HomePage_Banner
HomePage_Banner
HomePage_Banner
HomePage_Banner

ಪಂಜ: ಉಚಿತ ದಂತ ತಪಾಸಣಾ ಶಿಬಿರ

ಗ್ರಾಮ ಪಂಚಾಯತು ಪಂಜ, ಯುವ ತೇಜಸ್ಸು ಟ್ರಸ್ಟ್, ಆರೋಗ್ಯ ಪ್ರಾಥಮಿಕ ಕೇಂದ್ರ ಪಂಜ, ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಎ. ೨ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.


ಶಿಬಿರದಲ್ಲಿ ಪಂಜ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಮಂಜುನಾಥ, ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನ ವೈದ್ಯರಾದ ಡಾ| ಜಸಿಲ್ಲ, ಡಾ| ಪೌಲಮಿ ಮಿಶ್ರಾ, ಡಾ| ಪ್ರಗತಿ, ಯುವ ತೇಜಸ್ಸಿನ ಟ್ರಸ್ಟ್ ಕಾರ‍್ಯವಾಹ ಜನಾರ್ಧನ, ಚರಣ್‌ರಾಜ್ ಅಳ್ಪೆ,ಭವಾನಿ ಶಂಕರ ಕೆ ಹಾಗೂ ಯುವ ತೇಜಸ್ಸು ಟ್ರಸ್ಟ್ ಸದಸ್ಯರಾದ ಪವನ್ ಪಲ್ಲತ್ತಡ್ಕ, ರೋಹಿತ್ ಪಂಬೆತ್ತಾಡಿ, ಗುರುಪ್ರಸಾದ್ ಪಂಜ, ಕಿರಣ್ ನೆಕ್ಕಿಲ, ತೇಜಸ್ ಆಚಾರ್ಯ,ಆಶಿತ್ ಕಲ್ಲಾಜೆ, ಹರ್ಷಿತ್ ಎ.ಕೆ,, ದುರ್ಗಾಪ್ರಸಾದ್ ಅಂಬೆಕಲ್ಲು, ಗೌತಮ್ ರೈ, ದೀಕ್ಷಿತ್ ಏನೆಕಲ್ಲು, ವರುಣ್ ಅರ್ಜುನ್, ನವೀನ್ ದೋಣಿಮನೆ, ಸತೀಶ್ ಕೆರೆಯಡ್ಕ, ಗಿರೀಶ್ ಪಂಜ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಹಲ್ಲಿನ ಸಂಪೂರ್ಣ ತಪಾಸಣೆ ನಡೆಸಲಾಯಿತು. “ಪ್ರತಿ ಆರು ತಿಂಗಳಿಗೊಮ್ಮೆ ತಪಾಸಣಾ ಶಿಬಿರಗಳು ನಡೆಯುತ್ತದೆ ಅವುಗಳ ಪ್ರಯೋಜನವನ್ನು ಪಡೆಯಿರಿ. ಹೆಚ್ಚಿನ ಚಿಕಿತ್ಸೆಯನ್ನು ಕೆವಿಜಿ ಆಸ್ಪತ್ರೆಯಲ್ಲಿ ನೀಡುತ್ತೇವೆ.” ಎಂದು ಕೆವಿಜಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.