ರೊ. ರವೀಂದ್ರ ಗೌಡರಿಂದ ದೋಲ್ಪಾಡಿ ಅಂಗನವಾಡಿಗೆ ಪಂಪ್ ಸೆಟ್ ಕೊಡುಗೆ

Advt_Headding_Middle
Advt_Headding_Middle

 

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ವತಿಯಿಂದ ದೋಲ್ಪಾಡಿ ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ವಿದ್ಯುತ್ ಪಂಪ್ ಸೆಟ್ ನ್ನು ಕೊಡುಗೆಯಾಗಿ ನೀಡಲಾಯಿತು.

 ಬೆಳ್ಳಾರೆ ರೋಟರಿ ಕ್ಲಬ್ ನ ಅಧ್ಯಕ್ಷ ಎ.ಕೆ‌. ಮಣಿಯಾಣಿ, ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್, ಶಾರ್ಜೆಂಟ್ ಆರ್ಮ್ ಪದ್ಮನಾಭ ಬೀಡು, ಪಂಪ್ ಸೆಟ್ ದಾನಿ ವಲಯ ಸೇನಾನಿ, ನಿವೃತ್ತ ಸೈನಿಕ ರವೀಂದ್ರ ಗೌಡ, ಕಿರಣ್ ಬೆಳ್ಳಾರೆ, ಚಾರ್ವಕ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾರಪ್ಪ ಶೆಟ್ಟಿ, ದೋಲ್ಪಾಡಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಲೋಕಯ್ಯ ಪರವ, ಸ್ಥಳೀಯರಾದ ಜಯಪ್ರಕಾಶ್ ದೋಲ್ಪಾಡಿ, ಒಡಿಯೂರು ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಅರುಣ ಶೆಟ್ಟಿ, ಊರವರು, ಅಂಗನವಾಡಿ ಪುಟಾಣಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೀಲಾವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.