Breaking News

ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ

Advt_Headding_Middle
Advt_Headding_Middle

ಸುಳ್ಯದ ಸೈಂಟ್ ಜೋಸೆಫ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಾಷ್ಟಮಿಯ ಪ್ರಯುಕ್ತ ಎಲ್ .ಕೆ. ಜಿ. ಮತ್ತು ಯು. ಕೆ. ಜಿ. ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆಯನ್ನು ಸೆ. 1 ರಂದು ಆಯೋಜಿಸಲಾಯಿತು.

ವಿವಿಧ ರೂಪದ ಕೃಷ್ಣ ವೇಷಧಾರಿ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಶಾಲಾ ಸಂಚಾಲಕರಾದ ರೆ| ಫಾ| ವಿನ್ಸೆಂಟ್ ಡಿ ಸೋಜಾರವರ ಮಾರ್ಗದರ್ಶನದಲ್ಲಿ ಆರಂಭಗೊಂಡ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಬಿನೋಮ ವಹಿಸಿಕೊಂಡಿದ್ದರು. ಹಾಗೂ ತೀರ್ಪುಗಾರರಾಗಿ ಶಾಲಾ ಶಿಕ್ಷಕರಾದ ಸಿ| ಮರ್ಸಿ ಹಾಗೂ ಬಾನುಪ್ರಕಾಶ್ ಸಹಕರಿಸಿದರು.

ಒಟ್ಟು ೩೫ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ ಕೆ ಜಿಯಿಂದ ಅಕ್ಷಜ್ ಎಂ. ಜಿ. ಪ್ರಥಮ, ವರ್ಷಿತ್ ಡಿ. ದ್ವಿತೀಯ, ಅಕ್ಷರ್ ತೃತೀಯ ಹಾಗೂ ಯು.ಕೆ.ಜಿ.ಯಿಂದ ಸಾಯಿನಕ್ಷತ್ರ ಪ್ರಥಮ, ಸ್ವರೂಪ್ ದ್ವಿತೀಯ, ಐಶಾನಿ ಶೆಟ್ಟಿ ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ. ಕಾರ್ಯಕ್ರಮವನ್ನು ಶಿಕ್ಷಕಿ ಆಶಾರವರು ನಿರೂಪಿಸಿದರು. ಉಳಿದಂತೆ ಶಿಕ್ಷಕಿಯರಾದ ಮರಿಯಾ, ರೇಷ್ಮ, ಸುಮತಿ, ಸಿ| ಮಿಲುಮ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.