ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆ

Advt_Headding_Middle

 

ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ, ೨೦೧೮-೧೯ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ಸುಳ್ಯ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ಹಾಗೂ ತಾಲೂಕು ಕಛೇರಿವರೆಗೆ ಮೆರವಣಿಗೆ ಫೆ.9ರಂದು ನಡೆಯಿತು.


ರೈತರ ಬೇಡಿಕೆಗಳೇನು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೩೦೦೦ ಹೆಕ್ಟೇರ್‌ಗಿಂತಲೂ ಹೆಚ್ಚು ಅಡಿಕೆ ತೋಟಗಳು ಎಲೆ ಹಳದಿ ರೋಗದಿಂದ ನಾಶ ಹೊಂದಿದ್ದು, ಈ ರೈತರಿಗೆ ಎಕರೆಗೆ ಕನಿಷ್ಠ ರೂ. ಹತ್ತು ಲಕ್ಷ ಪರಿಹಾರ ನೀಡಬೇಕು. ತೆಂಗು ಬೆಳೆಗಾರರು ವರ್ಷಕ್ಕೆ ಒಂದು ಸಾವಿರದಿಂದ ಒಂದುಸಾವಿರದ ಇನ್ನೂರವೈತ್ತು ಕೋಟಿ ರೂ.ಗಳಷ್ಟು ನಷ್ಟವನ್ನು ಕೇವಳ ಮಂಗಗಳ ಉಪಟಳದಿಂದ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಒಂದು ಮಂಕಿಪಾರ್ಕ್ ನಿರ್ಮಿಸಬೇಕು. ರಬ್ಬರ್ ಬೆಳೆಗಾರರ ಹಿತದೃಷ್ಟಿಯಿಂದ ಕೇರಳ ಸರಕಾರದ ಮಾದರಿಯಲ್ಲೇ ಇಲ್ಲೂ ಕೂಡ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ್ ಯೋಜನೆ ಕೈಗೆತ್ತಿಕೊಂಡು ಪ್ರತೀ ಕ್ವಿಂಟಾಲ್ ರಬ್ಬರ್‌ಗೆ ಕನಿಷ್ಠ ಹದಿನಾರು ಸಾವಿರ ರೂ. ಬೆಲೆ ನಿಗದಿ ಮಾಡುವುದಲ್ಲದೆ ರೂ. ನೂರು ಕೋಟಿಯಷ್ಟು ಆವರ್ತನಿಧಿ ಸ್ಥಾಪಿಸಬೇಕು. ವನ್ಯ ಪ್ರಾಣಿಗಳ ಹಾವಳಿಯಿಂದ ರೈತರನ್ನು ಸಂರಕ್ಷಿಸಲು ಯೋಜನೆ ರೂಪಿಸಬೇಕು. ತೀವ್ರ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವುದಲ್ಲದೆ ರೈತರ ಕೃಷಿ ನೀರಾವರಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ಕನಿಷ್ಠ ಎಂಟು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು.

 

                                                  ಆಶೋಕ್ ಎಡಮಲೆ ಮಾತನಾಡುತ್ತಿರುವುದು

ಈ ಬೇಡಿಕೆಗಳನ್ನು ಮುಂದಿರಿಸಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆ ಬೆಳಿಗ್ಗೆ ೧೧-೩೦ರಿಂದ ಸುಳ್ಯ ಬಸ್ ನಿಲ್ದಾಣದ ಬಳಿ ಆರಂಭಗೊಂಡಿತು. ಕರ್ನಾಟಕ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಕೊಡಗು ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ನಿಡಿಂಜಿ, ತೊಡಿಕಾನ ಅರಂತೋಡು ವಲಯ ಘಟಕದ ಅಧ್ಯಕ್ಷ ತೀರ್ಥರಾಮ ಗೌಡ ಉಳುವಾರು, ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅಶೋಕ್ ಎಡಮಲೆ, ಪ್ರಶಸ್ತಿ ಪುರಸ್ಕೃತ ಕೃಷಿಕ ಪಿ.ಬಿ.ಪ್ರಭಾಕರ ರೈ ಪೆರಾಜೆ ಮೊದಲಾದವರು ಸೇರಿದ ಕೃಷಿಕರನ್ನುzಶಿಸಿ ಮಾತನಾಡಿದರು.

                                                ಪಿ.ಬಿ ಪ್ರಭಾಕರ ರೈ ಮಾತನಾಡುತ್ತಿರುವುದು

 

ಬಳಿಕ ಬಸ್ ನಿಲ್ದಾಣದಿಂದ ತಾಲೂಕು ಕಛೇರಿಯವರೆಗೆ ಮೆರವಣಿಗೆಯಲ್ಲಿ ಸಾಗಲಾಯಿತು. ಅಲ್ಲಿ ಕೆ.ಎಲ್.ಪ್ರದೀಪ್‌ಕುಮಾರ್ ಹಾಗೂ ರವಿಕಿರಣ್ ಪುಣಚ ಮಾತನಾಡಿದ ಮೇಲೆ ಉಪತಹಶೀಲ್ದಾರ್ ಲಿಂಗಪ್ಪ ನಾಯ್ಕ್‌ರವರಿಗೆ ಮನವಿ ಹಸ್ತಾಂತರಿಸಲಾಯಿತು.

                                                        ಪರ್ನೋಜಿ ತೀರ್ಥರಾಮ ಉಳುವಾರು ಮಾತನಾಡುತ್ತಿರುವುದು

 

                                                                  ಪ್ರದೀಪ್‌ಕುಮಾರ್ ಮಾತನಾಡುತ್ತಿರುವುದು

ಮಂಕಿ ಪಾರ್ಕಿಗಾಗಿ ಒತ್ತಾಯ
ಸುಳ್ಯ ತಾಲೂಕಿನ ಕೃಷಿಕರು ಮಂಗಗಳ ಉಪಟಳದಿಂದ ಭಾರೀ ನಷ್ಟ ಅನುಭವಿಸುತ್ತಿದ್ದು, ಮಂಗಗಳ ಹಾವಳಿ ತಡೆಗೆ ಮಂಕಿಪಾರ್ಕ್ ರಚಿಸುವ ರಾಜಕಾರಣಿಗಳ ಹೇಳಿಕೆ ಇದುವರೆಗೆ ಅನುಷ್ಠಾನಗೊಳ್ಳದಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿರುವಾಗಲೇ ಮಂಕಿಪಾರ್ಕ್ ಬಗ್ಗೆ ಭರವಸೆ ನೀಡಿದ್ದರು. ಬಳಿಕ ಕಳೆದ ವರ್ಷ ಶಾಸಕ ಅಂಗಾರರು ಆ ಬಗ್ಗೆ ಚರ್ಚಿಸಲು ನಮ್ಮೆಲ್ಲರ ಸಭೆಯನ್ನು ಕೂಡಾ ಕರೆದು ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೆ ಅದರ ಕಡತ ಮುಂದುವರೆದಿಲ್ಲ. ರೈತರ ಹಿತದೃಷ್ಠಿಯಿಂದ ಸುಳ್ಯ ತಾಲೂಕಲ್ಲಿ ಮಂಕಿ ಪಾರ್ಕ್ ಆಗಲೇಬೇಕು ಎಂದು ಭಾಷಣಕಾರರು ಒತ್ತಾಯಿಸಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.