಾಜ್, ಬೆಳ್ಳಾರೆ ಜಮಾಅತ್ ಉಪಾದ್ಯಕ್ಷ ಯು.ಎಚ್.ಅಬೂಬಕ್ಕರ್, ಕೋಶಾದಿಕಾರಿ ಹಾಜಿ.ಕೆ.ಮಮ್ಮಾಲಿ,ಸದಸ್ಯ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ಶಾಲಾ ಸಂಚಾಲಕ ಬಿ.ಎ.ಬಶೀರ್, ಗ್ರಾಮ ಪಂಚಾಯತ್ ಸದಸ್ಯರಾದ ಆರಿಫ್.ಬಿ, ಮುಸ್ತಫಾ ಕೆ, ಎಸ್.ಡಿ.ಎಂ.ಸಿ ಅದ್ಯಕ್ಷ ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಸುನೈನಾ ಹಕೀಂ ವರದಿವಾಚಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಲವು ಕಲಾ ಸಾಂಸ್ಕ್ರತಿಕ,ಮನರಂಜನೆ ನೀಡಿದರು. ಹಿದಾಯ ಟ್ರಷ್ಠ್ ಪ್ರದಾನ ಕಾರ್ಯದರ್ಶಿ ಜ| ಶಾಫಿ ಬೆಳ್ಳಾರೆ ಪ್ರಾಸ್ತಾವಿಸಿ ಸ್ವಾಗತಿಸಿದರು ಅದ್ಯಾಪಕಿ ಶ್ರೀಮತಿ ನಿವ್ಯ ವಂದಿಸಿದರು ಅದ್ಯಾಪಕಿಯರುಗಳಾದ ಶ್ರೀಮತಿ ಶಕೀನ ಕಮಾಲ್ ಬುಶ್ರ, ತೌಸೀದ, ಸಾಜಿದ ವಿವಿದ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.