HomePage_Banner
HomePage_Banner
HomePage_Banner
HomePage_Banner

ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬರುತ್ತಿರುವ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್

ಮಾರುತಿ ಫೌಂಡೇಶನ್ ಆಡಳಿತಕ್ಕೊಳಪಟ್ಟ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಮರ್ಥ ನೇತೃತ್ವದ ಆಡಳಿತ ಮಂಡಳಿ, ನುರಿತ ಮತ್ತು ಅನುಭವೀ ಶಿಕ್ಷಕ ವೃಂದ, ಸದಾ ಬೆಂಬಲ ನೀಡುತ್ತಾ ಬಂದಿರುವ ಪೋಷಕ ವರ್ಗ, ಹಿತೈಷಿ ಬಳಗ ಮತ್ತು ಮುಖ್ಯವಾಗಿ ಮುಗ್ಧ ಮಕ್ಕಳ ಬೆರೆಯುವಿಕೆಯಿಂದ ತಮ್ಮ ಗುರಿಯನ್ನು ಈಡೇರಿಸುವಲ್ಲಿ ಕೆಲವೇ ವರ್ಷಗಳಲ್ಲಿ ಸಾಧ್ಯವಾಗಿದೆ ಎಂಬುದು ಬಹಳ ಹೆಮ್ಮೆಯ ವಿಷಯ. ಇನ್ನು ಮುಂದಿನ ದಿನಗಳಲ್ಲೂ ಇದೇ ರೀತಿಯ ಸಹಕಾರವನ್ನು ಮಾರುತಿ ಫೌಂಡೇಶನ್ ಎಲ್ಲರಿಂದಲೂ ಬಯಸುತ್ತಿದೆ.
ಪ್ರಕೃತ್ತಿದತ್ತವಾದ ಸುಂದರ ಪರಿಸರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗ್ರಾಮೀಣ ಮಕ್ಕಳ ಅಭ್ಯುದಯವನ್ನು ಬಯಸುತ್ತಾ ಯಾವುದೇ ಒತ್ತಡವಿಲ್ಲದೆ ಮುಕ್ತ ವಾತಾವರಣದಲ್ಲಿ ವಿದ್ಯಾರ್ಜನೆಯನ್ನು ಮಾಡುವ ಅವಕಾಶವನ್ನು ಈ ಸಂಸ್ಥೆಯು ಕಲ್ಪಿಸಿಕೊಟ್ಟಿದೆ. ಮಕ್ಕಳ ಕಲಿಕೆಯ ಬಗ್ಗೆ ಸದಾ ಶ್ರಮಿಸುತ್ತಿರುವ ಶಿಕ್ಷಕವೃಂದ, ಪೋಷಕರ ಸಂತೃಪ್ತಿಯ ಭಾವನೆಗೆ ಕಾರಣವಾಗಿದೆ. ಆಧುನಿಕ ಎಲ್ಲಾ ಸೌಲಭ್ಯಗಳು ಈ ಸಂಸ್ಥೆಯಲ್ಲಿ ಲಭ್ಯವಿದ್ದು, ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ನಿರಂತರ ನೀಡುತ್ತಾ ಬಂದಿದೆ.
ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ pre-nursery ಯಿಂದ ಪ್ರಾರಂಭವಾಗಿ ೬ನೇ ತರಗತಿಯವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಪ್ರಸ್ತುತ ವರ್ಷದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೩೦೦ ದಾಟಿದೆ.
ವಿದ್ಯಾರ್ಥಿಗಳ ಮನೋದೃಷ್ಟಿಗೆ ಅನುಗುಣವಾಗಿ ಪಠ್ಯ ವಿಷಯಗಳನ್ನು ಬೋದಿಸಲು ಶಿಕ್ಷಕರಿಗೆ ವಿಶೇಷ ಬೋಧನಾ ತರಬೇತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಎಲ್ಲರ ಸಹಕಾರವನ್ನು ಮುಂಬರುವ ದಿನಗಳಲ್ಲಿ ಎಲ್ಲರಿಂದಲೂ ಬಯಸುತ್ತಿದೆ ಈ ವಿದ್ಯಾಸಂಸ್ಥೆ.

ಸಂಸ್ಥೆಯ ವೈಶಿಷ್ಟ್ಯತೆಗಳು

*ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಾಲಾ ವಾಹನದ ವ್ಯವಸ್ಥೆ
* ಶಾಲಾ ವಾಹನದಲ್ಲಿ ಅನುಭವೀ ಚಾಲಕ ಮತ್ತು ಓರ್ವ ಸಹಾಯಕನ ನೇಮಕಾತಿ
* ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ ತಕ್ಷಣ ಅವರ ಗುರುತಿನ ಚೀಟಿ ಸ್ಕ್ಯಾನ್ ಆಗಿ ಕಂಪ್ಯೂಟರ್‌ನಲ್ಲಿ ಹಾಜರಾತಿ ದಾಖಲಿಸುವ ವ್ಯವಸ್ಥೆ
* ಪ್ರತೀ ತರಗತಿಗಳಲ್ಲಿ ಎಲ್.ಸಿ.ಡಿ. ಪ್ರಾಜೆಕ್ಟರ್ ಮತ್ತು ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ
* ಕಛೇರಿಯಿಂದಲೇ ನೇರವಾಗಿ ಏಕಕಾಲದಲ್ಲಿ ಎಲ್ಲಾ ತರಗತಿಗಳಿಗೂ ವಿಷಯ ರವಾನಿಸುವ ವ್ಯವಸ್ಥೆ (ಪಬ್ಲಿಕ್ ಎಡ್ರೆಸಿಂಗ್ ಸಿಸ್ಟಮ್)
* ಪ್ರತಿಯೊಬ್ಬ ವಿದ್ಯಾರ್ಥಿಗೂ ಸೂಕ್ತವಾದ ಆಸನದ ವ್ಯವಸ್ಥೆ
* ಪ್ರತೀ ತಿಂಗಳ ಕೊನೆಯಲ್ಲಿ ತಿಂಗಳ ಪರೀಕ್ಷೆ (ಘಟಕ ಪರೀಕ್ಷೆ) ಮತ್ತು ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗುವುದು.
* ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದು ಸಮಾಲೋಚನೆ ಸಭೆ
* ವಿದ್ಯಾರ್ಥಿಯ ಅಭಿವೃದ್ಧಿಯಲ್ಲಿ ವೈಯಕ್ತಿಕ ಗಮನಹರಿಸುವಿಕೆ
* ಪ್ರತ್ಯೇಕವಾದ ಆಡಳಿತ ಮಂಡಳಿ ಕಛೇರಿ, ಆಡಳಿತಾಧಿಕಾರಿಗಳ ಕಛೇರಿ, ಮುಖ್ಯ ಶಿಕ್ಷಕರ ಕಛೇರಿ, ಶಿಕ್ಷಕರ ಕಛೇರಿ, ಸ್ವಚ್ಛತೆಯಿಂದ ಕೂಡಿದ ಅಡುಗೆಕೋಣೆ, ಊಟದ ಕೊಠಡಿ, ಪ್ರತ್ಯೇಕವಾದ ಶೌಚಾಲಯ ಇತ್ಯಾದಿ.
* ಕ್ಯಾಂಪಸ್ ಒಳಗಡೆ ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಕ್ಯಾಮರಾ ಅಳವಡಿಕೆ
* ಪ್ರತೀ ಶನಿವಾರ ವೈದ್ಯರ ಭೇಟಿ, ಯೋಗತರಬೇತಿ, ಪ್ರತ್ಯೇಕ ಕಂಪ್ಯೂಟರ್ ಕೊಠಡಿ, ಗ್ರಂಥಾಲಯ ವ್ಯವಸ್ಥೆ, ಶಾಸ್ತ್ರೀಯ ನೃತ್ಯ, ಪಾಶ್ಚಿಮಾತ್ಯ ನೃತ್ಯ, ಯಕ್ಷಗಾನ, ಕರಾಟೆ, ಚಿತ್ರಕಲೆ, ಸಂಗೀತ ಮುಂತಾದ ಪಠ್ಯೇತರ ಚಟುವಟಿಕೆಗಳಿಗೆ ಮುಕ್ತ ಅವಕಾಶ ಮತ್ತು ತರಬೇತಿ
* ರಾಷ್ಟ್ರೀಯ ಹಬ್ಬಗಳ ದಿನಾಚರಣೆ, ಕ್ರೀಡಾ ದಿನಾಚರಣೆ, ಮಕ್ಕಳದಿನಾಚರಣೆ, ಶಾಲಾ ವಾರ್ಷಿಕೋತ್ಸವ, ಇತ್ಯಾದಿ ಕಾರ್ಯಕ್ರಮಗಳ ಸಂಘಟನೆ.
* ಕೊಡಗು ಮತ್ತು ದ.ಕ. ಜಿಲ್ಲೆಯ ಸುತ್ತಮುತ್ತ ಶಾಲಾ ವಾಹನ ವ್ಯವಸ್ಥೆಯಿರುತ್ತದೆ.
*ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪೆರಾಜೆ ಮತ್ತು ತೊಡಿಕಾನ ಕಡೆಗೆ ನೂತನ ಶಾಲಾ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ :ನಾನು ಮರ್ಕಂಜದ ನಿವಾಸಿಯಾಗಿದ್ದು ನನ್ನ ಮಗಳು ಸೇರಿದಂತೆ ಸುಮಾರು ೫೦ ಜನ ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ. ಶಾಲಾ ವಾಹನದ ವ್ಯವಸ್ಥೆ ಇದೆ. ಅಷ್ಟು ದೂರದಿಂದ ಮಕ್ಕಳ ಬರುವಿಕೆಗೆ ಉತ್ತಮ ಶಿಕ್ಷಣವೇ ಸಾಕ್ಷಿ. ೨ನೇ ತರಗತಿಯಲ್ಲಿರುವ ನನ್ನ ಮಗಳು ಚೆನ್ನಾಗಿ ಇಂಗ್ಲೀಷ್ ಮಾತನಾಡುತ್ತಾಳೆ. – ಸುಧಾಕರ ಮರ್ಕಂಜ
(ಪೋಷಕರು)

ಪ್ರತಿಭೆಗಳಿಗೆ ಪ್ರೋತ್ಸಾಹ :   ನನ್ನ ಮಗಳು ೪ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಲಿಕೆಯಲ್ಲಿ ಉತ್ತಮ ಅಂಕ ಪಡೆಯುವುದರೊಂದಿಗೆ, ಪ್ರತಿಭಾ ಕಾರಂಜಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಆಧುನಿಕ ಸೌಲಭ್ಯಗಳನ್ನು ಬಳಸಿ ಶಿಕ್ಷಣ ನೀಡುತ್ತಿರುವ ಸಂಸ್ಥೆ ಇನ್ನೂ ಅಭಿವೃದ್ಧಿ ಹೊಂದಲಿ.  – ಅಪ್ಪಣ್ಣ ಕಲ್ಲುಗುಂಡಿ (ಪೋಷಕರು)

ಅತ್ಯುತ್ತಮ ವ್ಯವಸ್ಥೆ : ಎಲ್ಲಾ ವ್ಯವಸ್ಥೆಯನ್ನು ಹೊಂದಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆ. ಶಿಕ್ಷಣದ ಗುಣಮಟ್ಟ, ಶಾಲಾ ವಾಹನದ ವ್ಯವಸ್ಥೆ, ಪಠ್ಯೇತರ ಚಟುವಟಿಕೆ, ಮಕ್ಕಳಿಗೆ ಊಟದ ವ್ಯವಸ್ಥೆ ಸೇರಿದಂತೆ ಗ್ರಾಮೀಣ ಪ್ರದೇಶದ ಅತ್ಯುತ್ತಮ ಶಾಲೆಯಾ ಗಿದೆ. ಸಮಯ ಪಾಲನೆ, ಶಿಸ್ತುಬದ್ಧತೆಯನ್ನು ಇಲ್ಲಿ ಕಾಣಬಹುದಾಗಿದೆ. ನನ್ನ ಎರಡೂ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಉತ್ತಮ ಅಂಕಗಳನ್ನು ಗಳಿಸುತ್ತಿದ್ದಾರೆ.   ಬಾಲಕೃಷ್ಣ ರೈ ಅರಂತೋಡು (ಪೋಷಕರು)

ಉತ್ತಮ ವಾತಾವರಣ : ಒಳ್ಳೆಯ ಸೌಲಭ್ಯ, ಅನುಭವೀ ಶಿಕ್ಷಕರ ತಂಡ, ಶಿಸ್ತುಬದ್ಧ ಆಡಳಿತ ಮಂಡಳಿ ಇದ್ದರೆ ಶಿಕ್ಷಣ ಸಂಸ್ಥೆ ಚೆನ್ನಾಗಿ ನಡೆಯುತ್ತದೆ, ಅಭಿವೃದ್ಧಿ ಹೊಂದುತ್ತದೆ ಎಂಬುದಕ್ಕೆ ಮಾರುತಿ ಸ್ಕೂಲ್ ನಿದರ್ಶನ.  ಯೂಸುಫ್ ಅಂಜಿಕ್ಕಾರ್  (ಪೋಷಕರು)

ಪ್ರತಿಭೆಗಳಿಗೆ ಪ್ರೋತ್ಸಾಹ : ನನ್ನ ಮಗಳು ೪ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಲಿಕೆಯಲ್ಲಿ ಉತ್ತಮ ಅಂಕ ಪಡೆಯುವುದರೊಂದಿಗೆ, ಪ್ರತಿಭಾ ಕಾರಂಜಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಆಧುನಿಕ ಸೌಲಭ್ಯಗಳನ್ನು ಬಳಸಿ ಶಿಕ್ಷಣ ನೀಡುತ್ತಿರುವ ಸಂಸ್ಥೆ ಇನ್ನೂ ಅಭಿವೃದ್ಧಿ ಹೊಂದಲಿ.   ಅಪ್ಪಣ್ಣ ಕಲ್ಲುಗುಂಡಿ (ಪೋಷಕರು)

ಪಠ್ಯೇತರ ಚಟುವಟಿಕೆಗಳಿಗೂ ಪ್ರಾಧಾನ್ಯತೆ : ಶಿಕ್ಷಣದ ಜೊತೆಗೆ ಸಂಗೀತ, ಡ್ಯಾನ್ಸ್ , ಯೋಗ ತರಬೇತು ನೀಡುವುದರೊಂದಿಗೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲಿ ಇದೆ. ಇಲ್ಲಿನ ಗುಣಮಟ್ಟದ ಶಿಕ್ಷಣವನ್ನು ಬೇರೆ ಕಡೆ ಕಾಣಲು ಸಾಧ್ಯವಿಲ್ಲ.   ಸುಮನ್‌ಕುಮಾರ್ ಚೆಂಬು (ಪೋಷಕರು)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.