ಫೆ. ೨೪, ೨೫ : ಸುಳ್ಯದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮ್ಮಿಲನ

Advt_Headding_Middle
Advt_Headding_Middle


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲೆ, ಜಿಲ್ಲಾ ಮಹಿಳಾ ಸಮ್ಮಿಲನ ವ್ಯವಸ್ಥಾಪನಾ ಸಮಿತಿ ಹಾಗೂ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮ್ಮಿಲನ ಕಾರ್ಯಕ್ರಮವು ಫೆ. ೨೪ ಮತ್ತು ೨೫ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀಮತಿ ಬೀನಾ ಕರುಣಾಕರ ಮತ್ತು ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ಯಾಕಾಗಿ ಸಮ್ಮಿಲನ?
ಆಧುನಿಕ ಪರ್ವ ಕಾಲದಲ್ಲೂ ಮಹಿಳಾ ಸಬಲೀಕರಣದ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಮಾವೇಶದ ಘೋಷಣೆಯಾಗಿದೆ. ಈ ಸಮ್ಮಿಲನದಲ್ಲಿ ಮಹಿಳೆಯರ ಅರಿವಿನ ಬುತ್ತಿಯನ್ನು ಕಟ್ಟಿಕೊಡುವ ಹಲವಾರು ಪ್ರಾತ್ಯಕ್ಷಿಕೆಗಳ ಅನಾವರಣವಾಗಲಿದೆ. ಸ್ವಾವಲಂಬಿ ಬದುಕಿನ ದಿಕ್ಸೂಚಿಗಳಿದ್ದು, ಸ್ವಾಸ್ಥ್ಯ ಬದುಕಿನ ರಹದಾರಿ ತೆರೆಯಲಿದೆ. ವೈವಿಧ್ಯ, ಪೌಷ್ಠಿಕ ಆಹಾರ, ತಿನಿಸುಗಳ ಸಿದ್ಧತೆ ಮತ್ತು ಮಾರಾಟ, ಜ್ಞಾನವೃದ್ಧಿಗಾಗಿ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ಜನಪದ ನೃತ್ಯ ಹಾಗೂ ಹಾಡುಗಳ ಸ್ಪರ್ಧೆ, ಮನೋಲ್ಲಾಸ ನೀಡುವ ಸಾಂಸ್ಕೃತಿಕ ವೈಭವ ಅನಾವರಣವಾಗಲಿದೆ. ಇಪ್ಪತ್ತೈದು ಸಾವಿರದಿಂದ ಮೂವತ್ತು ಸಾವಿರ ಮಹಿಳೆಯರು ಸಮ್ಮಿಲನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬೀನಾ ಕರುಣಾಕರ ಹೇಳಿದರು.

ಯಾರೆಲ್ಲಾ ಭಾಗವಹಿಸುತ್ತಾರೆ?
ಕಾರ್ಯಕ್ರಮವನ್ನು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ಉದ್ಘಾಟಿಸುವರು. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸುವರು. ಸ್ವಸಹಾಯ ಸಂಘಗಳ ೫ ಸಾಧಕ ಮಹಿಳೆಯರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮೀಬಾಯಿ ಪ್ರಶಸ್ತಿ ಪ್ರದಾನ ಮಾಡುವರು. ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ ಅತಿಥಿಗಳಾಗಿ ಭಾಗವಹಿಸಲಿದ್ದು, ಬಳಿಕ ಮಹಿಳಾ ವಿಚಾರ ಮಂಥನ, ಮಾಹಿತಿ ಮಂಥನ ಕಾರ್ಯಕ್ರಮ ನಡೆಯಲಿದೆ. ಫೆ. ೨೫ರಂದು ಸಮಾರೋಪ ಸಮಾರಂಭವು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಸಮಾರೋಪ ಭಾಷಣ ಮಾಡುವರು. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಭಾರತಿ ಶಂಕರ್, ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನ.ಪಂ. ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ತಹಶೀಲ್ದಾರ್ ಶ್ರೀಮತಿ ಕುಂಞಮ್ಮ, ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್‌ಕುಮಾರ್ ಮೇನಾಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸೀತಾರಾಮ ಶೆಟ್ಟಿ ತಿಳಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಗೆ ೭ ತಾಲೂಕುಗಳು ಬರುತ್ತವೆ. ಇಲ್ಲಿ ೧೨೨ ಜ್ಞಾನವಿಕಾಸ ಕೇಂದ್ರಗಳಿದ್ದು, ೬೦೦೦ಕ್ಕೂ ಅಧಿಕ ಸದಸ್ಯರಿದ್ದಾರೆ. ೧೨೦೦೦ಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳಿದ್ದು, ೧ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ ಎಂದು ಅವರು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಸಂತೋಷ್‌ಕುಮಾರ್ ರೈ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ರೈ ಮೇನಾಲ, ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳಾದ ಶ್ರೀಮತಿ ಪುಷ್ಪಾ ಮೇದಪ್ಪ, ಶ್ರೀಮತಿ ಜ್ಯೋತಿ ಪ್ರೇಮಾನಂದ, ಶ್ರೀಮತಿ ಚಂದ್ರಕಲಾ ಕುತ್ತಮೊಟ್ಟೆ, ಶ್ರೀಮತಿ ಜಯಕೃಷ್ಣ ಕಾಯರ್ತೋಡಿ, ಶ್ರೀಮತಿ ಭಾರತಿ ಪುರುಷೋತ್ತಮ, ಶ್ರೀಮತಿ ಸುಮನ ಕೃಪಾಶಂಕರ್, ಜ್ಞಾನವಿಕಾಸ ಸಂಚಾಲಕರಾದ ಶ್ರೀಮತಿ ಸುಜಾತ, ಶ್ರೀಮತಿ ಭಾರತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.