HomePage_Banner
HomePage_Banner
HomePage_Banner
HomePage_Banner

ಕಪ್ಪುವರ್ಣದ ತ್ವಚೆಯು ಸುಂದರವಾದದ್ದೇ; ಆಯುರ್ವೇದದ ನೆರವಿನಿಂದ ಅದನ್ನು ಕಾಂತಿಯುತವನ್ನಾಗಿಸಿಕೊಳ್ಳಿರಿ !

ತಮ್ಮ ತಮ್ಮ ಕಾಲಘಟ್ಟಗಳಲ್ಲಿ, ಸಮಾಜದ ಕುರಿತಂತೆ ಏನಾದರೂ ತಪ್ಪಾಗಿದೆ ಎಂದು ಅನಿಸಿದಲ್ಲಿ, ಪ್ರತಿ ತಲೆಮಾರೂ ಸಹ ಅಂತಹ ತಪ್ಪು ಅಥವಾ ಲೋಪದೋಷದ ವಿರುದ್ಧ ತಿರುಗಿಬಿದ್ದಿರುವುದರ ಕುರಿತು ಮನುಕುಲದ ಇತಿಹಾಸದಲ್ಲಿ ಕಾಣಬಹುದಾಗಿದೆ. 19 ನೇ ಶತಮಾನವು ಗುಲಾಮೀ ಪದ್ಧತಿಯ ಮೂಲೋತ್ಪಾಟನೆಯನ್ನೂ ಹಾಗೆಯೇ ಸ್ತ್ರೀವಾದದ ಉದಯವನ್ನೂ ಕಂಡುಕೊಂಡಿತು. ಕಾರ್ಮಿಕರ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಗಾಗಿ ನಡೆದ ಹೋರಾಟಗಳಿಗೆ 20 ನೆಯ ಶತಮಾನವು ಸಾಕ್ಷಿಯಾಯಿತು. ಇದೀಗ 21ನೇ ಶತಮಾನವು ಲಿಂಗ, ಲೈಂಗಿಕತೆ, ದೇಹದ ಪ್ರಕಾರ, ಅಥವಾ ತ್ವಚೆಯ ವರ್ಣ ಇವ್ಯಾವುದನ್ನೂ ಪರಿಗಣಿಸದೇ ಸಮಾನತೆ ಮತ್ತು ಸ್ವೀಕಾರಕ್ಕಾಗಿ ನೀಡಲ್ಪಟ್ಟಿರುವ ಕರೆಯಿಂದ ಸದ್ದು ಮಾಡುತ್ತಿದೆ.

ಈ ಶತಮಾನದ ಪ್ರತಿಯೊಂದು ಚಳುವಳಿಯೂ ಮುಖ್ಯವಾದದ್ದೇ ಆದರೂ ಕೂಡಾ, “ಕಪ್ಪುವರ್ಣವು ಸುಂದರವಾದದ್ದು” ಎಂಬ ಚಳುವಳಿಯು ಇವೆಲ್ಲಕ್ಕಿಂತಲೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಏಕೆಂದರೆ, ಇತಿಹಾಸದ ಪುಟಗಳು ಮಾನವರೆಂಬ ಪರಿಗಣನೆಗೇ ಒಳಗಾಗದ, ಆ “ಸಾಕಷ್ಟು ಶ್ವೇತವರ್ಣೀಯರಲ್ಲದವರ” ರಕ್ತದ ಕಲೆಗಳಿಂದ ರಾರಾಜಿಸುತ್ತಿದೆ.

ಸೌಂದರ್ಯವು ನೋಡುಗರ ಕಣ್ಣುಗಳಲ್ಲಿದೆ ಎಂಬ ಗಾದೆಯ ಪ್ರಕಾರ, “ತ್ವಚೆಯ ವರ್ಣಕ್ಕಿಂತಲೂ ನಮ್ಮ ಯೋಚನೆಗಳೇ ಸೌಂದರ್ಯವನ್ನು ನಿರ್ಧರಿಸುತ್ತವೆ. ತ್ವಚೆಯ ಬಣ್ಣವೇನೋ ಹುಟ್ಟಿನೊಂದಿಗೇ ಒದಗಿ ಬರುತ್ತದೆಯಾದರೂ ಸಹ, ಮೈಕಾಂತಿ ಮತ್ತು ಸೌಂದರ್ಯವನ್ನು ಆರೈಕೆ ಮತ್ತು ಆತ್ಮವಿಶ್ವಾಸಗಳಿಂದ ನಮ್ಮದಾಗಿಸಿಕೊಳ್ಳಬಹುದು. ದೇಹದ ಮತ್ತು ಮನಸ್ಸಿನ ಸೌಂದರ್ಯವನ್ನು ವೃದ್ಧಿಸಿಕೊಳ್ಳುವುದರ ಮೂಲಕ ಬುದ್ಧಿ, ಮನಸ್ಸಿಗೆ ಹಿತಾನುಭವ ಹಾಗೂ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳುವ ದಿಶೆಯಲ್ಲಿ ಆಯುರ್ವೇದೀಯ ಜೀವನ ಶೈಲಿಯು ನೆರವಾಗುತ್ತದೆ”, ಎಂದು ಹೇಳುತ್ತಾರೆ ಲೆವೆರ್ ಆಯುಷ್ ನ ತಜ್ಞರಾಗಿರುವ ಡಾ. ಮಹೇಶ್ ಟಿ.ಎಸ್. ಅವರು. ಲೆವೆರ್ ಆಯುಷ್, ವೈಯುಕ್ತಿಕ ಆರೈಕೆ ಉತ್ಪನ್ನಗಳ ಹಿಂದೂಸ್ಥಾನ್ ಯುನಿಲೆವೆರ್ ಬ್ರಾಂಡ್ ಆಗಿದೆ.

ಕಪ್ಪುವರ್ಣದ ತ್ವಚೆ: ಇದೊಂದು ಜೀವಶಾಸ್ತ್ರೀಯ ವರದಾನ

ಇಂದಿನವರೆಗೂ ಇಡೀ ಜಗತ್ತೇ ಗೌರವರ್ಣದ ತ್ವಚೆಯ ಹಿಂದೆ ಬಿದ್ದಿರಬಹುದು, ಆದರೆ ಬಹುತೇಕ ಮಂದಿಗೆ ಅರಿವಿಲ್ಲದ ಸಂಗತಿಯೇನೆಂದರೆ, ಜೀವಶಾಸ್ತ್ರೀಯವಾಗಿ ಗೌರವರ್ಣದ ತ್ವಚೆಯು ಕಪ್ಪುವರ್ಣದ ತ್ವಚೆಗಿಂತಲೂ ಹೆಚ್ಚು ದುರ್ಬಲವಾಗಿರುತ್ತದೆ. ಕಪ್ಪುವರ್ಣದ ತ್ವಚೆಯು ಯಾವೆಲ್ಲಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

  • ಕಪ್ಪುವರ್ಣದ ತ್ವಚೆಗೆ ಕಾರಣವಾಗುವ ಮೆಲನಿನ್ ಎಂಬ ವರ್ಣಕಾರಕವು, ನಿಮ್ಮ ತ್ವಚೆಯನ್ನು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ಸಂರಕ್ಷಿಸುತ್ತದೆ. ಆದ್ದರಿಂದ, ಕಪ್ಪುವರ್ಣದ ತ್ವಚೆಯುಳ್ಳವರು ತ್ವಚೆಯ ಅರ್ಬುದ ರೋಗಕ್ಕೆ ತುತ್ತಾಗುವ ಸಾಧ್ಯತೆಯು ತೀರಾ ಕಡಿಮೆ.
  • ಕಪ್ಪುವರ್ಣದ ತ್ವಚೆಯು ಅಷ್ಟು ಸುಲಭವಾಗಿ ಸೂರ್ಯನ ಶಾಖಕ್ಕೆ ಸುಟ್ಟು ಕಪ್ಪುಕಲೆಗಳನ್ನು ಪಡೆದುಕೊಳ್ಳಲಾರದು.
  • ಗೌರವರ್ಣದ ತ್ವಚೆಯಲ್ಲಿ ರೂಪುಗೊಳ್ಳಬಹುದಾಷ್ಟು ಸುಲಭದಲ್ಲಿ, ಕಪ್ಪುವರ್ಣದ ತ್ವಚೆಯಲ್ಲಿ ನೆರಿಗೆಗಳು, ವೃದ್ದಾಪ್ಯದ ಗೆರೆಗಳು, ವೃದ್ದಾಪ್ಯದ ಕಪ್ಪು ಕಲೆಗಳು, ಮತ್ತು ಶಿಥಿಲಗೊಂಡ ರಕ್ತನಾಳಗಳು ರೂಪುಗೊಳ್ಳಲಾರವು

ಇಷ್ಟೆಲ್ಲಾ ಆದರೂ ಸಹ, ಒಂದು ವೇಳೆ ನೀವು ಕಪ್ಪುವರ್ಣದ ತ್ವಚೆಯುಳ್ಳವರಾಗಿದ್ದಲ್ಲಿ, ನೀವೂ ಸಹ ಕಾಳಜಿ ವಹಿಸಬೇಕಾದ ಕೆಲವೊಂದು ಸಂಗತಿಗಳಿವೆ. ಉದಾಹರಣೆಗೆ, ಬಿಸಿಲಿಗೆ ಮೈಯೊಡ್ಡಿದಾಗ, ಕಪ್ಪುವರ್ಣದ ತ್ವಚೆಯು Dಜೀವಸತ್ವದ ಉತ್ಪಾದನೆಯನ್ನು ತಡೆಗಟ್ಟುತ್ತದೆ. ಹೀಗಾದ್ದರಿಂದ, ಗೌರವರ್ಣದ ತ್ವಚೆಯುಳ್ಳವರಿಗಿಂತಲೂ, ಕಪ್ಪುವರ್ಣದ ತ್ವಚೆಯುಳ್ಳವರು Dಜೀವಸತ್ವದ ಕೊರತೆಯಿಂದ ಬಳಲುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಈ ಕೊರತೆಯನ್ನು ಸರಿದೂಗಿಸುವ ದಿಶೆಯಲ್ಲಿ ಕಪ್ಪುವರ್ಣದ ತ್ವಚೆಯುಳ್ಳವರಿಗೆ Dಜೀವಸತ್ವದ ಪೂರಕಗಳ (ಸಪ್ಲಿಮೆಂಟ್) ಅವಶ್ಯಕತೆ ಇರುತ್ತದೆ. ಇಷ್ಟೇ ಅಲ್ಲದೇ, ಕಪ್ಪುವರ್ಣದ ತ್ವಚೆಯು ವರ್ಣಾಧಿಕ್ಯಕ್ಕೆ ತುತ್ತಾಗುವ ಸಾಧ್ಯತೆಯು ಹೆಚ್ಚು. ತತ್ಪರಿಣಾಮವಾಗಿ, ಕಪ್ಪುವರ್ಣದ ತ್ವಚೆಯುಳ್ಳವರು ವಿಪರೀತವಾಗಿ ಬಿಸಿಲಿಗೆ ಮೈಯೊಡ್ಡಿಕೊಂಡಲ್ಲಿ ಅಂತಹವರ ತ್ವಚೆಯ ಮೇಲೆ ಕಪ್ಪುಕಲೆಗಳುಂಟಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹೀಗಾಗಿ, ಕಪ್ಪುವರ್ಣದ ತ್ವಚೆಯುಳ್ಳವರು ವರ್ಣಾಧಿಕ್ಯಕ್ಕೆ ತುತ್ತಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ!

ಕಪ್ಪುವರ್ಣದ ತ್ವಚೆಯುಳ್ಳವರಿಗಾಗಿ ಆಯುರ್ವೇದದಿಂದ ತ್ವಚೆಯ ಆರೈಕೆಯ ಕುರಿತಾದ ಪಾಠಗಳು

ಡಾ. ಮಹೇಶ್ ಅವರು ವಿವರಿಸುವ ಪ್ರಕಾರ, ಆಯುರ್ವೇದವು ದಿನಚರ್ಯ (ದೈನಂದಿನ ಜೀವನಕ್ಕೆ ಯೋಗ್ಯವಾದ) ಹಾಗೂ ಋತುಚರ್ಯ (ಆಯಾ ಕಾಲಾವಧಿಗಳಿಗೆ ತಕ್ಕುದಾದ) ಪದ್ಧತಿಗಳನ್ನು ಹಾಗೂ ಸಿದ್ಧಸೂತ್ರಗಳನ್ನು ಪಸರಿಸುತ್ತದೆ. ದಿನಚರ್ಯ ಮತ್ತು ಋತುಚರ್ಯ ಗಳೆರಡೂ ಪರಸ್ಪರ ಆಂತರಿಕವಾಗಿ ಹೆಣೆದುಕೊಂಡಿದ್ದು, ಅವುಗಳ ಸಂಬಂಧವು ಯಾವ ಸ್ವರೂಪದ್ದೆಂದರೆ ಅವೆರಡೂ ಜತೆಗೂಡಿ ದೈಹಿಕ ಸ್ವಾಸ್ಥ್ಯವನ್ನು ಚೆನ್ನಾಗಿ ಕಾಪಿಡುತ್ತವೆ. ಅಭ್ಯಂಗ, ಉದ್ವರ್ತನ, ಲೇಪನ ಇವೇ ಮೊದಲಾದ ಬಾಹ್ಯ ಲೇಪನಗಳು ಕೇವಲ ರೋಗಗಳ ನಿವಾರಣೆಗಷ್ಟೇ ಉಪಯುಕ್ತವಾದವುಗಳಲ್ಲ, ಜೊತೆಗೆ ತ್ವಚೆಯು ಯಾವ ಪ್ರಕಾರದ್ದೇ ಆಗಿರಲಿ ಅಂತಹ ತ್ವಚೆಗೆ ಆರೋಗ್ಯಕರವಾದ ಹಾಗೂ ಸುಂದರವಾದ ನೋಟವನ್ನು ಕೊಡಮಾಡುತ್ತವೆ.

ಅಷ್ಟಾಂಗ ಹೃದಯ, ಚರಕ ಸಂಹಿತಾ, ಹಾಗೂ ಸುಶ್ರುತ ಸಂಹಿತೆಯಂತಹ ಶಾಸ್ತ್ರೀಯ ಪಠ್ಯಗಳಲ್ಲಿ ಆಯುರ್ವೇದೀಯ ವಿಧಾನಗಳು ಮತ್ತು ಸಿದ್ಧಸೂತ್ರಗಳನ್ನು ಬಲು ಸೊಗಸಾಗಿ ದಾಖಲಿಸಲಾಗಿದೆ. ಹರಮೇಖಲದಂತಹ ಕೆಲವು ಪಠ್ಯಗಳೂ ಸಹ ಅಂತಹ ಸಿದ್ಧಸೂತ್ರಗಳನ್ನೊಳಗೊಂಡಿದ್ದು ಇವು ಕಾಂತಿಯುತವಾದ, ಶ್ರೀಮಂತ, ಹಾಗೂ ತಾರುಣ್ಯಪೂರ್ಣ ತ್ವಚೆಯನ್ನು ದಯಪಾಲಿಸುವ ಪ್ರಸಾಧನ ವಿಚಾರಗಳ ರೂಪದಲ್ಲಿ ಉಪಯುಕ್ತವಾಗಿವೆ.

ಆಯುರ್ವೇದವು 5000 ವರ್ಷಗಳಷ್ಟು ಪ್ರಾಚೀನವಾದ ವೈದ್ಯ ವಿಜ್ಞಾನವಾಗಿದ್ದು, ಇದು ಪ್ರಾಚೀನ ಪುರಾಣ ಗ್ರಂಥಗಳ ಬೋಧನೆಗಳು ಹಾಗೂ ಗಿಡಮೂಲಿಕೆಗಳು, ಸಾಂಬಾರ ಪದಾರ್ಥಗಳು, ಮತ್ತು ಸಸ್ಯಗಳ ನೈಸರ್ಗಿಕ ಗುಣಧರ್ಮಗಳ ಮೇಲೆ ಆಧಾರಿತವಾಗಿದೆ. ಇವೆಲ್ಲವೂ ವೈವಿಧ್ಯಮಯ ರೋಗರುಜಿನಗಳ ನಿವಾರಣೆಗೆ ಪೂರಕವಾಗಿವೆ ಹಾಗೂ ಜೊತೆಗೆ ತ್ವಚೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೂ ಪರಿಹಾರೋಪಾಯಗಳಾಗಿವೆ. ಆಯುರ್ವೇದದ ಪ್ರಕಾರ, ಬಾಹ್ಯ ಸೌಂದರ್ಯದಿಂದ ಕಂಗೊಳಿಸುವುದರ ಮೂಲಮಂತ್ರವು ಯಾವುದೆಂದರೆ ಅದು ಆಂತರಿಕ ಜೈವಿಕ ಶಕ್ತಿಗಳನ್ನು ಸಮತೋಲನದಲ್ಲಿರಿಸಿಕೊಳ್ಳುವುದೇ ಆಗಿದೆ. ಈ ಆಂತರಿಕ ಜೈವಿಕ ಶಕ್ತಿಗಳನ್ನೇ ಆಯುರ್ವೇದದಲ್ಲಿ ದೋಷಗಳು ಎಂದು ಹೆಸರಿಸಲಾಗಿದ್ದು, ಇವುಗಳನ್ನು ಸಮತೋಲನದಲ್ಲಿರಿಸಿಕೊಂಡದ್ದೇ ಆದರೆ, ಆಂತರಿಕವಾಗಿ ಶರೀರ ಸ್ವಾಸ್ಥ್ಯವನ್ನೂ ಪಡೆದುಕೊಳ್ಳಬಹುದು ಮತ್ತು ಹಾಗೆಯೇ ಜೊತೆಗೆ ಬಾಹ್ಯ ಸೌಂದರ್ಯದಿಂದ ಕಂಗೊಳಿಸಬಹುದು.

ಮೇಲೆ ಸೂಚಿಸಿರುವ ಸಿದ್ಧಸೂತ್ರದೊಂದಿಗೆ ತಾಳೆಹೊಂದುವ ರೀತಿಯಲ್ಲಿ, ನಿಮ್ಮ ಸುಂದರವಾದ ಕಪ್ಪುವರ್ಣದ ತ್ವಚೆಯನ್ನು ಆರೋಗ್ಯಪೂರ್ಣವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪೂರಕವಾಗಿರುವ ಕೆಲವು ಅತ್ಯುತ್ತಮವಾದ ಆಯುರ್ವೇದೀಯ ಆಚರಣೆಗಳ ಕುರಿತು ಈ ಕೆಳಗೆ ಪ್ರಸ್ತಾವಿಸಲಾಗಿದೆ.

1. ನಿಮ್ಮ ದೋಷದ ಬಗ್ಗೆ ಅರಿತುಕೊಳ್ಳಿರಿ

ಎಲ್ಲಾ ಮಾನವ ಶರೀರಗಳೂ ಮೂರು ವಿಧದ ದೋಷಗಳಿಂದ ರೂಪುಗೊಂಡಿರುತ್ತವೆ – ಅವು ವಾತ, ಪಿತ್ತ, ಮತ್ತು ಕಫ಼ ಗಳೆಂಬ ದೋಷಗಳು. ವ್ಯಕ್ತಿಯೋರ್ವನ ವಿಚಾರದಲ್ಲಿ ಹೇಳಬೇಕೆಂದರೆ, ಪ್ರತಿಯೋರ್ವ ವ್ಯಕ್ತಿಯೂ ಈ ಮೂರು ದೋಷಗಳ ಪೈಕಿ ಕನಿಷ್ಟ ಪಕ್ಷ ಯಾವುದಾದರೊಂದನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಸಾಧ್ಯತೆಯು ಇರುತ್ತದೆ. ಈ ಸಂಗತಿಯು ಆ ವ್ಯಕ್ತಿಯ ತ್ವಚೆಯ ನಮೂನೆಯಲ್ಲಿ ವ್ಯಕ್ತಗೊಳ್ಳುತ್ತದೆ.

  • ವಾತ ದೋಷವುಳ್ಳವರ ತ್ವಚೆಯ ನಮೂನೆ: ತ್ವಚೆಯು ತೆಳುವಾಗಿದ್ದು, ಶುಷ್ಕವಾಗಿರುತ್ತದೆ. ಸುಲಭವಾಗಿ ಸುಕ್ಕುಗಟ್ಟುತ್ತದೆ ಹಾಗೂ ಬಲು ನಾಜೂಕಿನದ್ದಾಗಿರುತ್ತದೆ.
  • ಪಿತ್ತ ದೋಷವುಳ್ಳವರ ತ್ವಚೆಯ ನಮೂನೆ: ತ್ವಚೆಯು ಸೂಕ್ಷ್ಮ ಪ್ರಕೃತಿಯದ್ದಾಗಿರುತ್ತದೆ. ಬೊಕ್ಕೆ, ಮೊಡವೆ, ಹಾಗೂ ಬಾವುಗಳುಂಟಾಗುವ ಸಾಧ್ಯತೆಯು ಹೆಚ್ಚು.
  • ಕಫ ದೋಷವುಳ್ಳವರ ತ್ವಚೆಯ ನಮೂನೆ: ಇತರ ತ್ವಚೆಯ ನಮೂನೆಗಳಿಗಿಂತ ಈ ನಮೂನೆಯ ತ್ವಚೆಯು ಹೆಚ್ಚು ತೈಲಾಂಶಯುಕ್ತವಾಗಿದ್ದು ಹೆಚ್ಚು ದಪ್ಪಗಿರುತ್ತದೆ. ಈ ಪ್ರಕಾರದ ತ್ವಚೆಯು ಕಪ್ಪುಕಲೆಗಳಿಗೆ ತುತ್ತಾಗುವ ಸಾಧ್ಯತೆಯು ಹೆಚ್ಚು.

ಆದ್ದರಿಂದ, ಒಂದು ವೇಳೆ ನಿಮಗೆ ನಿಮ್ಮ ತ್ವಚೆಯ ಪ್ರಧಾನ ದೋಷವು ಯಾವುದೆಂದು ಅರಿವಿದ್ದಲ್ಲಿ, ನೀವು ಅದಕ್ಕೆ ಸೂಕ್ತವಾಗಿರುವ ಆರೈಕೆಯ ಕ್ರಮವನ್ನು ಕೈಗೊಳ್ಳಬಹುದು.

2. ನಿಮ್ಮ ತ್ವಚೆಯ ನಮೂನೆಗನುಸಾರವಾಗಿ ನಿಮ್ಮ ಮುಖವನ್ನು ತೇವವಾಗಿರಿಸಿಕೊಳ್ಳಿರಿ

ವಾತ ದೋಷವುಳ್ಳ ತ್ವಚೆಯ ಪ್ರಕಾರವು, ಕೊಬ್ಬರಿ ಎಣ್ಣೆ ಆಧಾರಿತ ತೇವಕಾರಕಗಳನ್ನು ಹಚ್ಚಿಕೊಳ್ಳುವುದರಿಂದ ಅಥವಾ ಲೆವೆರ್ ಆಯುಷ್ ತೇವಕಾರಕ ಆಕಳ ತುಪ್ಪದ ಸಾಬೂನಿನಂತಹ ಕೊಬ್ಬಿನಾಂಶವುಳ್ಳ ಸಾಬೂನಿನಿಂದ ಸ್ನಾನ ಮಾಡುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುತ್ತದೆಯಾದರೂ ಸಹ, ಹೆಚ್ಚಿನ ಪ್ರಮಾಣದಲ್ಲಿ ತೈಲಾಂಶವುಳ್ಳ ಹಾಗೂ ಕಫ ದೋಷವುಳ್ಳ ತ್ವಚೆಯ ಪ್ರಕಾರವು, ತೈಲ-ನಿವಾರಕ ಫ಼ೇಸ್ ಪ್ಯಾಕ್ ಗಳ ಬಳಕೆಯಿಂದ ಹೆಚ್ಚು ಗೌರವರ್ಣವನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ ಕಡ್ಲೆಹಿಟ್ಟನ್ನು ಬಳಸಿಕೊಂಡು ತಯಾರಿಸಲಾದ ಫೇಸ್ ಪ್ಯಾಕ್ ಗಳು.

3. ಬೇಸಿಗೆಯ ಅವಧಿಯಲ್ಲಿ ನಿರ್ಜೀವ ತ್ವಚೆಯನ್ನು ನಿವಾರಿಸುವುದಕ್ಕಾಗಿ ಸಕ್ಕರೆಯನ್ನು ಬಳಸಿಕೊಳ್ಳಿರಿ

ಕೆಲವು ಪಾಶ್ಚಾತ್ಯ ಆಯುರ್ವೇದೀಯ ವೈದ್ಯರುಗಳ ಪ್ರಕಾರ, ಸಕ್ಕರೆಯು ತಂಪುಕಾರಕ ಗುಣಧರ್ಮವುಳ್ಳದ್ದಾಗಿದೆ. ಹೀಗಾಗಿ, ಬೇಸಿಗೆಯ ಅವಧಿಯಲ್ಲಿ ನಿರ್ಜೀವ, ಶುಷ್ಕ ತ್ವಚೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಸಕ್ಕರೆಯ ಬಳಕೆಯು ನಿಜಕ್ಕೂ ಒಂದು ಅತ್ಯುತ್ತಮ ಮಾರ್ಗೋಪಾಯವಾಗಿದೆ. ಗುಲಾಬಿಯ ಪಕಳೆಗಳು ಅಥವಾ ಭೃಂಗರಾಜಕ್ಕೂ ತಂಪುಕಾರಕ ಗುಣಧರ್ಮಗಳಿರುವುದರಿಂದ ಈ ಮಿಶ್ರಣಕ್ಕೆ ನೀವು ಇವುಗಳನ್ನೂ ಸೇರಿಸಿಕೊಳ್ಳಬಹುದು.

4.ಹಸಿಹಾಲನ್ನು ಬಳಸಿಕೊಂಡು ನಿಮ್ಮ ಮುಖವನ್ನು ಸ್ವಚ್ಚಗೊಳಿಸಿಕೊಳ್ಳಿರಿ

ಹಾಲಿನಲ್ಲಿ ಅಡಕವಾಗಿರುವ ಅತ್ಯದ್ಭುತ ಗುಣಧರ್ಮಗಳನ್ನು ಆಯುರ್ವೇದವು ಗುರುತಿಸಿದೆ. ಆದ್ದರಿಂದಲೇ ಬಹಳಷ್ಟು ಆಯುರ್ವೇದೀಯ ಪರಿಹಾರಗಳು ಈ ಘಟಕವನ್ನು ತಮ್ಮ ಮಿಶ್ರಣದಲ್ಲಿ ಒಳಗೊಂಡಿವೆ. ಈಗ ನಿಮ್ಮ ತ್ವಚೆಯ ಆರೈಕೆಯ ಉಪಕ್ರಮವೂ ಸಹ ಹಾಲಿನಿಂದ ಹೊರತಾದದ್ದಲ್ಲ. ಹೊರಗಿನ ವಾತಾವರಣವು ಬಿಸಿಯಾಗಿದ್ದು, ತೇವವಾಗಿದ್ದಾಗ, ಹಸಿಹಾಲಿನಲ್ಲಿ ಅದ್ದಿದ ಹತ್ತಿಯ ಉಂಡೆಯನ್ನು ಬಳಸಿಕೊಂಡು ನಿಮ್ಮ ಮುಖವನ್ನು ಒರೆಸಿಕೊಳ್ಳಿರಿ ಹಾಗೂ ನಿಮ್ಮ ತ್ವಚೆಯ ರಂಧ್ರಗಳನ್ನು ಸ್ವಚ್ಚಗೊಳಿಸಿಕೊಳ್ಳಿರಿ. ನಿಮ್ಮ ತ್ವಚೆಯ ಒಟ್ಟಂದದ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ನೀವು ಹಸಿಹಾಲಿನಲ್ಲಿ ಸ್ನಾನವನ್ನೂ ಕೂಡಾ ಕೈಗೊಳ್ಳಬಹುದು.

5.ಮೊಡವೆಗಳ ಮೇಲೆ ಬೇವಿನ ಎಣ್ಣೆಯನ್ನು ಹಚ್ಚಿಕೊಳ್ಳಿರಿ

ತನ್ನ ಬೇರುಗಳಿಂದ ಎಲೆಗಳವರೆಗೂ ಜೌಷಧೀಯ ಗುಣಧರ್ಮಗಳಿಂದ ಭರ್ತಿಯಾಗಿರುವ ಪ್ರಬಲ ವೃಕ್ಷವೇ ಬೇವಿನ ಮರ. ಆದ್ದರಿಂದಲೇ ಆಯುರ್ವೇದವು ಬೇವಿನ ಎಣ್ಣೆಯನ್ನು ಮೊಡವೆಗಳ ಮೇಲೆ ಹಚ್ಚಿ, ಅದನ್ನು ಒಂದು ರಾತ್ರಿಯಿಡೀ ಇರಗೊಡುವಂತೆ ಶಿಫಾರಸು ಮಾಡುತ್ತದೆ. ಹೀಗೆ ಮಾಡುವುದರಿಂದ, ಕಲೆಯುಂಟಾಗುವುದನ್ನು ತಡೆಗಟ್ಟಿದಂತಾಗುತ್ತದೆ ಹಾಗೂ ತ್ವಚೆಯಲ್ಲುಂಟಾದ ಬಿರುಕು ಬೇಗನೇ ಗುಣ ಕಾಣುತ್ತದೆ.

6.ಅರಿಶಿನದ ಫೇಸ್ ಪ್ಯಾಕ್ ಗಳನ್ನು ಬಳಸಿರಿ

ತಾನು ಒಳಗೊಂಡಿರುವ ಔಷಧೀಯ ಗುಣಧರ್ಮಗಳ ಕಾರಣಕ್ಕಾಗಿ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಮತ್ತೊಂದು ಬೇರು ಈ ಅರಿಶಿನ ಆಗಿದೆ. ತ್ವಚೆಯ ಆರೋಗ್ಯಕ್ಕೆ ಅರಿಶಿನವು ಬಹಳ ಒಳ್ಳೆಯದು! ಅರಿಶಿನವನ್ನು ನೀವು ಬಹುವಿಧಗಳಲ್ಲಿ ಬಳಸಿಕೊಳ್ಳಬಹುದು – ಮನೆಯಲ್ಲೇ ತಯಾರಿಸಲಾದ ಫೇಸ್ ಪ್ಯಾಕ್ ಗಳಿಗೆ ಸೇರಿಸುವುದರ ಮೂಲಕ, ಅರಿಶಿನಯುಕ್ತ ಹಾಲನ್ನು ಕುಡಿಯುವುದರ ಮೂಲಕ, ಹಾಗೂ ಅರಿಶಿನದಿಂದ ಸಮೃದ್ಧವಾಗಿರುವ Lever AYUSH Anti-Pimple Turmeric Face Wash ನಂತಹ ಫೇಸ್ ವಾಶ್

* ಡಾ. ಮಹೇಶ್ ಅವರು ಆಲೀಘರ್ ನ ಜೀವನ್ ಜ್ಯೋತಿ ಆಯುರ್ವೇದ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಭಾಗದ ಮುಖ್ಯಸ್ಥರೂ ಹಾಗೂ ಪ್ರಾಧ್ಯಾಪಕರೂ ಆಗಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿರಿ!

ಕಪ್ಪುವರ್ಣದ ತ್ವಚೆಯುಳ್ಳ ನಿಮ್ಮ ಸ್ನೇಹಿತರಿಗೂ ಒಂದಿಷ್ಟು ಪ್ರೀತಿಯನ್ನು ತೋರಿಸಿರಿ. ಈ ಲೇಖನವನ್ನು ಅವರೊಂದಿಗೆ ಹಂಚಿಕೊಳ್ಳುವುದರ ಮೂಲಕ, ಅವರೂ ಸಹ ತಮ್ಮ ತ್ವಚೆಯ ವರ್ಣದ ಕುರಿತಾಗಿ ಹೆಮ್ಮೆಯಿಂದಿರುವಂತೆ ಮಾಡಿರಿ ಹಾಗೂ ತ್ವಚೆಯನ್ನು ತಾರುಣ್ಯಪೂರ್ಣವಾಗಿ, ಸುಂದರವಾಗಿ, ಹಾಗೂ ಸಮೃದ್ಧವಾಗಿ ಇರಿಸಿಕೊಳ್ಳುವುದು ಹೇಗೆಂದು ಅವರೂ ತಿಳಿದುಕೊಳ್ಳುವಂತಾಗಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.