ಜಯನಗರ ಪರಿಸರದ ವಿದ್ಯುತ್ ಲೈನ್‌ನಲ್ಲಿ ನಿರಂತರ ಕರೆಂಟ್ ಕಣ್ಣಾಮುಚ್ಚಾಲೆ- ಸಾರ್ವಜನಿಕರಿಂದ ಅಕ್ರೋಶ

Advt_Headding_Middle
Advt_Headding_Middle
Advt_Headding_Middle

ಜಯನಗರ ಭಾಗದ ವಿದ್ಯುತ್ ಲೈನ್‌ನಲ್ಲಿ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆಯಾಗುತ್ತಿರುವ ಕಾರಣ ಜನತೆ ಕುಡಿಯುವ ನೀರಿಗೆ ಪರಿತಬಿಸುವಂತೆಯಾಗಿದೆ. ಜಯನಗರ ಪರಿಸರಕ್ಕೆ ವಿದ್ಯುತ್ ಸರಬರಾಜಿಗೆ ಹಲವಾರು ಲೈನ್‌ಗಳು ಚಾಲ್ತಿಯಲ್ಲಿದ್ದು ಅದರಲ್ಲಿ ಮುಖ್ಯವಾಗಿ ಜಯನಗರ ಪರಿಸರದಲ್ಲಿ ನೀರಿಗೆ ಮೋಟಾರು ಅಳವಡಿಸಿರುವಂತಹ ಒಂದು ಲೈನ್‌ನಲ್ಲಿ ನಿರಂತರವಾಗಿ ಕರೆಂಟ್ ಕಣ್ಣಾಮುಚ್ಚಾಲೆ ಆಡುತ್ತಿದೆ.
ಈ ಬಿರು ಬಿಸಿಲಿನ ಸಂದರ್ಭದಲ್ಲಿ ಪರಿಸರದ ಕೆಲವು ಮನೆಗಳು ಕುಡಿಯುವ ನೀರಿಲ್ಲದೆ ರಾತ್ರಿ ಹೊತ್ತು ಕರೆಂಟ್ ಇಲ್ಲದೆ ತಮ್ಮ ತಮ್ಮ ಗೋಳನ್ನು ಕೇಳುವರು ಯಾರಿಲ್ಲವೆಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀರು ಸರಬರಾಜು ವಿಭಾಗದವರಲ್ಲಿ ವಿಚಾರಿಸಿದಾಗ ಕುದ್ಪಾಜೆ ರಬ್ಬರ್ ತೋಟ, ಹೊಸಗದ್ದೆ, ಜಯನಗರ ಶಾಲೆಯ ಬಳಿ ದೊಡ್ಡ ದೊಡ್ಡ ಮರಗಳು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತಿದ್ದು ತಂತಿಯಲ್ಲಿ ಬರುವಂತಹ ವಿದ್ಯತ್‌ಚ್ಛಕ್ತಿಯು ಮರದ ರೆಂಬೆಗಳಿಗೆ ತಾಗಿ ಪೋಲಾಗುತ್ತಿರುವುದ್ದರಿಂದ ನೀರಿನ ಮೋಟಾರಿಗೆ ಬಳಸುವಷ್ಟು ಕರೆಂಟ್ ಸಿಗದೆ ಇರುವುದೆ ಮೋಟಾರು ರನ್ ಆಗದಿರಲು ಕಾರಣ ಇದರಿಂದ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮೆಸ್ಕಾಂ ಈ ಸಮಸ್ಯೆಯನ್ನು ಸರಿಪಡಿಸಿದರೆ ಸಾರ್ವಜನಕರಿಗೆ ಸಹಕಾರಿಯಾಗುವುದು ಎಂದು ಸುದ್ದಿಗೆ ತಿಳಿಸಿದ್ದಾರೆ.
ಮೇ.೪ರಂದು ಸಂಜೆ ಸಮಯದಲ್ಲಿ ಜಯನಗರ ಶಾಲಾ ಬಳಿ ಸೇರಿದ ಸ್ಥಳೀಯರು ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದ್ದರಿಂದ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿ ಮಾಡಿಕೊಂಡರು. ನಿರಂತರವಾಗಿ ಈ ಸಮಸ್ಯೆ ಜಯನಗರದ ಕೆಲವು ನಿವಾಸಿಗಳನ್ನು ಸಂಕಷ್ಟದಲ್ಲಿ ಇಟ್ಟಿರುವುದಂತು ಸತ್ಯ. ಕೂಡಲೇ ಸಂಬಂಧಪಟ್ಟವರು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.