ಎಸ್ಸೆಸ್ಸೆಫ್ ಗಾಂಧಿನಗರ ಶಾಖೆ : ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವಾರ್ಷಿಕ ಮಹಾ ಸಭೆ ಶಾಖಾಧ್ಯಕರಾದ ಆರಿಫ್ ಬುಶ್ರಾ ಅಧ್ಯಕ್ಷತೆಯಲ್ಲಿ ಜ. 28 ರಂದು ಸುಳ್ಯ ಸುನ್ನಿ ಸೆಂಟರಿನಲ್ಲಿ ನಡೆಯಿತು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಫೈಝಲ್ ಝುಹ್ರಿ ಕಲ್ಲುಗುಂಡಿ ಉದ್ಘಾಟಿಸಿದರು.

ಗಾಂಧಿನಗರ ಶಾಖೆಯ ಉಸ್ತುವಾರಿ, ಸುಳ್ಯ ಸೆಕ್ಟರ್ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾದ ಸಿರಾಜ್ ಹಿಮಮಿ ಕುಂಭಕ್ಕೋಡ್ ವೀಕ್ಷಕರಾಗಿ ಆಗಮಿಸಿ ಸಂಘಟನಾ ತರಬೇತಿ ನಡೆಸಿದರು. ಡಿವಿಷನ್ ಸಮಿತಿ ಕಾರ್ಯದರ್ಶಿ ಅಬ್ಬಾಸ್ ಎ.ಬಿ ಮುಖ್ಯ ಅತಿಥಿಯಾಗಿದ್ದರು. ಪ್ರ.ಕಾರ್ಯದರ್ಶಿ ವರದಿ ಮಂಡನೆ ಮತ್ತು ಕೋಶಾಧಿಕಾರಿ ಲೆಕ್ಕ ಪತ್ರ ಮಂಡಿಸಿದರು. ನಂತರ ವೀಕ್ಷಕರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಆರಿಫ್ ಬುಶ್ರಾ (ಅಧ್ಯಕ್ಷರು), ಆಬಿದ್ ಕಲ್ಲುಮುಟ್ಲು (ಪ್ರಧಾನ ಕಾರ್ಯದರ್ಶಿ), ಸವಾದ್ ಮುಹಮ್ಮದ್ (ಕೋಶಾಧಿಕಾರಿ), ಸೈಫುದ್ದೀನ್ ಎಂ.ಎಸ್, ಅಬ್ದುಲ್ ನಾಫಿ (ಉಪಾಧ್ಯಕ್ಷರು), ಇಲ್ಯಾಸ್ ಗುರುಂಪು, ಅಕ್ರಂ ಗಾಂಧಿನಗರ (ಕಾರ್ಯದರ್ಶಿಗಳು) ಹಾಗೂ ಸ್ವಬಾಹ್ ಹಮೀದ್, ಹಾರಿಸ್ ಸಿ.ಎ, ಸ್ವಾದಿಕ್ ಪಿ.ಜಿ, ರಿಯಾಝ್ ಕೆ.ಎ, ಬಶೀರ್ ಕಲ್ಲುಮುಟ್ಲು, ತಶ್ರೀಫ್ ನಾವೂರು (ಸದಸ್ಯರು).

ಪ್ರ. ಕಾರ್ಯದರ್ಶಿ ಸವಾದ್ ಮುಹಮ್ಮದ್ ಸ್ವಾಗತಿಸಿ ನೂತನ ಪ್ರ.ಕಾರ್ಯದರ್ಶಿ ಆಬಿದ್ ಕಲ್ಲುಮುಟ್ಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.