HomePage_Banner
HomePage_Banner

ಫಾರಂ ಕೋಳಿಗಳಿಂದ ನಿಫಾ ವೈರಸ್ ಸಂದೇಶ; ಓರ್ವನ ಬಂಧನ.

ತಿರುವನಂತಪುರಂ: ಫಾರಂ ಕೋಳಿಗಳಿಂದ ನಿಫಾ ವೈರಸ್‌ ಹರಡುತ್ತದೆ ಎಂದು ಸಾಮಾಜಿಕ ತಾಣಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸಿದ ಓರ್ವನನ್ನ ಕೇರಳದ ಮೂವಾಟ್ಟುಪುಝದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಓರ್ವನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿರುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.

ಕಣ್ಣೂರಿನ ಮೂವಾಟ್ಟುಪುಝದಲ್ಲಿ ಕೋಳಿಗಳಿಂದ ನಿಫಾ ವೈರಸ್‌ ಹರಡುತ್ತಿರುವುದನ್ನು ಪುಣೆಯ ವೈರಾಲಜಿ ಸಂಸ್ಥೆ ನಿರ್ದೇಶಕ ಡಾ. ಆನಂದ ಬಸು ಅವರು ಖಚಿತಪಡಿಸಿದ್ದಾರೆ ಎಂಬ ಸಂದೇಶ ವಾಟ್ಸಾಪ್’ಗಳಲ್ಲಿ ಹರಿದಾಡುತ್ತಿದೆ.
ಇದರ ವಿರುದ್ಧ ಕೇರಳದ ಫಾರಂ ಕೋಳಿ ವಿತರಕರ ಸಂಘವು ನೀಡಿದ ದೂರಿನ ಮೇರೆಗೆ ಸುನಿಲ್‌ ಕುಮಾರ್‌(28)ಎಂಬಾತನನ್ನು ಬಂಧಿಸಲಾಗಿದೆ. ಸುನಿಲ್‌ ಕುಮಾರ್‌ ತನೆಗೆ ಬಂದ ಸಂದೇಶಕ್ಕೆ, ಜೀವ ಉಳಿಸಿ ಎಂಬ ಟ್ಯಾಗ್‌ ಲೈನ್‌ ಸೇರಿಸಿ, ಇತರರಿಗೆ ಕಳುಹಿಸಿದ್ದಾನೆ. ಅಲ್ಲದೆ ಕೋಳಿ ಮಾಂಸ ತಿನ್ನದಂತೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿರುವುದಾಗಿ ಕಣ್ಣೂರು ನಗರ ಉಪ ಪೊಲೀಸ್ ಅಧೀಕ್ಷಕ ಶ್ರೀಜಿತ್‌ ಕೊಡೇರಿ ತಿಳಿಸಿದ್ದಾರೆ. 

ನಕಲಿ ಸಂದೇಶದ
ಮತ್ತೊಂದು ಪ್ರಕರಣದಲ್ಲಿ, ಫಾರಂ ಕೋಳಿಗಳಲ್ಲಿ ನಿಫಾ ವೈರಸ್‌ ಪತ್ತೆಯಾಗಿದ್ದು, ಪ್ರಯೋಗಾಲಯಗಳು ಈ ವಿಚಾರವನ್ನು ಅಧಿಕೃತಗೊಳಿಸಿದೆ. ಅಲ್ಲದೆ ಆರೋಗ್ಯ ಇಲಾಖೆಯೂ ಈ ಬಗ್ಗೆ ಎಚ್ಚರಿಕೆ ನೀಡಿರುವುದಾಗಿ ಸಂದೇಶ ಹರಿದಾಡಿತ್ತು. ಅಲ್ಲದೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ನಕಲಿ ಸೀಲ್‌ ಬಳಸಿ, ಎಚ್ಚರಿಕೆ ಸಂದೇಶಗಳನ್ನೂ ರವಾನಿಸಲಾಗಿದೆ. ಈ ಸಂಬಂಧ ಓರ್ವನನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳು ಬಳಿಕ ಬಿಡುಗಡೆ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.