HomePage_Banner
HomePage_Banner
HomePage_Banner
HomePage_Banner

ಹೆಚ್ಚುತ್ತಿದೆ ಡೆಂಗ್ಯೂ ಹಾವಳಿ…..

ಮುಂಗಾರು ಜೋರಾಗಿ ಅಪ್ಪಳಿಸುತ್ತಿದೆ. ಇದರೊಂದಿಗೆ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಂಡು ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಈ ಭಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಡೆಂಗ್ಯೂ, ವೈರಲ್ ಜ್ವರಗಳಿಂದ ಅನಾರೋಗ್ಯದಿಂದ ಜನರು ಆಸ್ಪತ್ರೆಯಲ್ಲಿ ಮುಗಿಬೀಳುತ್ತಿದ್ದಾರೆ.

ಎಲಿಮಲೆ, ಕನಕಮಜಲು, ಗುತ್ತಿಗಾರು, ಹಾಗು ಇನ್ನಿತರ ಪ್ರದೇಶಗಳಿಗೆ ಹರಡುತ್ತಾ ಬಂದಿರುವ ಡೆಂಗ್ಯೂ ಎಂಬ ಮಾರಕ ರೋಗವು ಇಂದು ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.

ಸಾಧಾರಣವಾಗಿ ಜೂನ್ ತಿಂಗಳಿಂದ ಆರಂಭಗೊಂಡು ಆಗೋಸ್ಟ್  ತಿಂಗಳ ವರೆಗೆ ಡೆಂಗ್ಯೂ ಜ್ವರವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೊಳ್ಳೆಯ ಉತ್ಪತ್ತಿಯು ರಬ್ಬರ್ ಬೆಳೆಯುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವುದು. ರಬ್ಬರ್ ಚಿಪ್ಪಿಗಳನ್ನು ಹಾಗೂ ನಿಂತ ನೀರಿನಿಂದ ಸೊಳ್ಳೆಗಳ ಸಂತನೋತ್ಪತಿಗೊಳ್ಳುತ್ತದೆ. ಈ ಸೊಳ್ಳೆಗಳು ಬೆಳಗಿನ ಹೊತ್ತಿಗೆ ಸುಮಾರು ೭ ಗಂಟೆಯಿಂದ ೧೦ ಗಂಟೆಯ ಅವಧಿಯಲ್ಲಿ ಕಂಡು ಬರುವುದು. ಜನರು ಈ ಸಮಯದಲ್ಲಿ ಆದಷ್ಟು ಸೊಳ್ಳೆಯಿಂದ ರಕ್ಷಣೆ ಪಡೆಯುವಂತೆ, ತಮ್ಮ ಸುತ್ತ ಮುತ್ತಗಳ ವಾತಾವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ವೈದ್ಯರು ಕಿವಿ ಮಾತು ಹೇಳಿದ್ದಾರೆ.

                                                   ಲಕ್ಷಣಗಳು

* ಅತಿಯಾದ ತಲೆನೋವು, ಕಣ್ಣಿನ ಉರಿ, ಸಾಮಾನ್ಯ ವೈರಲ್ ಜ್ವರಕ್ಕಿಂತ ೨ ಪಟ್ಟು ಹೆಚ್ಚು ಜ್ವರ ಕಾಣಿಸಿಕೊಳ್ಳುತ್ತದೆ.
* ಗಂಟು ಗಂಟುಗಳಲ್ಲಿ ವಿಪರೀತ ನೋವುಗಳು ಕಂಡುಬರುತ್ತದೆ.
* ಕೆಲವರಲ್ಲಿ ಡೆಂಗ್ಯೊ ಲಕ್ಷಣವು ಮಲದಲ್ಲಿ ರಕ್ತ ಸ್ರಾವವು ಕಾಣಿಸಿಕೋಳ್ಳುತ್ತದೆ.
* ವಾಂತಿ, ವಾಕರಿಕೆ ಲಕ್ಷಣಗಳು ಇರುವ ಸಾಧ್ಯತೆಗಳು ಹೆಚ್ಚು.

ಕಳೆದ ಬಾರಿಯ ಡೆಂಗ್ಯೂ ಭಾದಿತರ ಸಂಖ್ಯೆಯನ್ನು ಪರಿಶೀಲಿಸಿದರೆ ಸುಮಾರು ೧೦ ಶೇಕಡದಷ್ಟು ಇಳಿಕೆ ಕಾಣಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಡೆಂಗ್ಯೂ ಜ್ವರವು ಒಬ್ಬರಿಂದ ಒಬ್ಬರಿಗೆ ಹರಡುವುದು ಎಂಬ ತಪ್ಪು ಕಲ್ಪನೆಯಲ್ಲಿ ಇಂದು ಜನರಿದ್ದಾರೆ. ಆದರೆ ವಾಸ್ತವದಲ್ಲಿ ಡೆಂಗ್ಯೂ ಜ್ವರವು ಸೊಳ್ಳೆಗಳಿಂದ ಹರಡುತ್ತದೆ ಹೊರತು ವ್ಯಕ್ತಿಗಳಿಂದಲ್ಲ.

ಉಲ್ಬಣಿಸುತ್ತಿರುವ ಡೆಂಗ್ಯೊ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಇದಕ್ಕೆ ಸಾಧ್ಯವಾದಷ್ಟು ಕ್ರಮ ಕೈಗೊಂಡರು ಮಳೆ ಮತ್ತು ಬಿಸಿಲಿನ ವಾತಾವರಣದಿಂದ ರೋಗದ ತೀವ್ರತೆ ಹೆಚ್ಚಿಸಿದೆ. ಸರಕಾರಿ ಆಸ್ಪತ್ರೆಗಳ ರಕ್ತ ಪರೀಕ್ಷಾ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ರೋಗಿಗಳು ಖಾಸಗಿ ಕೇಂದ್ರಗಳಿಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ.

ವರದಿ
ಕೃಪಾ ಇಡ್ಯಡ್ಕ, ಸ್ವಾತಿ ನಾಯಕ್

ತೃತೀಯ ಪತ್ರಿಕೋಧ್ಯಮ
ವಿವೇಕಾನಂದ ಕಾಲೇಜು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.