HomePage_Banner
HomePage_Banner
HomePage_Banner
HomePage_Banner

ಎಲಿಮಲೆ ಜ್ಞಾನದೀಪದಲ್ಲಿ ಆಟಿಡೊಂಜಿ ಕೂಟ

ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಆ.೩ರಂದು ಆಟಿಡೊಂಜಿ ದಿನವನ್ನು ಆಚರಿಸಲಾಯಿತು. ಆಟಿಯ ತಿಂಗಳಲ್ಲಿ ಆಡುವ ಚೆನ್ನೆಮಣೆ, ಗ್ರಾಮೀಣ ಕ್ರಿಕೆಟ್, ಲಗೋರಿ, ಜನಪದ ಗೀತೆ, ಪಾಡ್ದನ, ಆಟಿ ಕಳಂಜ ಮುಂತಾದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ನಡೆಸಲಾಯಿತು. ಆಟಿ ತಿಂಗಳಲ್ಲಿ ಮಾಡುವ ಪತ್ರೊಡೆ, ಕೆಸು, ಆಟಿ ಪಾಯಸ, ಕಣಿಲೆ ಉಂತಾದ ತಿನಿಸುಗಳನ್ನು ಮಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಿಕ್ಷಕ ದೇವಿಪ್ರಸಾದ್ ಕಾರ್ಯರ್ತೋಡಿ ಮಾತನಾಡಿ ಆಟಿ ತಿಂಗಳಿನ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಗಂಗಾಧರ ಬಾಳುಗೋಡು, ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳೆಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಆಟಿ ತಿಂಗಳಿನ ಆಚರಣೆಯ ಮಹತ್ವನ್ನು ತಿಳಿದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.