Breaking News

ಕೋಮು ಸೌಹಾರ್ದತೆಗಾಗಿ ಸುಳ್ಯದಲ್ಲಿ ಮಾನವ ಸರಪಳಿ ಕಾರ್ಯಕ್ರಮ

Advt_Headding_Middle
Advt_Headding_Middle

ಕೋಮು ಸೌಹಾರ್ದವನ್ನು ಕೆಡಿಸಿ ಕೋಮುಜ್ವಾಲೆ ಎಬ್ಬಿಸುವ ಪ್ರಯತ್ನದ ವಿರುದ್ಧ ಸೌಹಾರ್ದತೆಗಾಗಿ ಕರ್ನಾಟಕ ಕಾರ್ಯಕ್ರಮದಡಿ ರಾಜ್ಯಾದ್ಯಂತ ಮಾನವ ಸರಪಳಿ ಕಾರ್ಯಕ್ರಮ ನಡೆದಿದ್ದು, ಇದರ ಅಂಗವಾಗಿ ಸುಳ್ಯದಲ್ಲೂ ಕಾರ್ಯಕ್ರಮ ನಡೆಯಿತು.

ಸುಳ್ಯದ ಬಸ್ ನಿಲ್ದಾಣದ ಬಳಿಯಲ್ಲಿ ಸೇರಿದ ನೂರಾರು ಮಂದಿ ೧೦ ನಿಮಿಷಗಳ ಕಾಲ ಕೈ ಕೈ ಹಿಡಿದು ಅಖಂಡ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಸುಳ್ಯ ಚರ್ಚ್‌ನ ಧರ್ಮಗುರುಗಳಾದ ರೆ.ಪಾದರ್ ವಿನ್ಸೆಂಟ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿ, ಶಾಂತಿ ಹಾಗೂ ಸೌಹಾರ್ದತೆ ನಾಡಿನ ಅತ್ಯಂತ ತುರ್ತಿನ ಮೌಲ್ಯಗಳಾಗಿದ್ದು, ಇದನ್ನು ಉಳಿಸಲು ಸಜ್ಜನರು ಒಂದುಗೂಡಬೇಕು ಎಂದರು. ಸಂಘಟನಾ ಸಮಿತಿ ಸಂಚಾಲಕ ಎಂ.ಬಿಸದಾಶಿವರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಚಾಲಕ ಕೆ.ಪಿ.ರಾಬರ್ಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾರ್ವಜನಿಕ ಸಭೆ ನಡೆಯಿತು.


ಡಾ. ಪೂವಪ್ಪ ಕಣಿಯೂರು, ಗೋಪಾಲ ಪೆರಾಜೆ, ಕೆ.ಪಿ.ಜಾನಿ, ನಾರಾಯಣ ಕಿಲಂಗೋಡಿ, ಪ್ರಕಾಶ್ ಬಂಗ್ಲೆಗುಡ್ಡೆ, ಹರಿಶ್ಚಂದ್ರ ಪಂಡಿತ್, ಸಿದ್ದೀಕ್ ಕೊಕ್ಕೋ, ಕೆ.ಗೋಕುಲ್‌ದಾಸ್, ಶರೀಫ್ ಕಂಠಿ, ಮಹಮ್ಮದ್ ಕುಂಞಿ ಗೂನಡ್ಕ, ಜಿ.ಕೆ.ಹಮೀದ್, ಗೀತಾ ಕೋಲ್ಚಾರ್, ಪ್ರವೀಣಾ ರೈ ಮರುವಂಜ, ಅಶೋಕ್ ನೆಕ್ರಾಜೆ, ಕೆ.ಕುಶಲ, ಪಿ.ಎಸ್.ಗಂಗಾಧರ, ಆರ್.ಕೆ.ಮಹಮ್ಮದ್, ಧರ್ಮಪಾಲ ಕೊಂಗಾಜೆ, ಆನಂದ ಬೆಳ್ಳಾರೆ, ಅಚ್ಯುತ ಮಲ್ಕಜೆ, ರಿಯಾಝ್ ಕಟ್ಟೆಕ್ಕಾರ್, ಪಿ.ಎ.ಮಹಮ್ಮದ್, ಜೂಲಿಯಾನ ಕ್ರಾಸ್ತಾ, ಶ್ರೀಮತಿ ಕಾಂತಿ ಮೋಹನ್, ಜಯಂತಿ ಸಂಪಾಜೆ, ಬಿಜು ಅಗಸ್ಟಿನ್ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.