ಎರಡೂವರೆ ವರುಷಗಳ ಹಿಂದೆ ಸುಳ್ಯ ನಗರದ ಭಸ್ಮಡ್ಕ ಪರಿಸರಕ್ಕೆ ಬಂದಿದ್ದ ಕಾಡಾನೆಗಳ ಹಿಂಡು ಈ ಭಾರಿ ಮತ್ತೆ ಲಗ್ಗೆ ಇಟ್ಟಿದೆ. ಕಳೆದ ಕೆಲವು ದಿನಗಳಿಂದ ಆಲೆಟ್ಟಿ ಗ್ರಾಮದ ನಾರ್ಕೊಡು, ಏನಾವರ, ಅಜ್ಜಾವರ ಗ್ರಾಮದ ಮೇದಿನಡ್ಕ, ತುದಿಯಡ್ಕ ಹಾಗೂ ಮಂಡೆಕೋಲು ಗ್ರಾಮದ ಕೆಲವು ಕಡೆಗಳಲ್ಲಿ ಕಂಡು ಬರುತ್ತಿತ್ತು.
ಎ.೬ರಂದು ಸಂಜೆ ನಾರ್ಕೊಡು ಪ್ರದೇಶದಿಂದ ಪಯಸ್ವಿನಿ ನದಿಯ ಬದಿಯಿಂದಾಗಿ ಬಸ್ಮಡ್ಕ ಎಂಬಲ್ಲಿಗೆ ೫ಆನೆಗಳ ಹಿಂಡು ಬಂದಿದೆ. ರಾತ್ರಿ ಇಡಿ ಹೊಳೆಯ ಬದಿಯಲ್ಲಿ ಆನೆಗಳ ಹಿಂಡು ಇದ್ದವು. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಆನೆಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.