HomePage_Banner
HomePage_Banner
HomePage_Banner
HomePage_Banner

ಸಂಪೂರ್ಣ ಆರೋಗ್ಯಕ್ಕಾಗಿ ಬೇವನ್ನು  ಉಪಯೋಗಿಸಿ

ನಾವು ವಿಶ್ವಾದ್ಯಂತ ಅನುಭವಿಸುತ್ತಿರುವ ಹಲವಾರು ಕಾಯಿಲೆಗಳಿಗೆ ಬೇವು ಉತ್ತರವಾಗಬಲ್ಲದು ಎಂಬುದು ನಿಮಗೆ ತಿಳಿದಿದೆಯೇ? ಲಿವರ್ ಆಯುಷ್ ಆಯುರ್ವೇದ ಪರಿಣಿತರಾದ *ಡಾ. ಮಹೇಶ್ ಟಿ. ಎಸ್. ರವರು ಈ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಾ, “ಬೇವು ನಾಲಿಗೆಗೆ ಕಹಿಯಾಗಿದ್ದರೂ ಕೂಡ ಇದು ದೇಹಕ್ಕೆ ಸಿಹಿ ಮತ್ತು ರಕ್ಷಣಾತ್ಮಕವಾಗಿರುತ್ತದೆ.” ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವಾಸ್ತವವಾಗಿ, ಬೇವು, ಅತ್ಯಂತ ಅಮೂಲ್ಯವಾದ ಸಸ್ಯಗಳ ಪೈಕಿ ಒಂದಾಗಿದೆ. ಆಯುರ್ವೇದದ ಪ್ರಕಾರ, ಇದು ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಾಸ್ತವವಾಗಿ, ಸುಮಾರು 4500 ವರ್ಷಗಳಷ್ಟು ಹಿಂದೆಯೇ ಗುಣಪಡಿಸುವ ಉದ್ದೇಶಗಳಿಗಾಗಿ ಗಿಡಮೂಲಿಕೆಗಳನ್ನು ಬಳಸಲಾಗುತ್ತಿತ್ತು ಎಂಬ ಬಗ್ಗೆ ಪ್ರಬಲವಾದ ಸಾಕ್ಷ್ಯಗಳಿವೆ.ಆಯುರ್ವೇದವು ಪ್ರಮುಖವಾಗಿ ಬೇವಿನ ಎಲೆಗಳನ್ನು ಮುಖ್ಯವಾಗಿ ಪಿತ್ತ ಮತ್ತು ಕಫಗಳಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತದೆ, ಬೇವಿನ ಇತರೆ ಪ್ರಮುಖ ಗುಣಪಡಿಸುವ ಪ್ರಯೋಜನಗಳೆಂದರೆ: ಇದು ರಕ್ತ ಶುದ್ಧಿ ಮಾಡುತ್ತದೆ, ವಿಷಕಾರಕಗಳನ್ನು ನಿವಾರಿಸುತ್ತದೆ, ಕೀಟ ಕಡಿತ ಮತ್ತು ಹುಣ್ಣುಗಳನ್ನು ಗುಣಪಡಿಸುತ್ತದೆ, ದೇಹದಲ್ಲಿ ಮುಕ್ತವಾದ ಕಣಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ, ಗಾಯಗಳ, ಸುಟ್ಟಗಾಯಗಳ, ಸೋಂಕುಗಳ ಮತ್ತು ಇತರೆ ಚರ್ಮ ವ್ಯಾಧಿಗಳ ಮೇಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ರೋಗ ಪ್ರತಿರೋಧಕತೆಯನ್ನು ಸುಧಾರಿಸುತ್ತದೆ. 
ಬೇವಿನ ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳ ಪಟ್ಟಿ ಇದ್ದರೂ, ನಾವು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಬೇವನ್ನು ಅತ್ಯುತ್ತಮವಾಗಿ ಬಳಸಬಹುದಾದ ಹತ್ತು ವಿಧಾನಗಳನ್ನು ಸಂಗ್ರಹ ಮಾಡಿದ್ದೇವೆ.

1. ರೋಗನಿರೋಧಕತೆಯನ್ನು ಹೆಚ್ಚಿಸಲು
ರೋಗ ನಿರೋಧಕತೆಯನ್ನು ಹೆಚ್ಚಿಸುವಲ್ಲಿ ಬೇವು ಅತ್ಯದ್ಭುತ ಕೆಲಸ ಮಾಡುತ್ತದೆ. ನಿಮ್ಮ ರೋಗ ನಿರೋಧಕತೆಯನ್ನು ಹೆಚ್ಚಿಸಲು ಚಹಾ ರೂಪದಲ್ಲಿ ಬೇವಿನ ಎಲೆಗಳನ್ನು ಉಪಯೋಗಿಸಿದಾಗ ಬೇವಿನ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಮೈಕ್ರೋಬಿಯಲ್ ಗುಣಗಳನ್ನು ಸಂಪೂರ್ಣವಾಗಿ ಪಡೆಯಬಹುದು. ಕೆಲವು ಬೇವಿನ ಎಲೆಗಳನ್ನು ಗಿವುಚಿರಿ ಮತ್ತು ಅದಕ್ಕೆ ಒಂದು ಲೋಟ ಬಿಸಿ ನೀರನ್ನು ಸೇರಿಸಿ ಮತ್ತು ಕುಡಿಯಿರಿ. ನಿಮ್ಮ ಆರೋಗ್ಯವನ್ನು ರಕ್ಷಿಸಲು ಇದು ಸರಳವಾದ ಮಾರ್ಗವಾಗಿದೆ.
2. ದೇಹವನ್ನು ನಿರ್ವಿಷಗೊಳಿಸಲು
ಅತ್ಯುತ್ತಮ ನಿರ್ವಿಷಕಾರಿಯಾಗಿದೆ. ಆಯುರ್ವೇದದ ಪ್ರಕಾರ ಕಹಿಯಾದ ರುಚಿಯು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುವುದರಿಂದ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಪ್ರಚೋದಿಸುತ್ತದೆ ಹೀಗೆ ಇದು ವಿಷತ್ವದ ಅಂಶವನ್ನು ನಿವಾರಿಸುತ್ತದೆ. ಬೇವಿನ ಎಲೆಗಳನ್ನು ಪುಡಿ ಮಾಡಿಕೊಳ್ಳಬಹುದು ಮತ್ತು ಅದನ್ನು ಹಸುವಿನ ತುಪ್ಪದೊಂದಿಗೆ ಮಿಶ್ರಣ ಮಾಡಬಹುದು. ಇಲ್ಲವಾದರೆ, ಇದನ್ನು ದೇಹದಲ್ಲಿ ಇರುವ ವಿಷತ್ವವನ್ನು ನಿವಾರಿಸಲು ಸಹಾಯಕವಗುವ ಪೂರಕ ಪದಾರ್ಥದಂತೆಯೂ ತೆಗೆದುಕೊಳ್ಳಬಹುದು.
3. ಆರೋಗ್ಯಕರವಾದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು
ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಬೇವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೀವು ಬಲ್ಲಿರಾ? ಈ ಗಿಡಮೂಲಿಕೆಯ ರಾಸಾಯನಿಕ ಅಂಶಗಳು ಇನ್ಸುಲಿನ್ ರಿಸೆಪ್ಟರ್ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ ಮತ್ತು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಆದುದರಿಂದ, ಬೇವನ್ನು ಉಪಯೋಗಿಸುವ ಮೂಲಕ ಇನ್ಸುಲಿನ್ ಮೇಲೆ ಮಧುಮೇಹಿಗಳು ಕಡಿಮೆ ಪ್ರಮಾಣದಲ್ಲಿ ಅವಲಂಬಿತರಾಗಬಹುದು. ಆದಾಗ್ಯೂ, ಪ್ರಮಾಣ ಮತ್ತು ಇತರೆ ವಿಚಾರಗಳ ಬಗ್ಗೆ ವೈದ್ಯರಲ್ಲಿ ಚರ್ಚಿಸಿರಿ.
4. ಜೀರ್ಣಾಂಗವ್ಯೂಹವನ್ನು ಆರೋಗ್ಯಕರವಾಗಿ ಇಡಲು
ಜೀರ್ಣಾಂಗವ್ಯೂಹದ ಉರಿಯೂತವನ್ನು ಕಡಿಮೆ ಮಾಡುತ್ತದೆ, ಊತ, ಉಬ್ಬುವಿಕೆ, ಸಿಡಿಯುವಿಕೆ, ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯ ಸೋಂಕನ್ನು ನಿವಾರಿಸುತ್ತದೆ. ಇದು ಜೀರ್ಣಕ್ರಿಯೆ ಮತ್ತ ವಿಸರ್ಜನೆಯ ಒಟ್ಟಾರೆ ಪ್ರಕ್ರಿಯೆಗಳನ್ನು ಸುಧಾರಿಸುತ್ತದೆ.

5. ಸಂಧಿವಾತ ಚಿಕಿತ್ಸೆಗಾಗಿ
ಬೇವಿನ ಉರಿಯೂತ ನಿರೋಧಕ ಗುಣಗಳು ಸಂಧಿವಾತಕ್ಕೆ ಅತ್ಯುತ್ತಮವಾದ ಉಪಚಾರವನ್ನು ನೀಡುತ್ತದೆ. ಬೇವಿನಿಂದ ತಯಾರಿಸಿದ ತೈಲ ಅಥವಾ ಪೇಸ್ಟ್ ಅನ್ನು ನೋವು ಅಥವಾ ಅಸ್ವಸ್ಥತೆಯನ್ನು ಕಡಿಮೆ ಮಾಡಲು ನೋವಿರುವ ಕೀಲುಗಳಿಗೆ ಮತ್ತು ಸ್ನಾಯುಗಳಿಗೆ ಲೇಪಿಸಬಹುದು.
6. ಬಾಯಿಯ ಆರೋಗ್ಯವನ್ನು ಖಚಿತಪಡಿಸಲು
ಹೆಚ್ಚಿನ ಬಾಯಿಯ ಆರೋಗ್ಯದ ಉತ್ಪನ್ನಗಳಲ್ಲಿ ಬೇವು ಒಂದು ಪ್ರಮುಖವಾದ ಸಾಮಗ್ರಿಯಾಗಿದೆ. ಬೇವಿನ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಹಲ್ಲಿನ ರೋಗಗಳನ್ನು ಮತ್ತು ದುರ್ಗಂಧವನ್ನು ಉಂಟುಮಾಡುವ ಬ್ಯಾಕ್ಟೀರಿಯವನ್ನು ತೆಗೆದುಹಾಕುವಲ್ಲಿ ಪ್ರಯೋಜನಕಾರಿಯಾಗಿದೆ. ಬೇವಿನ ನೀರನ್ನು ಮೌತ್ವಾಶ್ ಆಗಿ ಉಪಯೋಗಿಸಬಹುದು. ನೀಮ್ ಕಡ್ಡಿಗಳನ್ನು ಟೂಥ್ಬ್ರಶ್ ಆಗಿಯೂ ಕೂಡ ಉಪಯೋಗಿಸಬಹುದು.
7. ಕಣ್ಣಿನ/ಕಿವಿಯ ಸಾಮಾನ್ಯ ಚಿಕ್ಕಪುಟ್ಟ ಸಮಸ್ಯೆಗಳನ್ನು ಗುಣಪಡಿಸಲು
ಬೇವಿನ ಎಳೆಯ ಎಲೆಗಳನ್ನು ಕುದಿಸಿರಿ ಮತ್ತು ನೀರು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಿಮ್ಮ ಕಣ್ಣುಗಳನ್ನು ತೊಳೆಯಲು ಅದನ್ನು ಉಪಯೋಗಿಸಿ ಮತ್ತು ಕಣ್ಣಿನ ಉರಿ, ಕೆಂಪಾಗುವಿಕೆ ಅಥವಾ ದಣಿವುಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ನೀವು ಕಾಣಬಹುದು. ಕೆಲವು ಎಲೆಗಳನ್ನು ಮಿಶ್ರಣಗೊಳಿಸಿ, ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ನೀವು ಇದನ್ನು ಕಿವಿ ನೋವಿನ ಚಿಕಿತ್ಸೆಗೆ ಉಪಯೋಗಿಸಿಕೊಳ್ಳಬಹುದು.

8. ಎಲ್ಲಾ ರೀತಿಯ ಚರ್ಮರೋಗಗಳಿಗೆ ಚಿಕಿತ್ಸೆ ನೀಡಲು
ಒಂದು ಕಪ್ ಬೇವಿನ ಎಲೆಗಳನ್ನು ಅವು ಮೃದುವಾಗುವ ಮತ್ತು ಬಣ್ಣ ಕಳೆದುಕೊಳ್ಳುವವರೆಗೆ ಕುದಿಸಿರಿ. ತಂಪಾಗಲು ಅದನ್ನು ಬಾಟಲಿಯಲ್ಲಿ ಹಾಕಿ ಮತ್ತು ಸಂಗ್ರಹಿಸಿರಿ. ಇದನ್ನು ಮೊಡವೆ, ಚರ್ಮದ ಸೋಂಕು, ದೇಹದ ದುರ್ಗಂಧ ಇತ್ಯಾದಿಗಳನ್ನು ತಡೆಯಲು ನಿಮ್ಮ ಸಾಮಾನ್ಯ ಸ್ನಾನದ ನೀರಿಗೆ ಮಿಶ್ರಣ ಮಾಡಿರಿ. ಕೆಲವು ಎಲೆಗಳನ್ನು ನೀರಿನಿಂದ ರುಬ್ಬಿಕೊಳ್ಳುವ ಮೂಲಕ ಮುಖದ ಪ್ಯಾಕ್ ಆಗಿ ಉಪಯೋಗಿಸುವುದರಿಂದ ಮೊಡವೆ ಚಿಕಿತ್ಸೆಗೆ ಸಹಾಯಕವಾಗಬಹುದು. ಸಾಮಾನ್ಯವಾಗಿ ಎಲೆಗಳಿಂದ ತಯಾರಿಸಲಾದ ಪೇಸ್ಟ್ ಗಾಯಗಳನ್ನು ಮತ್ತು ಚರ್ಮ ಸಂಬಂಧಿ ರೋಗಗಳನ್ನು ಗುಣಪಡಿಸುವಲ್ಲಿ ಸಹಾಯಕವಾಗುತ್ತದೆ. ಬೇವಿನ ನೀರು ಚರ್ಮಕ್ಕೆ ಕಾಂತಿನೀಡುವ ಅದ್ಭುತ ಟೋನರ್ ಆಗಿದೆ ಮತ್ತು ಅದನ್ನು ಸುಟ್ಟ ಗಾಯದ ಮೇಲೆ ಹಚ್ಚಿದರೆ ಅದು ತಕ್ಷಣವೇ ಗುಣವಾಗಲು ಸಹಾಯಕವಾಗುತ್ತದೆ ಮತ್ತು ಬಾಧಿತ ಪ್ರದೇಶದಲ್ಲಿ ಸೋಂಕು ಮತ್ತು ಅಲರ್ಜಿಯ ವಿರುದ್ಧ ಹೋರಾಡುತ್ತದೆ.
9. ನಿಮ್ಮ ಕೂದಲಿನ ಸಮಸ್ಯೆಯನ್ನು ನಿವಾರಿಸಲು
ಕುದಿಯುವ ನೀರಿಗೆ ಬೇವಿನ ಎಲೆಗಳನ್ನು ಸೇರಿಸುವುದು ಮತ್ತು ಅದು ತಣ್ಣಗಾದ ನಂತರ ಅದನ್ನು ನಿಮ್ಮ ಕೂದಲನ್ನು ತೊಳೆಯಲು ಉಪಯೋಗಿಸಿರಿ. ಗಿಡಮೂಲಿಕೆಯ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಕೂದಲಿನ ಪರೋಪಜೀವಿ, ತಲೆಹೊಟ್ಟು, ಶುಷ್ಕ ನೆತ್ತಿ, ಕೂದಲು ಉದುರುವಿಕೆ ಮತ್ತು ಕೂದಲು ಸುಕ್ಕಾಗುವುದರ ಮೇಲೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಇದು ನಿಮ್ಮ ಕೂದಲನ್ನು ಮೃದುಗೊಳಿಸುತ್ತದೆ ಮತ್ತು ಜೊತೆಯಲ್ಲಿ ಹೊಳೆಯುವಂತೆ ಮಾಡುತ್ತದೆ.
10. ಕೀಟಗಳನ್ನು ಹೊರಹಾಕಲು
ಬೇವು ಎಲ್ಲಾ ರೀತಿಯ ಕೀಟಗಳನ್ನು ಹಿಮ್ಮೆಟ್ಟಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಮ್ಮ ಕಿಟಕಿಯ ಹತ್ತಿರ ಬೇವನ್ನು ಸೋಕಿಸಿದ ನೀರನ್ನು ಇಡಿ ಅಥವಾ ಕೀಟಗಳು ಬರುವಲ್ಲಿ ಬೇವಿನ ಎಲೆಗಳನ್ನು ಸುಡಿ. ಇದು ಸೊಳ್ಳೆಗಳ ವಿರುದ್ಧ ಹೋರಾಡುವ ನೈಸರ್ಗಿಕ ವಿಧಾನವೂ ಆಗಿದೆ.

ಗಮನಿಸಿ: ಬೇವು ಒಂದು ಶಕ್ತಿಶಾಲಿಯಾಗಿರುವ ಗಿಡಮೂಲಿಕೆಯಾಗಿದೆ ಮತ್ತು ಆದುದರಿಂದ ಇದನ್ನು ಮಕ್ಕಳು ಮತ್ತ್ ನವಜಾತ ಶಿಶುಗಳಿಗೆ ಬಳಸಬಾರದು. ಜೊತೆಯಲ್ಲಿ ಗರ್ಭಿಣಿ ಮಹಿಳೆಯರು, ಮಧುಮೇಹಿಗಳು ಮತ್ತು ಮೂತ್ರಪಿಂಡ ಅಥವಾ ಯಕೃತ್ತಿನ ಕಾಯಿಲೆಯನ್ನು ಹೊಂದಿರುವವರು ಇದನ್ನು ಪೂರಕವಾಗಿ ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.