HomePage_Banner
HomePage_Banner
HomePage_Banner
HomePage_Banner

ಗುತ್ತಿಗಾರು:ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅರ್ಧಾಹ ಭಜನೆ-

ಶ್ರೀ ಕೃಷ್ಣಾ ಭಜನಾ ಮಂದಿರ (ರಿ) ಗುತ್ತಿಗಾರಿನಲ್ಲಿ ಫೆ.23 ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅರ್ಧಾಹ ಭಜನೆಯು ನಡೆಯಲಿರುವುದು ಬೆಳಿಗ್ಗೆ ಗಣಪತಿ ಹೋಮ ,ದೀಪ ಪ್ರತಿಷ್ಠೆ ,ನಂತರ ಭಜನೆ ಪ್ರಾರಂಭ ,ತದನಂತರ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರಾರಂಭ ಮಧ್ಯಾಹ್ನ ಮಹಾಪೂಜೆ ಸಂಜೆ ದೀಪೋದ್ವಾಸನೆ ನಡೆದು ,ದಾರ್ಮಿಕ ಸಭಾ ಕಾರ್ಯಕ್ರಮವು ಶ್ರೀ ಕೃಷ್ಣಾ ಭಜನಾಮಂದಿರ (ರಿ) ಗುತ್ತಿಗಾರು ಅಧ್ಯಕ್ಷರಾದ ಕಿಶೋರ್ ಕುಮಾರ್ ,ಪೈಕ ಬೊಮ್ಮದೇರೆ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಧಾರ್ಮಿಕ ಉಪನ್ಯಾಸವನ್ನು ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಸುಳ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವೆಂಕಟ್ರಮಣ ಆಚಾರ್ಯ ,ಕಲ್ಮಡ್ಕ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶ್ರೀ ಮುತ್ತಪ್ಪೇಶ್ವರ ದೇವಸ್ಥಾನ ಗುತ್ತಿಗಾರು ಇದರ ಆಡಳಿತ ಮೊಕ್ತೇಸರರಾದ ವೆಂಕಟ್ ವಳಲಂಬೆ, ಗ್ರಾಮ ಪಂಚಾಯತ್ ಗುತ್ತಿಗಾರು ಸದಸ್ಯರಾದ ಜಯಪ್ರಕಾಶ್ ಮೊಗ್ರ,ಉದ್ಯಮಿಗಳು ಕೆನಡಾ ,ಉಮೇಶ್ ಮುಂಡೋಡಿ ,ಶ್ರೀ ಕ್ಷೇತ್ರ ಧ.ಗ್ರಾ .ಯೋ ಗುತ್ತಿಗಾರು ವಲಯ ,ಇದರ ಮೇಲ್ವಿಚಾರಕ ರಾದ ಶ್ರೀನಿವಾಸ್ ಉಪಸ್ಥಿತರಿರುವರು .

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ಚಲನ ಚಿತ್ರ ನಟ ಕುಸಲ್ದರಸೆ ನವೀನ್ ಡಿ.ಪಡೀಲ್ ನಿರ್ದೇಶಿಸಿ ಗಡಿನಾಡ ಕಲಾನಿಧಿ ಕೃಷ್ಣ.ಜಿ.ಮಂಜೇಶ್ವರ ರಚಿಸಿ ಚಲನ ಚಿತ್ರನಟ ಸುಂದರ ರೈ ಮಂದಾರ ಅಭಿನಯದ ಅಂಚಗೆ ಇಂಚಗೆ ತುಳು ಹಾಸ್ಯ ನಾಟಕ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.