ಸುಳ್ಯದಲ್ಲಿ ಪಿ.ಎಫ್.ಐ. ಯುನಿಟ್ ಮಾರ್ಚ್ ಮತ್ತು ಸಾರ್ವಜನಿಕ ಸಮಾವೇಶ

Advt_Headding_Middle
Advt_Headding_Middle
Advt_Headding_Middle

 

ಸುಳ್ಯ: ಪಿ.ಎಫ್.ಐ ಸಂಘಟನೆಯ ವಿರುದ್ಧ ಅಪಪ್ರಚಾರ ಮಾಡುವ, ಕಾರ್ಯಕರ್ತರನ್ನು ದಮನಿಸುವ, ನಾಯಕರನ್ನು ಬಂಧಿಸುವ ಸರ್ವಾಧಿಕಾರ ಯಾವುದೇ ಸರಕಾರಗಳಿಗೆ ಭೂಷಣ ಅಲ್ಲ. ನಮ್ಮ ಸಂಘಟನೆ ಇದರಿಂದ ವಿಚಲಿತರಾಗುವುದಿಲ್ಲ ಮತ್ತು ನಮ್ಮ ಉದ್ದೇಶದಿಂದ ಒಂದು ಇಂಚು ಕೂಡ ಹಿಂದೆ ಸರಿಯುವುದಿಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ಹೇಳಿದ್ದಾರೆ.
ದೇಶಾದ್ಯಂತ ನಡೆದ ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದ ನಾವೂರು ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.


ಹಿಂದುತ್ವ ಫ್ಯಾಸಿಸ್ಟ್ ಮತ್ತು ಸಾಮ್ರಾಜ್ಯ ಶಾಹಿ ಧೋರಣೆ ದೇಶಕ್ಕಿರುವ ಬೆದರಿಕೆ. ಇದಕ್ಕೆ ಉತ್ತರವಾಗಿ ಪಿ.ಎಫ್.ಐ ಚಳವಳಿ ಇದೆ. ದೇಶದ ಸವಾಲುಗಳಿಗೆ ಪಿ.ಎಫ್.ಐ ಯೇ ಉತ್ತರ.ಸರಕಾರದ ಹಿತಾಸಕ್ತಿಗಳು ರಾಷ್ಟ್ರದ ಹಿತಾಸಕ್ತಿ ಆಗಬೇಕೆಂದೇನೂ ಇಲ್ಲ. ಹೀಗಾಗಿ ನಾವು ಸರಕಾರವನ್ನು ಟೀಕಿಸುತ್ತೇವೆ ಅದು ಅವರಿಗೆ ದೇಶ ವಿರೋಧಿಯಾಗಿ ಕಾಣುತ್ತವೆ. ಹಾಗೆಂದು ನಾವು ಜನವಿರೋಧಿ ನೀತಿಗಳನ್ನು ಟೀಕಿಸುವುದನ್ನು ನಿಲ್ಲಿಸುವುದಿಲ್ಲ ಎಂದರು.


ಆಲ್ ಇಂಡಿಯಾ ಇಮಾಮ್ಸ್ ಕೇರಳ ಇದರ ಕಾರ್ಯದರ್ಶಿ ಶಫೀಕ್ ಅಲ್ ಕಾಸಿಮಿ , ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಲ್ಫಾನ್ ಶೋ ಫ್ರಾಂಕೋ , ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮಾತನಾಡಿದರು.


ಪಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಡಬ್ಲ್ಯೂಎಫ್ ರಾಜ್ಯಾಧ್ಯಕ್ಷೆ ನಸೀಮ ಫಾತಿಮಾ ಜೋಕಟ್ಟೆ, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಪಿಎಫ್‌ಐ ರಾಜ್ಯ ಕೋಶಾಧಿಕಾರಿ ಫಾರೂಕ್ ರೆಹಮಾನ್ ಮೈಸೂರು, ಬೆಂಗಳೂರು ಬಿಬಿಎಂಪಿ ಸದಸ್ಯ ಮುಜಾಬಿಲ್ ಪಾಶಾ, ದಲಿತ ಮುಖಂಡ ಆನಂದ ಮಿತ್ತಬೈಲು, ಸುಳ್ಯ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಸ್ ಉಮ್ಮರ್, ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಖಾದರ್ ಪುತ್ತೂರು, ಅನ್ವರ್ ಸಾದಾತ್, ರಾಜ್ಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಕೆಮ್ಮಾರ, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ, ರಾಜ್ಯ ಕಾರ್ಯದರ್ಶಿ ಅಪ್ಸಲ್, ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮೌಸಿ, ದ.ಕ ಜಿಲ್ಲಾಧ್ಯಕ್ಷ ಅತಾಮುಲ್ಲಾ ಜೋಕಟ್ಟೆ, ಸುಳ್ಯ ವಿಧಾನಸಭಾ ಕ್ಷೇತ್ರ ಸಭಾಧ್ಯಕ್ಷ ಮಮ್ಮಾಲಿ ಹಾಜಿ, ನಗರ ಸಮಿತಿ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ, ಸಿಎಫ್‌ಐ ಅಧ್ಯಕ್ಷ ಮಹಮ್ಮದ್ ತಪ್ಸೀರ್, ಮಹಮ್ಮದ್ ವಳವೂರು, ರಫೀಕ್ ದಾರಿಲಿ, ಶಿಹಾಬ್, ನವಾಜ್ ಉಳ್ಳಾಲ್, ಇಜಾಶ್ ಅಹಮ್ಮದ್, ಮುಸ್ತಫ ಪೆರ್ನೆ, ಹ್ಯಾರಿಸ್ ಉಪಸ್ಥಿತರಿದ್ದರು. ಪಿ.ಎಫ್.ಐ ಪುತ್ತೂರು ತಾಲೂಕು ಅಧ್ಯಕ್ಷ ಅಬೂಬಕರ್ ರಿಜ್ವಾನ್ ಸ್ವಾಗತಿಸಿದರು. ಅಶ್ರಫ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.