HomePage_Banner
HomePage_Banner
HomePage_Banner
HomePage_Banner

ಸ್ತನ್ಯಪಾನ ಮನುಷ್ಯನ ಆರೋಗ್ಯಕರ ಜೀವನಕ್ಕೆ ಭದ್ರ ಅಡಿಪಾಯ: ವಿಶ್ವ ಸ್ತನ್ಯಪಾನ ದಿನಾಚರಣೆಂiಲ್ಲಿ ಡಾ. ಕೆ.ವಿ.ಚಿದಾನಂದ

ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗ, ಸ್ತ್ರೀ ಮತ್ತು ಪ್ರಸೂತಿ ವಿಭಾಗ ಹಾಗೂ ಮಕ್ಕಳ ವಿಭಾಗಗಳ ಸಹಭಾಗಿತ್ವದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಆ. 6 ರಂದು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮವನ್ನು ಎ.ಓ.ಎಲ್.ಇ. ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ತನ್ಯಪಾನ ಮನುಷ್ಯನ ಆರೋಗ್ಯಕರ ಜೀವನಕ್ಕೆ ಭದ್ರ ಅಡಿಪಾಯ. ಹುಟ್ಟಿದ ಮಗುವಿಗೆ 6  ತಿಂಗಳವರೆಗೆ ತಪ್ಪದೆ ಸ್ತನ್ಯಪಾನ ಮಾಡಿಸಿ, ಎಂಬ ಕರೆ ನೀಡಿದರು.

ಡಾ. ಸತ್ಯವತಿ ಡೀನ್ ಕೆ.ವಿ.ಜಿ. ಮೆಡಿಕಲ್ ಕಾಲೇಜು ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಂದೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ನಾಗರಾಜ ಆಚಾರಿ ಪ್ರಾಧ್ಯಾಪಕರು ಸಮುದಾಯ ಆರೋಗ್ಯ ವಿಭಾಗ, ಡಾ. ಶಕುಂತಲಾ ಸ್ತ್ರೀ ಮತ್ತು ಪ್ರಸೂತಿ ವಿಭಾಗ, ಹಾಗೂ ಡಾ. ನಿವೇದಿತಾ ಎಸ್. ರೆಡ್ಡಿ ಮಕ್ಕಳ ಚಿಕಿತ್ಸಾ ವಿಭಾಗ, ಇವರು ತಾಯಿಯ ಎದೆಹಾಲು ಮತ್ತು ಸ್ತನ್ಯಪಾನದ ಪ್ರಾಮುಖ್ಯತೆ ಮತ್ತು ಅವಶ್ಯಕತೆ ಹಾಗೂ ಸ್ತನ್ಯಪಾನ ನೀಡದೇ ಇದ್ದಾಗ ಎದುರಿಸುವ ಸಮಸ್ಯೆಗಳ ಬಗ್ಗೆ ವಿಚಾರ ಮಂಡಿಸಿದರು. ವೇದಿಕೆಯಲ್ಲಿ ಅಥಿತಿಗಳಾಗಿ ಶೋಭಾ ಚಿದಾನಂದ ಕೋಶಾಧಿಕಾರಿ ಎ.ಒ.ಎಲ್.ಇ., ಡಾ ಸತ್ಯವತಿ ಡೀನ್, ಕೆವಿಜಿಎಮ್‌ಸಿಎಚ್, ಡಾ. ಶೀಲಾ ಜಿ. ನಾಯಕ್ ಪ್ರಾಧ್ಯಪಕರು, ಡಾ. ರಶೀದ್ ಮಕ್ಕಳ ಚಿಕಿತ್ಸಾ ವಿಬಾಗ, ಡಾ. ಗೀತಾ ದೊಪ್ಪ ವಿಭಾಗ ಮುಖ್ಯಸ್ಥರು, ಸ್ತ್ರೀ ಪ್ರಸೂತಿ ವಿಭಾಗ ಹಾಗೂ ಡಾ. ಭಾನುಮತಿ, ತಾಲೂಕು ಹಿರಿಯ ವೈದ್ಯಾಧಿಕಾರಿಗಳು ತಾಲೂಕು ಆಸ್ಪತ್ರೆ, ಸುಳ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ರೋಗಿಗಳು & ಆರೈಕೆದಾರರು, ಕಾಲೇಜಿನ ಎಲ್ಲಾ ವಿಭಾಗ ಮುಖ್ಯಸ್ಥರು, ವೈದ್ಯಾಧಿಕಾರಿಗಳು, ಆಸ್ಪತ್ರೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು. ಮತ್ತು ವಿಶೇಷವಾಗಿ ಕೆವಿಜಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ಭಿತ್ತಿ ಪತ್ರ ಪ್ರದರ್ಶಿಸಿದರು. ಡಾ. ಐಶ್ವರ್ಯ ಪ್ರಾರ್ಥನೆಯನ್ನು ಹಾಡಿ, ಡಾ. ಗೀತಾ ದೊಪ್ಪ ಸ್ವಾಗತಿಸಿದರು. ಡಾ. ಕೃತಿ ಭಟ್ ಅತಿಥಿಗಳನ್ನು ವಂದಿಸಿದರು. ಡಾ. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಪಿಆರ್‌ಒ ಕಾರ್ಯಕ್ರಮ ಸಂಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.