HomePage_Banner
HomePage_Banner
HomePage_Banner
HomePage_Banner
Breaking News

ಕಲ್ಮಕಾರಿನ ಇಬ್ಬರು ಮಕ್ಕಳು ರಾಜ್ಯಮಟ್ಟಕ್ಕೆ

ಕಲ್ಮಕಾರು ಉನ್ನತಿಕರಿಸಿದ ಹಿ.ಪ್ರಾ.ಶಾಲೆಯ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಇನ್ ಸ್ಪಾಯರ್ ಅವಾರ್ಡ್ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ನಿರ್ಮಲಾ ಪ್ರೌಢಶಾಲೆ ಕುಮುಟಾದಲ್ಲಿ ಫೆ ೨-೩ ರಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆ ನಡೆದಿತ್ತು. ಕಲ್ಮಕಾರು ಗ್ರಾಮದ ವೆಂಕಪ್ಪ ಗೌಡ ಕಾರ್ಗೋಡು ಮತ್ತು ಜಯಂತಿ ದಂಪತಿಗಳ ಪುತ್ರ ಮೋಕ್ಷಿತ್ ಕೆ.ವಿ ಮತ್ತು ಗಿರಿಯಪ್ಪ ಗೌಡ ಕೊಪ್ಪಡ್ಕ ಮತ್ತು ವಿಮಲಾ ದಂಪತಿಗಳ ಪುತ್ರ ಮೋಕ್ಷಿತ್ ಕೆ.ಜಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳು. ಮೋಕ್ಷಿತ್ ಕೆ.ಜಿ ಪ್ಲೋರ್ ಕ್ಲೀನಿಂಗ್ ಮೆಶಿನ್ ಮಾದರಿ ಮಾಡಿದ್ದರೆ. ಮೋಕ್ಷಿತ್ ಕೆ.ವಿ ಡಿಜಿಟಲ್ ವಾಟರ್ ಸೇವಿಂಗ್ ಸಿಸ್ಟಮ್ ಮಾದರಿ ಮಾಡಿದ್ದರು. ಈರ್ವರು ಕೂಡ ೭ ನೇ ತರಗತಿಯಲ್ಲಿ ಓದುತಿದ್ದು ಇವರಿಗೆ ಶಿಕ್ಷಕ ಅರವಿಂದ ಕಜೆ ಮಾರ್ಗದರ್ಶನ ಮಾಡಿರುತ್ತಾರೆ. ಮುಖ್ಯ ಶಿಕ್ಷಕಿ ಬೊಳಿಯಮ್ಮ ಮತ್ತು ಶಿಕ್ಷಕಿ ತೃಪ್ತಿ ಸಹಕರಿಸಿದ್ದಾರೆ. ಮಕ್ಕಳ ಸಾಧನೆಗೆ ಶಾಲಾ ಎಸ್.ಡಿ.ಎಂ.ಸಿ ಹಾಗೂ ಊರವರು ಹರ್ಷ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.