Breaking News

ಐವರ್ನಾಡು: ಕಾಂಗ್ರೆಸ್ ಕಾರ್ಯಕರ್ತರ ಸಭೆ

Advt_Headding_Middle
Advt_Headding_Middle

ಐವರ್ನಾಡು ಗ್ರಾಮ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ತಿರುಮಲೇಶ್ವರ ಪೂಜಾರಿಮನೆಯವರ ಅಧ್ಯಕ್ಷತೆಯಲ್ಲಿ ಜ. 27 ರಂದು ಐವರ್ನಾಡು ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯರು ಮಾತನಾಡಿ ಚುನಾವಣೆ ಬರುವ ಮೊದಲು ನಾವು ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷದ ಮೇಲೆ ಪ್ರೀತಿ ವಿಶ್ವಾಸ ಇರಬೇಕು. ಒಂದೇ ಟೀಮ್ ವರ್ಕ್ ಮಾಡಬೇಕು. ಕರ್ನಾಟಕ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು.

ಕಾಂಗ್ರೆಸ್ ಪಕ್ಷದ ಇತಿಹಾಸ ನೋಡಿಕೊಳ್ಳಬೇಕು. ಬಡವರಿಗೆ ತಿಂಗಳಿಗೆ 7 ಕೆ.ಜಿ. ಅಕ್ಕಿ ಸರಕಾರದಿಂದ ಸಿಗುವುದರಿಂದ ಬಡವರ ಜೀವನ ಇಂದು ಸುಧಾರಣೆ ಕಂಡಿದೆ. ಸಂಬಳದಿಂದ ಇತರ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಬಡವರಿಗೆ ಸಹಕಾರಿಯಾಗಿದೆ ಇದನ್ನೆಲ್ಲ ಕಾರ್ಯಕರ್ತರು ಗ್ರಾಮ ಗ್ರಾಮಗಳಲ್ಲಿ ಜನರಿಗೆ ಮನದಟ್ಟು ಮಾಡಬೇಕು.ಎಲ್ಲರೂ ಪ್ರೀತಿ ವಿಶ್ವಾಸ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಯ ಖಂಡಿತ ಎಂದು ಹೇಳಿದರು. ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯ ಚಂದ್ರಲಿಂಗಂ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಒಗ್ಗೂಡಿಸುವ ದೃಷ್ಠಿಯಿಂದ ಸಭೆ ಕರೆದಿದ್ದೇವೆ. ಈ ಬಾರಿ ನಾವು ಗೆದ್ದೇ ಗೆಲ್ಲಬೇಕು. 25 ವರ್ಷಗಳಿಂದ ಬಿಜೆಪಿಯ ಶಾಸಕ ಅಂಗಾರರು ಅಧಿಕಾರದಲ್ಲಿದ್ದಾರೆ. ರಸ್ತೆ ಎಲ್ಲಾ ಹಾಳಾಗಿ ಹೋಗಿದೆ. 25  ವರ್ಷದಲ್ಲಿ ಅಂಗಾರರು ಐವರ್ನಾಡಿಗೆ ಏನು ಕೊಟ್ಟಿದ್ದಾರೆ. ಕಾಲನಿಗಳಲ್ಲಿ ಸರಿಯಾದ ರಸ್ತೆ ಇಲ್ಲ. ವ್ಯವಸ್ಥೆಗಳೇ ಇಲ್ಲ. ನಿಗಮದವರೂ ಕೂಡಾ ಏನು ವ್ಯವಸ್ಥೆ ಕೊಡುವುದಿಲ್ಲ ನಮಗೆ .

ರಸ್ತೆಗಳೆಲ್ಲ ಹದಗೆಟ್ಟು ಹೋಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ.ಅವರದ್ದೇ ಆದ ಕ್ಷೇತ್ರಗಳಿಗೆ ಅನುದಾನ ನೀಡುತ್ತಾರೆ ಇದು ಸರಿಯಲ್ಲ ಎಂದು ಹೇಳಿದರು. ವೇದಿಕೆಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಡಾ|ರಘು,ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ,ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಬ್ಲಾಕ್ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಉಪಸ್ಥಿತರಿದ್ದು ಪಕ್ಷವನ್ನು ಸಂಘಟಿಸುವ ಕುರಿತು ಮಾತನಾಡಿದರು. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಜುನೈದ್ ನಿಡುಬೆ ಕಾರ್ಯಕ್ರಮ ನಿರೂಪಿಸಿ, ತಿರುಮಲೇಶ್ವರ ಪೂಜಾರಿಮನೆ ಸ್ವಾಗತಿಸಿ, ಜಯಪ್ರಕಾಶ್ ನೆಕ್ರೆಪ್ಪಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.