ಶಾಸಕ ಅಂಗಾರರ ಮಾಜಿ ಆಪ್ತ ಸಹಾಯಕ, ಅಜ್ಜಾವರ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸೇರಿದಂತೆ ನೂರಾರು ಮಂದಿಕಾಂಗ್ರೆಸ್ ಸೇರ್ಪಡೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪುರಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಶಾಸಕ ಅಂಗಾರರ ಪ್ರಥಮ ಅವಧಿಯ ಆಪ್ತ ಸಹಾಯಕರಾಗಿದ್ದ ಕೊರಗಪ್ಪ ಕೊಯಿಲ, ಅಜ್ಜಾವರ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಮಿಥುನ್ ಕರ್ಲಪ್ಪಾಡಿ, ಕಾಣಿಯೂರಿನ ನಿಶಾಂತ್ ರೈ, ಜಟ್ಟಿಪಳ್ಳದ ಪ್ರಮೋದ್ ರೈ, ಕೊಡಿಯಾಲದ ದಾಮೋದರ್, ಕಾಂಗ್ರೆಸ್ ಸೇರ್ಪಡೆಗೊಂಡರು. ಕಾಂಗ್ರೆಸ್ ಧುರೀಣರಾಗಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದ ಕೆ.ಎಸ್.ಪೂಜಾರಿ ಮರಳಿ ಕಾಂಗ್ರೆಸ್ ಸೇರ್ಪಡೆಗೊಂಡರು. ಅಜ್ಜಾವರ ಗ್ರಾ.ಪಂ.ಮಾಜಿ ಅಧ್ಯಕ್ಷೆ ಬಿಜೆಪಿಯ ಶ್ರೀಮತಿ ಮುನ್ನಿ ದೊಡ್ಡೇರಿ ಕಾಂಗ್ರೆಸ್ ಸೇರಿದರು. ಹರಿಹರ, ಕೊಲ್ಲಮೊಗ್ರ, ಬಾಳುಗೋಡು, ಕಲ್ಮಕಾರು ಭಾಗದ ಸುಮಾರು ೫೦ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಿಥುನ್ ಕರ್ಲಪ್ಪಾಡಿಯವರು ಇಂದಿನಿಂದ ಇಲ್ಲಿ ಡಾ.ರಘು ನೇಮಿತ ಶಾಸಕ, ಅಂಗಾರರು ಮಾಜಿ ಶಾಸಕ. ಕಾಂಗ್ರೆಸ್ ಮಹಿಳೆಯರಿಗೆ ಗೌರವ ನೀಡದ ಪಕ್ಷ ಎಂದು ಬಿಜೆಪಿ ಹೇಳುತ್ತಿತ್ತು. ಆದರೆ ಇಲ್ಲಿ ಬಂದಾಗ ನಮಗೆ ಗೊತ್ತಾಗಿದೆ. ಕಾಂಗ್ರೆಸ್ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ. ಬಿಜೆಪಿ ಜಗಳ ತಂದಿಡುತ್ತಲೇ ಇರಲಿ. ನಾವು ಮನೆ ಮನೆ ಭೇಟಿ ಮಾಡಿ ಕಾಂಗ್ರೆಸ್ಸನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.