HomePage_Banner
HomePage_Banner
HomePage_Banner
HomePage_Banner

ಸುಳ್ಯ: ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಸ್ತನ್ಯಪಾನ ವಾರಾಚರಣೆ

ಕೆ.ವಿ.ಜಿ. ಮೆಡಿಕಲ್ ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್, ಹೆರಿಗೆ ವಿಭಾಗ ಮತ್ತು ಮಕ್ಕಳ ವಿಭಾಗಗಳ ಸಹಭಾಗಿತ್ವದಲ್ಲಿ ವಿಶ್ವ ಸ್ತನ್ಯಪಾನ ವಾರಾಚರಣೆಯನ್ನು ಆ. 1ರಿಂದ ಆ.7 ರ ತನಕ ಆಚರಿಸಲಾಯಿತು.

 

ಆ. 6ರಂದು ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಿದರು. ಮಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಕೋಶಾಧಿಕಾರಿ ಶ್ರೀಮತಿ ಶೋಭಾ ಚಿದಾನಂದ, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಡೀನ್ ಡಾ. ಸತ್ಯವತಿ, ಪ್ರೊಫೆಸರ್ ಡಾ, ಶೀಲಾ ಜಿ. ನಾಯಕ್, ಸಹಾಯಕ ಪ್ರದ್ಯಾಪಕ ಡಾ. ಅಹಮ್ಮದ್ ರಶೀದ್, ಸುಳ್ಯ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಭಾನುಮತಿ ಭಾಗವಹಿಸಿದ್ದರು, ಕಮ್ಯುನಿಟಿ ಮೆಡಿಸಿನ್ ವಿಭಾಗದ ಡಾ. ಐಶ್ವರ್ಯ ಪ್ರಾರ್ಥಿಸಿ, ಒಬಿಜಿ ಮುಖ್ಯಸ್ಥೆ ಡಾ. ಗೀತಾ ದೊಪ್ಪ ಸ್ವಾಗತಿಸಿದರು. ಕಮ್ಯುನಿಟಿ ಮೆಡಿಸಿನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

ಕಮ್ಯುನಿಟಿ ಮೆಡಿಸಿನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ನಾಗರಾಜ್, ಒಬಿಜಿ ವಿಭಾಗದ ಡಾ. ಶಕುಂತಳಾ, ಪಿಡಿಯೋಟ್ರಿಕ್ ವಿಭಾಗದ ಡಾ. ನಿವೇದಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

 

ಕ್ಷಣ ಕ್ಷಣದ ಸುದ್ದಿಗಾಗಿ ಸುದ್ದಿ ನ್ಯೂಸ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ….. 👉 https://play.google.com/store/apps/details?id=com.suddi

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.