ರಾಜ್ಯದ ಪ್ರತಿಷ್ಠಿತ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸತತ ೨೫ ವರ್ಷಗಳ ಸೇವೆಯನ್ನು ಸಲ್ಲಿಸಿದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗನ್ಮೋಹನ ದಂಡಿನಮನೆಯವರಿಗೆ ಜುಲೈ ೨೦ ರಂದು ನಿಗಮದ ೪೯ನೇ ಸಂಸ್ಥಾಪನಾ ದಿನಾಚರಣೆಯಂದು ಸನ್ಮಾನಿಸಲಾಯಿತು. ಬಳ್ಳಾರಿಯ ಡಾ|| ಜೋಳದ ರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ನಡೆದ ಸಂಸ್ಥಾಪನಾ ದಿನಾಚರಣಾ ಸಮಾರಂಭದಲ್ಲಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕರಾದ ಸೂರ್ಯನಾರಾಯಣ ಇವರು ಜಗನ್ಮೋಹನ ದಂಡಿನಮನೆ ಯವರಿಗೆ ಶಾಲು ಹೊದಿಸಿ ಪ್ರಶಂಸನಾ ಪತ್ರ ಮತ್ತು ಕೈಗಡಿಯಾರ ನೀಡಿ ಸನ್ಮಾನಿಸಿದರು.
ಮೈಸೂರು ಜಯಚಾಮ ರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ 1987 ಬ್ಯಾಚಿನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ ಪದವೀಧರರಾದ ಜಗನ್ಮೋಹನ ದಂಡಿನಮನೆ ಯವರು 1993 ರಲ್ಲಿ ಕರ್ನಾಟಕಕ್ಕೆ ವಿದ್ಯುತ್ ನಿಗಮಕ್ಕೆ ಸೇರ್ಪಡೆಗೊಂಡರು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ-ಅಂಬಿಕಾನಗರ ಕಾಳಿ ಜಲವಿದ್ಯುತ್ ಯೋಜನೆಯ ನಾಗಝರಿ ವಿದ್ಯುದಾಗಾರದಲ್ಲಿ 10 ವರ್ಷ ಎ.ಇ.ಯಾಗಿ ಕುಂದಾಪುರ-ಹೊಸಂಗಡಿಯ ವರಾಹಿ ಜಲವಿದ್ಯುತ್ ಯೋಜನೆಯಲ್ಲಿ ಎಇಇ ಯಾಗಿ 11 ವರ್ಷ ಮತ್ತು ೪ ವರ್ಷಗಳಿಂದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಇಇ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಕೆವಿಜಿ ಪಾಲಿಟೆಕ್ನಿಕ್ ಸುಳ್ಯದಲ್ಲಿ ಉಪನ್ಯಾಸಕರಾಗಿ ಆರಂಭಿಸಿದ ಇವರು ನಂತರ ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ದುಡಿದು 1993 ರಲ್ಲಿ ಕನಾಟಕ ವಿದ್ಯುತ್ ನಿಗಮಕ್ಕೆ ಆಯ್ಕೆಯಾದರು.
ಗುತ್ತಿಗಾರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೆವಿದ್ಯಾರ್ಥಿಯಾದ ಇವರು ನಾಲ್ಕೂರು ಗ್ರಾಮದ ದಂಡಿಮನೆ ದಿ| ಅಣ್ಣಪ್ಪ ಗೌಡ ಮತ್ತು ಶ್ರೀಮತಿ ಸುಂದರಿಯವರ ಹಿರಿಯ ಪುತ್ರ. ಪತ್ನಿ ಬಬಿತಾ ಡಿ.ಜೆ. ಮತ್ತು ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗ ರೋಹನ್ ಡಿ.ಜೆ. ಯವರೊಂದಿಗೆ ಪ್ರಸ್ತುತ ಬಳ್ಳಾರಿಯಲ್ಲಿ ವಾಸ್ತವ್ಯವಿದ್ದಾರೆ.
I do not even understand how I finished up here, but I assumed this post
used to be great. I do not recognize who you might be but definitely you’re going to a famous blogger if
you happen to aren’t already. Cheers!
Nice post. I used to be checking constantly this blog and I’m impressed!
Very helpful information particularly the remaining part 🙂 I
maintain such information a lot. I used to
be seeking this particular info for a very lengthy time.
Thank you and best of luck.