ವಿದ್ಯಾರಶ್ಮಿಯಲ್ಲಿ 69ನೆ ಗಣರಾಜ್ಯೋತ್ಸವ ದಿನಾಚರಣೆ

Advt_Headding_Middle
Advt_Headding_Middle

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ೬೯ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈಯವರು ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು ದೇಶ ಸದೃಢವಾಗಬೇಕಾದರೆ ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಬೇಕು. ದೇಶವನ್ನು ಗೌರವಿಸುವುದನ್ನು ಪ್ರವೃತ್ತಿಯಾಗಿಸಿಕೊಳ್ಳಬೇಕು. ಹಾಗಾದಾಗ ಮಾತ್ರವೇ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು.


ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಪ್ರಾಂಶುಪಾಲ ಸೀತಾರಾಮ ಕೇವಳ, ಉಪ ಪ್ರಾಂಶುಪಾಲ ಶೇಷಗಿರಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ೫ನೆಯ ಸಮಹಿತ್ ಜೈನ್, ೯ನೆಯ ಮೇಘನಾ ಡಿ. ರಾವ್ ಮತ್ತು ದ್ವಿತೀಯ ಪಿ.ಯು.ಸಿ.ಯ ನಸೀಬಾ ಭಾಷಣ ನೀಡಿದರು. ದ್ವಿತೀಯ ಪಿ.ಯು.ಸಿ.ಯ ಫಾತಿಮತ್ ಶಮ್ನಾ ಕಾರ್ಯಕ್ರಮ ನಿರೂಪಣೆ, ಪ್ರಥಮ ಪದವಿಯ ಸಂಶೀನಾ ಸ್ವಾಗತ ಮತ್ತು ದ್ವಿತೀಯ ಪಿ.ಯು.ಸಿ.ಯ ಪ್ರೀತಂ ಸಿ. ಧನ್ಯವಾದಗಳನ್ನು ನೆರವೇರಿಸಿದರು. ಧ್ವಜ ವಂದನೆ ಕಾರ್ಯಕ್ರಮದಲ್ಲಿ ೧೦ನೆಯ ಯಶಸ್ ಮತ್ತು ಪರೀಕ್ಷಿತ್ ಸಹಕರಿಸಿದರು. ಕೊನೆಯಲ್ಲಿ ವಠಾರ ಸ್ವಚ್ಛತೆ ನಡೆಸಿ ಬಳಿಕ ಪರಿಸರದ ಕುರಿತಾದ ಜಾಗೃತಿ ಸಿನಿಮಾವನ್ನು ಪ್ರದರ್ಶಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.