ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಸಂಭ್ರಮ

Advt_Headding_Middle
Advt_Headding_Middle
Advt_Headding_Middle


ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನವೀಕರಣ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ನವೀಕರಣ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಸ್ಮರಣ ಸಂಚಿಕೆ ಹಾಗೂ ದಾನಿಗಳ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ ಮಹಾಗಣಪತಿ ಹವನ ನಡೆಯಿತು. ಬಳಿಕ ಸಭಾಕಾರ್ಯಕ್ರಮವೂ ನೆರವೇರಿತು. ಇದರ ಅಧ್ಯಕ್ಷತೆಯನ್ನು ನವೀಕರಣ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಆರ್.ಡಿ ಆನಂದ ಇವರು ವಹಿಸಿದರು. ಬ್ರಹ್ಮಶ್ರೀ ವೇ|ಮೂ|ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಶುಭಾಶೀರ್ವಾದವನ್ನು ನೀಡಿದರು. ಎ.ಓ.ಎಲ್.ಇ ಅದ್ಯಕ್ಷ ಡಾ|ಚಿದಾನಂದರವರು ದಾನಿಗಳ ನಾಮಫಲಕ ಅನಾವರಣವನ್ನು ನೇರವೆರಿಸಿದರು. ಶಾಸಕ ಕೆ.ಜಿ ಬೋಪಯ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಅಜಿತ್ ಗೌಡ ಐವರ್ನಾಡು ಇವರು ವಿಶೇಷ ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಡಳಿತ ಮೊಕ್ತೇಸರರಾದ ವಿಶ್ವನಾಥ ಕುಂಬಳಚೇರಿ, , ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಧನಂಜಯ ಕೋಡಿ, ನವೀಕರಣ ಸಮಿತಿಯ ಅಧ್ಯಕ್ಷರಾದ ಆರ್.ಡಿ.ಆನಂದ, ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ನಿಡ್ಯಾಮಲೆ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಅಶೋಕಪೀಜೆ, ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ದೇವತಕ್ಕರು ರಾಮಕಜೆ ರಾಜಗೋಪಾಲ, ನಿಕಟಪೂರ್ವ ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್‌ಪಾಡಿ, ಲೋಕಾನಾಥ ಅಮೆಚೂರು ಮತ್ತು ತಕ್ಕ ಮುಖ್ಯಸ್ಥರು, ಉಪಸ್ಥಿತರಿದ್ದರು.

ಬಳಿಕ ಕಲಶೋತ್ಸವ, ಮಹಾಪೂಜೆ, ಸಾಮೂಹಿಕ ಭಜನೆ, ಶಾಸ್ತಾವು ದೇವರಿಗೆ ವಿಶೇಷ ರಂಗಪೂಜೆಯು ನಡೆಯಿತು. ಸುಳ್ಯದ ಭುವನೇಶ್ವರಿ ಯಕ್ಷಗಾನ ಕಲಾಮಂಡಳಿ ಇದರ ಹಿರಿಯ ವಿದ್ಯಾರ್ಥಿಗಳಿಂದ ರಾಣಿ ಶಶಿಪ್ರಭಾ ಇವರಿಂದ ಯಕ್ಷಗಾನ ಪ್ರದರ್ಶನವೂ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.