HomePage_Banner
HomePage_Banner
HomePage_Banner
HomePage_Banner

ಜೇನುತುಪ್ಪ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ!

ಜೇನುತುಪ್ಪ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ನಿಸರ್ಗ ನಮಗೆ ನೀಡಿದ ಒಂದು ವರ ಎಂದರೂ ತಪ್ಪಾಗಲಾರದು. ಪುಟ್ಟ ಪುಟ್ಟ ಜೇನುಹುಳಗಳು ಸಂಗ್ರಹಿಸುವ ಆ ಒಂದೊಂದು ಹನಿಯೂ ಸಹ ಅದೆಷ್ಟೋ ಆರೋಗ್ಯಕರವಾದ ಗುಣಗಳನ್ನು ಬಚ್ಚಿಟ್ಟುಕೊಂಡಿದೆ. ಸಾವಿರಾರು ವರ್ಷಗಳಿಂದ ಇದನ್ನು ಆಯುರ್ವೇದದಲ್ಲಿಯೂ ಸಹ ವಿವಿಧ ಉದ್ಧೇಶಗಳಿಗಾಗಿ ಬಳಸಲಾಗುತ್ತದೆ. 

* ಜೇನುತುಪ್ಪವು ಸಾಮಾನ್ಯವಾಗಿ ಕಾಡುವ ಕೆಮ್ಮು, ತಲೆನೋವು, ಜ್ವರಕ್ಕೆ ರಾಮಬಾಣವಾಗಿದೆ. ಇವತ್ತಿಗೂ ನಾವು ಎಷ್ಟೋ ಮಾತ್ರೆಗಳನ್ನು ಜೇನುತುಪ್ಪದೊಂದಿಗೆ ತೆಗೆದುಕೊಳ್ಳುತ್ತೇವೆ.

* ಜೇನುತುಪ್ಪವು ಗಾಳಿಯಿಂದ ತೇವಾಂಶವನ್ನು ಹೀರಿಕೊಂಡು ಗಾಯವನ್ನು ವಾಸಿಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದನ್ನು ಪ್ರಥಮ ಚಿಕಿತ್ಸೆಯಾಗಿ ಮತ್ತು ನೈಸರ್ಗಿಕ ಚಿಕಿತ್ಸೆಯ ರೂಪವಾಗಿ ಗಾಯಗಳು, ಸುಟ್ಟ ಗಾಯಗಳು ಮತ್ತು ಸೀಳಿರುವ ಗಾಯಗಳಿಗೆ ಬಳಸಲಾಗುತ್ತದೆ.
* ಉಷ್ಣದಿಂದ ಬಾಯೊಳಗೆ ಹುಣ್ಣಾಗಿದ್ದರೆ ಜೇನುತುಪ್ಪ ಹಚ್ಚುವುದರಿಂದ ನೀರಿನೊಡನೆ ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು ವಾಸಿಯಾಗುತ್ತದೆ.
* ಜೇನುತುಪ್ಪವು ಅತ್ಯುತ್ತಮ ಕೆಮ್ಮು ನಿವಾರಕವಾಗಿದೆ. ಇದು ಗಂಟಲಲ್ಲಿ ಒಂದು ಪದರವನ್ನು ರಚಿಸಿ ಗಂಟಲಲ್ಲಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ ಅದಲ್ಲದೇ ಇದು ಸಿಹಿಯ ನರಗಳನ್ನು ಪ್ರಚೋದಿಸಿ ಕೆಮ್ಮು ಬರುವುದನ್ನು ತಡೆಯುತ್ತದೆ. 
* ಕುದಿಸಿ ಆರಿಸಿದ 1 ಲೋಟ ನೀರಿಗೆ 2 ಚಮಚ ಜೇನುತುಪ್ಪ ಬೆರೆಸಿ ಕುಡಿಯುತ್ತಿದ್ದರೆ ತೂಕ ಕಡಿಮೆಯಾಗುತ್ತದೆ.
* ಜೇನುತುಪ್ಪವು ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳೆರಡೂ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಇದನ್ನು ಆಂಟಿಸೆಪ್ಟಿಕ್ ಔಷಧಿಯನ್ನಾಗಿ ಬಳಸಲಾಗುತ್ತದೆ.
* ಶುಂಠಿಯನ್ನು ಜೇನುತುಪ್ಪದೊಡನೆ ಸೇರಿಸಿ ದಂತಗಳಿಗೆ ಉಜ್ಜುವುದರಿಂದ ವಸಡುಗಳಿಂದ ರಕ್ತ ಸೋರುವುದು ಮತ್ತು ವಸಡು ಊದಿಕೊಳ್ಳುವುದು ಕಡಿಮೆಯಾಗುತ್ತದೆ.
* ಜೇನುತುಪ್ಪದಲ್ಲಿ ಸಕ್ಕರೆಗಿಂತ ಹೆಚ್ಚಿನ ಕ್ಯಾಲೋರಿಗಳು ಇದ್ದರೂ ಸಹ ಇದನ್ನು ಬೆಚ್ಚಗಿನ ನೀರಿನಲ್ಲಿ ತೆಗೆದುಕೊಂಡಾಗ ಇದು ದೇಹದಲ್ಲಿರುವ ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
* ಜೇನುತುಪ್ಪ ಮತ್ತು ನಿಂಬೆ ರಸವನ್ನು ಒಂದು ಚಿಟಿಕೆ ಚಕ್ಕೆಯೊಂದಿಗೆ ಸೇವಿಸುವುದ ತೂಕವನ್ನು ಇಳಿಸಬಹುದು.
* ಪ್ರತಿದಿನ ಜೇನುತುಪ್ಪ ಸೇವಿಸಿದರೆ ಮೆದುಳಿನ ದೌರ್ಬಲ್ಯ ನಿವಾರಣೆಯಾಗಿ ಕಾರ್ಯನಿರ್ವಹಿಸುತ್ತದೆ. 
* ಜೇನುತುಪ್ಪದಲ್ಲಿ ಪೊಟ್ಯಾಷಿಯಂ ಮತ್ತು ಖನಿಜಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ಒಳ್ಳೆಯದು.
* ಜೇನಿನಲ್ಲಿ ವಿಟಾಮಿನ್ ಸಿ ಇರುವುದರಿಂದ ವಿಕಿರಣಗಳಿಂದ ಹಾನಿಗೀಡಾದ ಚರ್ಮದ ಪದರಗಳನ್ನು ಸರಿಪಡಿಸುತ್ತದೆ. 
* ಜೇನುತುಪ್ಪದಲ್ಲಿ ವಿಟಾಮಿನ್ ಬಿ5 ಇರುವುದರಿಂದ ಇದು ಚರ್ಮದಲ್ಲಿ ಉತ್ಪತ್ತಿಯಾಗುವ ಎಣ್ಣೆಯ ಅಂಶವನ್ನು ತಡೆಯುವುದಲ್ಲದೇ ಒಣ ಚರ್ಮವನ್ನು ಮೃದುಗೊಳಿಸುತ್ತದೆ.
* ಜೇನುತುಪ್ಪವನ್ನು ತುಸು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿದರೆ ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ ರಕ್ತಹೀನತೆಯನ್ನು ಗುಣಪಡಿಸುತ್ತದೆ.
* ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ವ್ಯವಸ್ಥೆಗೆ ಹೆಚ್ಚು ಹುರುಪನ್ನು ನೀಡುತ್ತದೆ. 
* ಒಂದೆರಡು ಚಮಚಗಳಷ್ಟು ಜೇನುತುಪ್ಪವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಸೇವಿಸುತ್ತಾ ಬಂದರೆ ಅಂಗಾಂಶಗಳು ಪೋಷಣೆಗೊಂಡು ನರಮಂಡಲದ ದೌರ್ಬಲ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.
* ದಿನಕ್ಕೆರಡು ಬಾರಿ ಜೇನುತುಪ್ಪ ಮತ್ತು ತಾಜಾ ನಿಂಬೆಯ ರಸವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮುಖದ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಬಹುದು.
* ಜೇನುತುಪ್ಪದಲ್ಲಿರುವ ಉರಿಯೂತ ವಿರೋಧಿ ಅಂಶದಿಂದಾಗಿ ಹೊಟ್ಟೆ ಉಬ್ಬುವುದನ್ನು ಕಡಿಮೆ ಮಾಡುತ್ತದೆ.
* ನಾಲ್ಕು ಚಮಚ ಶುಂಠಿ ರಸ, ನಾಲ್ಕು ಟೀ ಚಮಚ ಜೇನುತುಪ್ಪ ಮತ್ತು ಎರಡು ಟೀ ಚಮಚ ನಿಂಬೆ ರಸವನ್ನು ಮುಕ್ಕಾಲು ಕಪ್ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ಶೀತ ಪ್ರಕೃತಿಯು ತಗ್ಗುತ್ತದೆ. 
ಜೇನುತುಪ್ಪವು ಇಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿದ್ದರೂ ಸಹ 12 ತಿಂಗಳು ಆಗುವವರಿಗೂ ಮಕ್ಕಳಿಗೆ ತಿನ್ನಲು ಕೊಡಬೇಡಿ. ಇದು ಶಿಶುಗಳ ಬೊಟುಲಿಸಂ ಎಂಬ ಖಾಯಿಲೆಗೆ ದಾರಿಮಾಡಿಕೊಡುವುದಲ್ಲದೇ ಇದರಲ್ಲಿ ಉತ್ಪತ್ತಿಯಾಗುವ ವಿಷಾಣುಗಳು ಸ್ನಾಯುಗಳ ದೌರ್ಬಲ್ಯ ಮತ್ತು ಉಸಿರಾಟದ ತೊಂದರೆಗೆ ದಾರಿ ಮಾಡಿಕೊಡುತ್ತದೆ.
ಪ್ರಾಚೀನ ಕಾಲದಿಂದ ಜೇನುತುಪ್ಪ ಎಲ್ಲಾ ಆಯುರ್ವೇದದ ಚಿಕಿತ್ಸೆಯಲ್ಲಿಯೂ, ಪ್ರಥಮ ಚಿಕಿತ್ಸಕವಾಗಿಯೂ ಬಳಕೆಯಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ನಾವು ಶುದ್ಧ ಜೇನುತುಪ್ಪವನ್ನು ಪರೀಕ್ಷಿಸಿ ಬಳಕೆ ಮಾಡುವುದು ಒಳಿತು. ಮತ್ತು ವೈದ್ಯರ ಸಲಹೆಯ ಮೇರೆಗೆ ಅವರು ಸೂಚಿಸಿದರೆ ಬಳಕೆ ಮಾಡುವುದು ಉತ್ತಮ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.