HomePage_Banner
HomePage_Banner
HomePage_Banner
HomePage_Banner

ಫೆ.೫ರಂದು ಜಿಲ್ಲಾ ತಾಳೆ ಬೆಳೆಗಾರರ ಸಭೆ

ದಕ್ಷಿಣ ಕನ್ನಡ ಜಿಲ್ಲಾ ತಾಳೆ ಬೆಳೆಗಾರರ ಸಭೆ ಬಂಟ್ವಾಳ ತಾಲೂಕಿನ ಮೇಲ್ಕಾರಿನ ಬಿರುವ ಭವನದಲ್ಲಿ ಫೆ.೫ ರಂದು ಬೆಳಗ್ಗೆ ೧೦:೩೦ರಿಂದ ನಡೆಯಲಿದೆ.

ಜಿಲ್ಲೆಯ ತಾಳೆ ಬೆಳೆಗಾರರು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾ ತಾಳೆ ಬೆಳೆಗಾರರ ಸಂಘದ ಪದಾಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ. ಕಾಸರಗೋಡು ಸಿಪಿಸಿಆರ್‌ಐನ ತೋಟಗಾರಿಕಾ ಬೆಳೆಗಳ ಪ್ರಾಯೋಜನಾ ಸಂಯೋಜಕರಾದ ಡಾ. ಎಚ್.ಪಿ. ಮಹೇಶ್ವರಪ್ಪ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಹಾಲಿ ಬೆಳೆಗಾರರ ಜತೆ ಆಸಕ್ತ ಕೃಷಿಕರು ಪಾಲ್ಗೊಂಡು ಅವಕಾಶ ಸದುಪಯೋಗಪಡಿಸಿಕೊಳ್ಳಬೇಕಾಗಿ ತಾಳೆ ಬೆಳೆಗಾರರ ಸಂಘ ವಿನಂತಿಸಿದೆ.

ಹೆಚ್ಚಿನ ಮಾಹಿತಿಗೆ: ೯೪೪೯೬೪೦೩೩೩, ವಸಂತ ಭಟ್, ಸಂಯೋಜಕರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.