ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ಜೂ. 24ರಂದು ರಾತ್ರಿ ಕಾಡಾನೆಗಳು ತೋಟಗಳಿಗೆ ಧಾಳಿ ಮಾಡಿ ಕೃಷಿ ನಾಶ ಪಡಿಸಿರುವ ಘಟನೆ ವರದಿಯಾಗಿದೆ.
ಕೈಪಡ್ಕ ನಿವಾಸಿ ಕೃಷ್ಣ ಮಣಿಯಾಣಿಯವರ ತೋಟಕ್ಕೆ ನುಗ್ಗಿದ ಆನೆಗಳು ತೆಂಗಿನ ಗಿಡ, 40 ರಷ್ಟು ಬಾಳೆಗಿಡ, ಹಾಗೂ ಕೊಚ್ಚಿ ಗೋಪಾಲ ಎಂಬವರ ತೋಟದಲ್ಲಿ ತೆಂಗಿನ ಗಿಡ, 60ರಷ್ಟು ಬಾಳೆ ಗಿಡಗಳನ್ನು ಮುರಿದು ಹಾಕಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.