HomePage_Banner
HomePage_Banner
HomePage_Banner
HomePage_Banner

ವಾಕಿಂಗ್‌ ಮಾಡುವಾಗ ಈ ತಪ್ಪು ಮಾಡದಿರಿ

dont do these mistakes in walking

ದಿನಕ್ಕೆ ಅರ್ಧಗಂಟೆ ವಾಕಿಂಗ್ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ದೇಹವೂ ಫಿಟ್‌ ಆಗಿ ಇರುತ್ತದೆ.ಆದರೆ, ಈ ರೀತಿಯ ನಿತ್ಯದ ನಡಿಗೆಯಲ್ಲಿಯೂ ಕೆಲವು ತಪ್ಪುಗಳಾಗುತ್ತವೆ. ತಜ್ಞರು ಹೇಳುವ ಪ್ರಕಾರ, ಈ ತಪ್ಪುಗಳಿಂದಾಗಿ ನಿಮ್ಮ ನಡಿಗೆಯಿಂದ ಆಗುವ ಪ್ರಯೋಜನ ಕಡಿಮೆ:

ಕೈಗಳೂ ನಡೆಯುತ್ತವೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಎಡಕಾಲು ಮುಂದಕ್ಕೆ ಇಟ್ಟಾಗ ಬಲಗೈ ಮುಂದಕ್ಕೆ ಬಂದಿರಬೇಕು. ಬಲಗಾಲು ಮುಂದಕ್ಕೆ ಬಂದಾಗ ಎಡಗೈ ಮುಂದಿರಬೇಕು. ಈ ರೀತಿಯ ನಡಿಗೆ ಆರಾಮದಾಯಕ ಮತ್ತು ಸಮರ್ಪಕ. ಸುಮ್ಮನೇ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ನಡೆಯಬೇಡಿ. 
ನಾನು ಇಷ್ಟು ದೂರ, ಇಷ್ಟು ಹೊತ್ತು ನಡೆದಿದ್ದೇನೆ ಎಂದು ಸಮಾಧಾನಪಡುವುದಕ್ಕಿಂತ ಎಷ್ಟು ಬೇಗ ನಡೆದಿದ್ದೀರಿ ಎಂಬುದರ ಮೇಲೆ ನಿಮ್ಮ ಫಿಟ್ನೆಸ್‌ ನಿಂತಿದೆ. ನಿಧಾನವಾಗಿ ಬಹುದೂರ ನಡೆಯುತ್ತ ಹೋಗುವ ಬದಲು ಕಡಿಮೆ ದೂರವಾದರೂ ಸರಿ, ಆದರೆ ಬೇಗನೇ ಹೆಜ್ಜೆ ಇಡುತ್ತಾ ಹೋಗುವುದು ಮುಖ್ಯವಾಗುತ್ತದೆ. 

ವಾಕ್‌ ಮಾಡುವಾಗ ಸರಿಯಾದ ಉಡುಗೆ, ಶೂ ಧರಿಸಿಕೊಳ್ಳಿ. ಇವು ಅಸಮರ್ಪಕವಾಗಿದ್ದಲ್ಲಿ ನೀವು ನಿಲ್ಲುವ, ನಡೆಯುವ ಭಂಗಿ ಸರಿಯಿಲ್ಲದೆ ಬೆನ್ನು ನೋವು ಅಥವಾ ಕಾಲು ನೋವು ಆರಂಭವಾಗಬಹುದು. 

ನಡೆಯುವ ಭಂಗಿಯೂ ಸರಿ ಇರಬೇಕು. ಸುಮ್ಮನೇ ಕಾಲೆಳೆದುಕೊಂಡು ನಡೆಯುತ್ಥಾ ಹೋದರೆ, ಅದರಿಂದ ಎಳ್ಳಷ್ಟೂ ಪ್ರಯೋಜನವಿಲ್ಲ. ನಡೆಯುವ ಆ ಪ್ರಕ್ರಿಯೆಯಲ್ಲಿ ಕಾಲಿನ ಹಿಮ್ಮಡಿ, ಹೆಬ್ಬೆರಳು ಎಲ್ಲವೂ ಸರಿಯಾಗಿ ಕೆಲಸ ಮಾಡಬೇಕು. ಕಾಲನ್ನು ಚಪ್ಪಟೆಯಾಗಿಸಿ ಎಳೆಯುತ್ತ ನಡೆಯಬಾರದು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.