ಗರಿಯಿಂದ ಬೇರ್ಪಟ್ಟ ಕಾಳು ಮೆಣಸಿನಲ್ಲಿರುವ ಹೊಟ್ಟು ಮತ್ತು ಕಸವನ್ನು ಬೇರ್ಪಡಿಸುವ ಹೊಸ ಮಾದರಿಯ ಯಂತ್ರಕ್ಕೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಸಂಘದ ಅಧ್ಯಕ್ಷ ಸಿ ಚಂದ್ರಶೇಖರ ಶಾಸ್ತ್ರಿಯವರು ಚಾಲನೆ ನೀಡಿದರು.
ಈ ಯಂತ್ರ ಸ್ವಂಚಾಲಿತವಾಗಿದ್ದು ಯಾವುದೇ ಖರ್ಚು ತಗಲುವುದಿಲ್ಲ. ಯಂತ್ರವನ್ನು ಕೃಷಿಕರಿಗೆ ಸಣ್ಣ ಬಾಡಿಗೆಗೆ ನೀಡಲಾಗುತ್ತದೆ. ಕೈಗಾಡಿ ,ಯಂತ್ರ ಚಾಲಿತ ಕೈಗಾಡಿ, ಕಾಳು ಮೆಣಸಿ ಗರಿ ಬಿಡಿಸುವ ಯಂತ್ರ, ಹಾರೆ, ಪಿಕ್ಕಾಸು, ಮೊದಲಾದ ಕೃಷಿ ಸಲಕರಣೆಗಳನ್ನು ಬಾಡಿಗೆ ನೆಲೆಯಲ್ಲಿ ಈಗಾಗಲೇ ಒದಗಿಸುತ್ತಿದೆ. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲೋಕೇಶ್ ಬರೆಮೇಲು, ನಿರ್ದೇಶಕರಾದ ಭಾಸ್ಕರ ಗೌಡ ಚಿದ್ಗಲ್ಲು, ವಾಸುದೇವ ಪಳಂಗಾಯ, ರಘುನಾಥ ರೈ ಕೆರೆಕ್ಕೋಡಿ, ವಾಚಣ್ಣ ಕೆರೆಮೂಲೆ, ರೇಖಾ ರೈ, ಮೋಹಿನಿ ಬಿ ಎಲ್, ಶ್ರೀಕೃಷ್ಣ ಭಟ್ ಪಟೋಳಿ, ಗಣೇಶ್ ಪೈ, ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.