HomePage_Banner
HomePage_Banner
HomePage_Banner
HomePage_Banner

ಹಾಟ್ ಗಾರ್ಲಿಕ್ ಎಗ್

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂಬ ಮಾತೇ ಇದೆ. ಪ್ರತಿ ದಿನ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಬಲು ಉತ್ತಮವಂತೆ. ಎಗ್ ಬುರ್ಜಿ, ಮಸಾಲ ಎಗ್ ಎಲ್ಲಾ ತಿಂದಿರುವಿರಿ. ಈ ಬಾರಿ ನಾವು ಹಾಟ್ ಗಾರ್ಲಿಕ್ ಎಗ್ ಬಗ್ಗೆ ನಿಮಗೆ ತಿಳಿಸುತ್ತೇವೆ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು :

ಬೇಯಿಸಿದ ಮೊಟ್ಟೆ ೪ (ಹಳದಿ ಭಾಗ ಬೇರೆಯದಾಗಿ ತೆಗೆದಿಡಿ)
ಬೆಳ್ಳುಳ್ಳಿ ೧೦ ಎಸಳು
ಹಳದಿ ಪುಡಿ ೧ ಚಮಚ
ಧನಿಯಾ ಪುಡಿ ೨ ಚಮಚ
ಮೆಣಸಿನ ಪುಡಿ ೨ ಚಮಚ
ಜೀರಿಗೆ ಪುಡಿ ೨ ಚಮಚ
ಸಣ್ಣ ಗೋಧಿ ೧ ಚಮಚ
ನಿಂಬೆ ರಸ ೧ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವಿನ ಎಲೆ ೪

ತಯಾರಿಸುವ ವಿಧಾನ :
ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ಧನಿಯಾ ಹುಡಿ ಹಾಕಿ ಚೆನ್ನಾಗಿ ಬಿಸಿ ಮಾಡಿ. ಇದಕ್ಕೆ ಜೀರಿಗೆ ಹುಡಿ ಮತ್ತು ಮೆಣಸಿನ ಹುಡಿ ಹಾಕಿ ಫ್ರೈ ಮಾಡಿ.
ಈ ಮಿಶ್ರಣಕ್ಕೆ ನಿಂಬೆ ರಸ ಬೆರೆಸಿ. ಸ್ವಲ್ಪ ಹೊತ್ತು ಅದನ್ನು ಫ್ರೈ ಮಾಡಿ. ಫ್ರೈ ಮಾಡಿದ ಎಲ್ಲಾ ಸಾಮಾಗ್ರಿಗಳನ್ನು ಬೇರೆ ಪಾತ್ರೆಗೆ ವರ್ಗಾಯಿಸಿ.
ಈಗ ಅದೇ ಪ್ಯಾನ್‌ಗೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಸಣ್ಣ ಗೋಧಿ ಮತ್ತು ಜೀರಿಗೆ ಹಾಕಿ. ಇದಕ್ಕೆ ಒಣ ಮೆಣಸಿನ ಕಾಯಿ ಹಾಕಿ ಫ್ರೈ ಮಾಡುತ್ತಿರಿ.
ನಂತರ ಕರಿಮೆಣಸು ಮತ್ತು ಕರಿಬೇವು ಹಾಕಿ. ನಂತರ ಬೇರೆಯಾಗಿ ತೆಗೆದಿರಿಸಿದ ಮೊದಲೇ ಫ್ರೈ ಮಾಡಿದ ಮಿಶ್ರಣವನ್ನು ಇದಕ್ಕೆ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ.
ಈ ಮಿಶ್ರಣಕ್ಕೆ ಬೇಯಿಸಿದ ಮೊಟ್ಟೆ ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ. ಈಗ ಹಾಟ್ ಗಾರ್ಲಿಕ್ ಎಗ್ ಸವಿಯಲು ರೆಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.